ದಿಟ್ಟ ಹೋರಾಟಗಾರ್ತಿಯನ್ನು ಕಳೆದುಕೊಂಡ ರೈತ ಸಂಘಟನೆ ಬಡವಾಗಿದೆ :
ನಾಯಕಿ ಜಯಶ್ರೀ ಗುರವಣ್ಣವರಗೆ ರೈತ ಸಂಘದಿಂದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಂದೇನವಾಜ್ ಪಕಾಲಿ ಶೋಕ
ಮಹಾಲಿಂಗಪುರ 28: ಜಗತ್ತಿನ ಎಲ್ಲ ಜೀವ ರಾಶಿಗಳಿಗೆ ಅಣ್ಣ ನೀಡುವ ರೈತ ಆದರೆ ಒಬ್ಬ ರೈತ ಹುತ್ಮಾತ್ಮನಾದರೆ ದೇಶಕ್ಕೆ ತುಂಬಲಾರದ ನಷ್ಟ ಅದರಲ್ಲೂ ಒಬ್ಬಳು ರೈತ ಪರ ಹೋರಾಟಗಾರ್ತಿ ಹುತಾತ್ಮಳಾದರೆ ಭಾರತ ಮಾತೆಯ ಒಡಲು ಬರಿದಾದಂತೆ ಅದರಲ್ಲೂ ಕರ್ನಾಟಕದ ಬೆಳಗಾವಿ ಜಿಲ್ಲೆಯ ಪ್ರಮುಖ ರೈತ ಹಾಗೂ ಸಾಮಾಜಿಕ ಹೋರಾಟಗಾರ್ತಿ ಜಯಶ್ರೀ ಗುರವಣ್ಣವರ ಆಕಸ್ಮಿಕ ನಿಧನದಿಂದ ರಾಜ್ಯ ರೈತ ಸಂಘಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ಯುವ ರೈತ ಮುಖಂಡ ಬಂದೇನವಾಜ್ ಪಕಾಲಿ ಹೇಳಿದರು.
ಸ್ಥಳೀಯ ಚನ್ನಮ್ಮ ವೃತ್ತದಲ್ಲಿ ಆಯೋಜಿಸಿದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ರೈತರ ಪರ ಇರುವ ಏಕೈಕ ಗಟ್ಟಿ ಧ್ವನಿಯಾಗಿದ್ದಳು. ಎಲ್ಲೇ ಹೋರಾಟವಿರಲಿ ಅಲ್ಲಿ ಒಂದು ಮಹಿಳಾ ಧ್ವನಿಯಾಗಿ ಇರುತ್ತಿದ್ದ ಮಹಿಳೆ ಇತ್ತೀಚಿಗೆ ಅನಾರೋಗ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ ಎಂದು ಕುಟುಂಬ ಮೂಲ ಸ್ಪಷ್ಟಪಡಿಸಿದೆ. ಕಬ್ಬಿನ ಬೆಲೆ, ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಹೊಲಗಳಿಗೆ ರಸ್ತೆ, ನರೇಗಾ ಯೋಜನೆಯ ಸಮರ್ಕ ಅನುಷ್ಠಾನ, ಕಾರ್ಮಿಕರ ಬದುಕು ಬವನೆಗಳ ಬಗೆಗೆ ಜಯಶ್ರೀ ತೀವ್ರ ಹೋರಾಟ ನಡೆಸಿ ಗಮನ ಸೆಳೆದಿದ್ದರು. ನಡುವಯಸ್ಸಿನಲ್ಲಿ ಜಯಶ್ರೀ ಅವರ ಸಾವು ರೈತ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದರು.
ನೇಕಾರ ಸಂಘದ ರಾಜಾಧ್ಯಕ್ಷ ಶಿವಲಿಂಗ ಟಿರ್ಕಿ ಮಾತನಾಡಿ ಪ್ರತಿಯೊಬ್ಬ ಹೋರಾಟಗಾರರ ಜೀವನ ಮುಳ್ಳಿನ ಹಾದಿ ಆಗಿರುತ್ತದೆ. ಅವರಿಗೆ ಅವರ ಹೋರಾಟದಲ್ಲಿ ಎಲ್ಲೇ ಆಗಲಿ ಯಾರಿಗಾದರೂ ತೊಂದರೆ ಆದರೆ ಅವರಿಗೆ ಅದನ್ನು ಸರಿಪಡಿಸುವವರೆಗೆ ನಿದ್ರೆ ಬರುವುದಿಲ್ಲ ಊಟ ಸೇರುವುದಿಲ್ಲ ಯಾರಿಗೆ ನೋವಾದರೂ ಅದು ತಮಗೆ ಆಗಿದೆ ಅನ್ನುವ ಮನಸ್ಥಿತಿ ಹೋರಾಟಗಾರರದ್ದು ಆಗಿರುತ್ತದೆ. ಒಬ್ಬ ಮಹಿಳಾ ಹೋರಾಟಗಾರತಿ ಹುಟ್ಟುವುದು ಅಪರೂಪ. ಅದರಲ್ಲೂ ರಾಜ್ಯಮಟ್ಟದಲ್ಲಿ ಬೆಳೆದು ಇಡೀ ರಾಜ್ಯದ ರೈತರ ಧ್ವನಿಯಾಗಿದ್ದರು. ಅವರ ಹೋರಾಟದ ಸ್ಫೂರ್ತಿ ನಮಗೆಲ್ಲ ಮಾದರಿಯಾದುದು ಎಂದರು.
ಸಂಗಪ್ಪ ಹಳ್ಳೂರ, ರಾಜೇಂದ್ರ ಮಿರ್ಜಿ, ಲಕ್ಷಣ ಬ್ಯಾಳಿ, ರಾಜು ಕುಕ್ಕುಗೋಳ, ಮಲ್ಲು ಕಾಗಿ, ಸಂಗಮೇಶ, ಗಿರಮಲ್ಲ ಕೈಸೋಲಗಿ ಸೇರಿ ಹಲವಾರು ಜನ ಇದರಲ್ಲಿ ಭಾಗಿಯಾಗಿದ್ದರು.