"ಎರಡು ಮಕ್ಕಳ" ನೀತಿ ಜಾರಿಗೆ ಹೊಸ ಕಾಯ್ದೆ ರೂಪಿಸಬೇಕು; ಅಖಿಲ ಭಾರತೀಯ ಅಖಾರ ಪರಿಷತ್ ಆಗ್ರಹ
ಪ್ರಯಾಗ್ ರಾಜ್, ಜ 19 : ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸಲು "ಎರಡು ಮಕ್ಕಳ ನೀತಿ" ಜಾರಿಗೊಳಿಸುವಂತೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಸಾಧು ಸಂತರ ಅತ್ಯುನ್ನತ ವೇದಿಕೆಯಾಗಿರುವ ಅಖಿಲ ಭಾರತೀಯ ಅಖಾರ ಪರಿಷತ್ ಬೆಂಬಲಿಸಿದ್ದು "ಇಬ್ಬರ ಮಕ್ಕಳ" ನಿಯಮವನ್ನು ಬೆಂಬಲಿಸಿದೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಪರಿಷತ್ ಮುಖ್ಯಸ್ಥ ಮಹಂತ ನರೇಂದ್ರ ಗಿರಿ, ದೇಶದಲ್ಲಿ ಎರಡು ಮಕ್ಕಳ ನೀತಿ ಜಾರಿಗೊಳಿಸಬೇಕೆಂಬ ಆರ್ ಎಸ್ ಎಸ್ ಬೇಡಿಕೆಯನ್ನು ಸಾಧು ಸಂತರು ಸಂಪೂರ್ಣವಾಗಿ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಯಾವುದೇ ಕುಟುಂಬ ಎರಡಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೊಂದುವುದನ್ನು ನಿರ್ಬಂಧಿಸಲು ಕೇಂದ್ರ ಸಕರ್ಾರ ಹೊಸ ಕಾಯ್ದೆ ತರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಇದಕ್ಕೂ ಮೊದಲು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಮೊರಾದಾಬಾದ್ ನಲ್ಲಿ ಶನಿವಾರ ಆಯೋಜಿಸಿದ್ದ ಸಭೆಯೊಂದರಲ್ಲಿ, ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸಲು ಎರಡು ಮಕ್ಕಳ ನೀತಿ ಜಾರಿಗೊಳಿಸಬೇಕಾಗಿದೆ ಎಂದು ಹೇಳಿದ್ದರು.
ಆದರೆ, ಇದು ಆರ್ ಎಸ್ ಎಸ್ ನ ಅಭಿಪ್ರಾಯವಾಗಿದೆ. ಈ ಸಂಬಂಧ ಯಾವುದೇ ನಿಧರ್ಾರ ಕೈಗೊಳ್ಳುವುದು ಸಕರ್ಾರಕ್ಕೆ ಬಿಟ್ಟ ವಿಷಯ ಎಂದು ಸ್ಪಷ್ಟಪಡಿಸಿದ್ದರು.
ಆರ್ ಎಸ್ ಎಸ್ ಮುಖ್ಯಸ್ಥರು ವ್ಯಕ್ತಪಡಿಸಿರುವ ವಿಚಾರಗಳನ್ನು ನಾವು ಬೆಂಬಲಿಸಲಿದ್ದೇವೆ. ಈ ವಿಷಯದಲ್ಲಿ ಅಖಾರ ಪರಿಷತ್ ಅವರೊಂದಿಗೆ ನಿಲ್ಲಲಿದೆ. ಈ ವಿಷಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸಾಧು ಸಂತರಿಗೆ ಮಹಂತ ನರೇಂದ್ರ ಗಿರಿ ಮನವಿ ಮಾಡಿದ್ದಾರೆ.
ಕುಟುಂಬವೊಂದು 12-13 ಮಕ್ಕಳನ್ನು ಹೊಂದುವುದು ದೇಶದ ಆಥರ್ಿಕ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗುತ್ತಿರುವುದು ದುರದೃಷ್ಟಕರ, ಇದು ದೇಶದ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಗಿರಿ ಹೇಳಿದರು.
ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಂಚಾಯಿತ್ ಚುನಾವಣೆಗಳಲ್ಲಿ ಎರಡು ಮಕ್ಕಳಿಗಿಂತೂ ಹೆಚ್ಚು ಮಕ್ಕಳು ಹೊಂದಿರುವ ಅಭ್ಯಥರ್ಿಗಳ ಸ್ಪರ್ಧಿಗೆ ನಿಷೇಧ ವಿಧಿಸಲಾಗಿದೆ. ಜನಸಂಖ್ಯೆ ಹೆಚ್ಚಳ ಪ್ರತಿಯೊಂದು ವಲಯದಮೇಲೂ ಸಮಸ್ಯೆ ಸೃಷ್ಟಿಸುತ್ತಿರುವ ಹಿನ್ನಲೆಯಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕಾಯ್ದೆ ಆಗತ್ಯವಾಗಿದೆ ಎಂದು ಮಹಂತ ನರೇಂದ್ರ ಗಿರಿಹೇಳಿದರು.