ಲೇಖನಗಳು

ಗ್ರಾಹಕರ ಹಕ್ಕುಗಳ ಅಗತ್ಯತೆ

ಗ್ರಾಹಕರ ಹಕ್ಕುಗಳ ಅಗತ್ಯತೆ

ಪ್ರತಿವರ್ಷ ಡಿಸೆಂಬರ್‌-24 ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಚರಿಸಲಾಗುತ್ತಿದೆ. ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ರಾಷ್ಟ್ರಾದ್ಯಾಂತ ಏರಿ​‍್ಡಸಲಾಗುವುದು. ಈ ದಿನದ ಇತಿಹಾಸವು ಆಸಕ್ತಿದಾಯಕವಾಗಿದೆ. “ಅಠಣಟಜಢಿ ಓಚಿಣಠಚಿಟ” ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವನ್ನು ಪ್ರತಿ ವರ್ಷ ಬೇರೆ ಬೇರೆ (ಥೀಮ್) ವಿಷಯಗಳೊಂದಿಗೆ ಆಯೋಜಿಸಲಾಗುವುದು. 2022ನೇ ಸಾಲಿನಲ್ಲಿ “ಗ್ರಾಹಕರ ಆಯೋಗಗಲ್ಲಿ ಪರಿಣಾಮಕಾರಿ ಪ್ರಕರಣಗಳ ಇತ್ಯರ್ಥ” (ಇಜಿಜಿಜಛಿಣತಜ ಜಠಿಚಿಟ ಠ ಛಿಛಿ ಟಿ ಅಠಣಟಜಡಿ ಅಠಟಠ ಎಂಬ ಥೀಮ್‌ನೊಂದಿಗೆ ಆಚರಿಸಲಾಗುವುದು.  

1960ರಲ್ಲಿ ಸ್ಥಾಪನೆಯಾದ “ಅಠಣಟಜಢಿ ಋಣಜಡಿಟಿಚಿಣಠಚಿಟ” ಗ್ರಾಹಕ ಸಂಸ್ಥೆಯ ಜಾಗತಿಕ ಒಕ್ಕೂಟವಾಗಿದೆ ಮತ್ತು ಗ್ರಾಹಕರ ಸ್ವತಂತ್ರೆ, ಪ್ರಭಾವಶಾಲಿಯ ಧ್ವನಿಯಾಗಿ ಸ್ಥಾಪಿಸಲಾಯಿತು. 1962ರ ಮಾರ್ಚ್‌-15 ರಂದು ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷ ಜಾನ್ ಫಿಟ್ ಗೆರಾಲ್ಡ್‌ ಕೆನಡಿ ಯು.ಎಸ್ ಕಾಂಗ್ರೆಸ್‌ಗೆ ಮಾಡಿದ ಭಾಷಣವನ್ನು ಗೌರವಿಸುತ್ತದೆ. ಈ ಭಾಷಣದಲ್ಲಿ ನಾಲ್ಕು ಮೂಲಭೂತ ಗ್ರಾಹಕರ ಹಕ್ಕುಗಳನ್ನು ರೂಪಿಸಿದರು. ಬಲಸುರಕ್ಷತೆಗೆ ಮಾಹಿತಿ ಪಡೆಯುವ ಹಕ್ಕು, ಆಯ್ಕೆ ಮಾಡುವ ಹಕ್ಕು ಮತ್ತು ಕೇಳುವ ಹಕ್ಕು ಪ್ರತಿ ಪರ್ಷ ನಿರ್ಧಿಷ್ಟ ತೀಮ್‌ನೊಂದಿಗೆ ಆಚರಿಸಲಾಗುತ್ತಿದೆ. ಅದರಂತೆಯೇ ಭಾರತದಲ್ಲಿಯು ಸಹ ಪ್ರತಿ ವರ್ಷ ಡಿಸೆಂಬರ್‌-24 ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಚರಿಸಲಾಗುವುದು.   

ವಸ್ತುಗಳನ್ನು ಸೇರು, ಪಾವು ಮತ್ತು ತಕ್ಕಡಿಗಳಿಂದ ಅಳೆದು ಮಾರಾಟ ಮಾಡುವ ಕಾಲದಿಂದ ಹಿಡಿದು, ಡಿಜಿಟಲ್ ಮಾಪನಗಳಿಂದ ಅಳತೆ ಮಾಡುವ ಈ ಕಾಲದವರೆಗೂ ಗ್ರಾಹಕರು ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗುತ್ತಿದ್ದಾರೆ. ಹೆಚ್ಚಿನ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುವುದಿಲ್ಲ.  ಕಾರಣ, ಈ ದಿನವನ್ನು ಆಚರಿಸುವ ಮೂಲಕ ಗ್ರಾಹಕರು ರಕ್ಷಣೆಯನ್ನು ಕೋರುವ ಹಕ್ಕಿನ ಬಗ್ಗೆ ಅರಿವು ಮೂಡಿಸಲಾಗುವುದು. ಗ್ರಾಹಕರು ಹಕ್ಕುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ಗ್ರಾಹಕರ ಹಕ್ಕುಗಳನ್ನು ಗ್ರಾಹಕರು ತಿಳಿದಿದ್ದರೆ ಮಾತ್ರ, ಮೂರ್ಖರಾಗುತ್ತಿದ್ದೇವೆಯೋ ಇಲ್ಲವೆ ಮೋಸ ಹೋಗುತ್ತಿದ್ದೇವೆಯೋ ಎಂದು ಗುರುತಿಸಬಹುದು.  ಗ್ರಾಹಕರ ಹಕ್ಕಿಗೆ ವಿರುದ್ಧವಾಗಿ ಯಾವುದೇ ಉತ್ಪನ್ನ ಅಥವಾ ಸೇವೆ, ಖರೀದಿಯ ವಿರುದ್ಧ ಗ್ರಾಹಕರು ಧ್ವನಿ ಎತ್ತಬಹುದು ಮತ್ತು ಕಾನೂನು ಕ್ರಮ ತೆಗೆದುಕೊಳ್ಳಬಹುದು. 

ಗ್ರಾಹಕರ ಹಕ್ಕುಗಳು:ಯಾವುದೇ ಉತ್ಪನ್ನ ಹಾಗೂ ಸರಕುಗಳು ಮತ್ತು ಸೇವೆಯನ್ನು ಖರೀದಿಸುವ ಪ್ರತಿಯೊಬ್ಬ ವ್ಯಕ್ತಿಯು ಗುಣಮಟ್ಟ, ಶುದ್ಧತೆ, ಮತ್ತು ಬೆಲೆಯ ಮಾಹಿತಿಯನ್ನು ಹೊಂದುವ ಹಕ್ಕನ್ನು ಹೊಂದಿರುತ್ತಾನೆ.  

1986ರಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೆ ತಂದಾಗ ಆನ್‌-ಲೈನ್ ಮಾರುಕಟ್ಟೆ ಇರಲಿಲ್ಲ, ಆಗ ನೇರ ಮಾರುಕಟ್ಟೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಆನ್‌-ಲೈನ್ ಮಾರುಕಟ್ಟೆ ಬಂದಿವೆ. ಆ ಕಾಯ್ದೆಯ ನೂನ್ಯತೆಯನ್ನು ಸರಿಪಡಿಸುವ ಉದ್ದೇಶದಿಂದ 2019ರಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ತಂದಿದ್ದು, 2020ರಲ್ಲಿ ಜಾರಿಗೆ ತರಲಾಗಿದೆ.   

ರಾಜ್ಯದಲ್ಲಿ ಬಡ್ಡಿ ದರ ಇಳಿಸಲು ಮಾರ್ಗಸೂಚಿ ಇದೆ, ಮಾರ್ಗಸೂಚಿಯಲ್ಲಿ ಇಷ್ಟೆ ಬಡ್ಡಿ ಎಂದು ಹೇಳಲಾಗಿದೆ. ಹೆಚ್ಚಿನ ಬಡ್ಡಿ ಪಡೆದ ಪ್ರಕರಣಗಳಲ್ಲಿ ಲೇವಾದೇವಿ, ಗಿರವಿ ಅಂಗಡಿಗಳಿಗೆ ಸಂಬಂಧಿಸಿದ್ದಾದರೆ ಗ್ರಾಹಕರ ಆಯೋಗದಲ್ಲಿ ನ್ಯಾಯ ಕೋರಬಹುದು. ಹಣ ಪಾವತಿ ಮಾಡಿ ಖರೀದಿಸಿದ ಯಾವುದೇ ವಸ್ತು ಅಥವಾ ಸೇವೆಯಲ್ಲಿ ಲೋಪದೋಷಗಳು ಇದ್ದರೆ ಅದನ್ನು ಪ್ರಶ್ನಿಸುವ ಅಧಿಕಾರ ಗ್ರಾಹಕರಿಗೆ ಕೊಡಲಾಗಿದೆ. ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಯಿಂದ ಶೋಷಣೆ ಕಡಿಮೆಯಾಗುತ್ತದೆ.  ಸೇವೆಯಲ್ಲಿ ಲೋಪ ಕಂಡುಬಂದರೆ, ತಯಾರಕರು ಅಥವಾ ಮಾರಾಟಗಾರರ ವಿರುದ್ಧ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಳಿಗೆ ದೂರು ಸಲ್ಲಿಸಿ ಪರಿಹಾರ ಪಡೆಯಬಹುದು. 

ಗ್ರಾಹಕರು ಖುದ್ದಾಗಿ ತಾವೇ ತಮ್ಮ ಸಮಸ್ಯೆಗಳ ಕುರಿತು ಆಯೋಗಕ್ಕೆ ದೂರು ನೀಡಿ ಪರಿಹಾರ ಪಡೆಯಬಹುದು. ವಕೀಲರ ಮೂಲಕವೇ ದೂರು ಸಲ್ಲಿಸಿ ಪ್ರಕರಣ ಬಹೆಹರಿಸಿಕೊಳ್ಳಬೇಕೆಂಬ ನಿಯಮವೇನು ಇಲ್ಲ.  ಸಿ.ಪಿ.ಸಿ ಯಲ್ಲಿ ಇರುವ ಕಠಿಣ ನಿಯಮವಾಗಲೀ, ಸಾಕ್ಷಾದಾರ ಕಾಯ್ದೆ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಬೇಕಾಗಿಲ್ಲ.  ಗ್ರಾಹಕರ ಆಯೋಗಗಳಿಗೆ ಅವುಗಳದೇ ಆದ ಅಧಿಕಾರ ಹಾಗೂ ಸತ್ಯಾನ್ವೇುಷಣೆಯ ಹಕ್ಕು ನೀಡಲಾಗಿದೆ.  ಪಾಟೀ ಸವಾಲು ನಡೆಸುವ ಅವಶ್ಯಕತೆಯಿಲ್ಲ. ಗ್ರಾಹಕರ ಹಾಗೂ ಮಾರಾಟಗಾರರು ತಮ್ಮ ಲಿಖಿತ ಹೇಳಿಕೆಗಳನ್ನು ಪ್ರಮಾಣಪತ್ರದ ಮೂಲಕ ದಾಖಲಿಸಬಹುದಾಗಿದೆ. ಇದರಿಂದ ಗ್ರಾಹಕರಿಗೆ ಸುಲಭ ಹಾಗೂ ತ್ವರಿತವಾಗಿ ನ್ಯಾಯ ಸಿಗುತ್ತದೆ.  

ಕಲಬೆರಕೆ, ನಕಲಿ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ದೂರು ಹಾಗು ಸುಳ್ಳು ಜಾಹಿರಾತುಗಳಲ್ಲಿ ಭಾಗವಹಿಸುವ ರೂಪದರ್ಶಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.   

ನಮ್ಮ ಜನರಲ್ಲಿ ಹೇಗೋ ನಡೆಯುತ್ತದೆ ಎನ್ನುವ ರಾಜೀ ಮನೋಭಾವನೆ ಹೆಚ್ಚಾಗಿದೆ.  ಬಿಲ್ ಕೇಳದೇ ಇರುವುದು, ಚಿಲ್ಲರೆ ಪಡೆಯದೇ ಇರುವುದು ಫ್ಯಾಷನ್ ಆಗಿದೆ.  ಇದರಿಂದ ಗ್ರಾಹಕರು ಶೋಷಣೆಗೆ ಒಳಗಾಗುತ್ತಾರೆ.  ಕಾರಣ ವಸ್ತು ಅಥವಾ ಸೇವೆಗಳನ್ನು ಪಡೆದಾಗ ರಸೀದಿ ಪಡೆಯಬೇಕು.  ಆಗ ಲೋಪ ಕಂಡುಬಂದಾಗ ಪರಿಹಾರ ಪಡೆಯಲು ಅನುಕೂಲವಾಗುತ್ತದೆ.   

ದೂರು ನೀಡುವ ಅಧಿಕಾರ: ಕಾನೂನುಬದ್ಧವಾಗಿ ನೋಂದಾಯಿಸಕೊಂಡ ಸಂಘ, ಕೇಂದ್ರ, ರಾಜ್ಯ ಸರ್ಕಾರಗಳು, ಕೇಂದ್ರದ ಪ್ರಾಧೀಕಾರ ಮತ್ತು ಸಾಮೂಹಿಕ ಅಧಿಕಾರ ಹೊಂದಿದ ಒಬ್ಬ ಅಥವಾ ಹೆಚ್ಚಿನ ಗ್ರಾಹಕರು, ಗ್ರಾಹಕ ಮೃತಪಟ್ಟರೆ ಅವನ ವಾರಸುದಾರರು ಇಲ್ಲವೇ ಪ್ರತಿನಿಧಿಗಳು, ಅಪ್ರಾಪ್ತ ಗ್ರಾಹಕ ಇದ್ದರೆ ಅವನ ಪಾಲಕರು ಇಲ್ಲವೇ ಕಾನೂನುಬದ್ಧ ಸಂರಕ್ಷಣದಾರ ದೂರು ಸಲ್ಲಿಸುವ ಅಧಿಕಾರ ಹೊಂದಿದ್ದಾನೆ.   

ಗ್ರಾಹಕರ ಹಕ್ಕುಗಳು: ಸರಕು ಮತ್ತು ಸೇವೆಗಳು ಮನುಷ್ಯನ ಜೀವ ಇಲ್ಲವೆ ಆಸ್ತಿಗೆ ಅಪಾಯಕಾರಿ ಇದ್ದಾಗ, ಸಂರಕ್ಷಿಸುವ ಹಕ್ಕು, ಸರಕಿನ ಗುಣಮಟ್ಟ, ಪ್ರಮಾಣ, ಪರಿಶುದ್ಧತೆ, ಬೆಲೆಯ ಬಗ್ಗೆ ಗ್ರಾಹಕನಿಗೆ ಶೋಷಣೆಯಾದಾಗ ಸಂರಕ್ಷಿಸುವ ಹಕ್ಕು ಗ್ರಾಹಕನ ಆಸಕ್ತಿ, ವಿಚಾರಣೆಯ ಹಕ್ಕು, ಶೋಷಣೆಯಾದಾಗ ಪರಿಹಾರ ಪಡೆಯುವ ತಿಳುವಳಿಕೆಯ ಹಕ್ಕುಗಳನ್ನು ಹೊಂದಿರುತ್ತಾರೆ.   

ಅಧಿಕಾರ ವ್ಯಾಪ್ತಿ: ಸರಕುಗಳ ಮೌಲ್ಯ ಮತ್ತು ಸೇವೆಯ ನೂನ್ಯತೆ ಬಗ್ಗೆ ಪರಿಹಾರ ಪಡೆಯಬೇಕಾದರೆ ರೂ.50 ಲಕ್ಷದವರೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ, ರೂ.2 ಕೋಟಿವರೆಗೆ ಪರಿಹಾರ ಪಡೆಯಲು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮತ್ತು 2 ಕೋಟಿಗಿಂತ ಹೆಚ್ಚಿಗೆ ಪರಿಹಾರ ಪಡೆಯಬೇಕಾದರೆ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ಪರಿಹಾರ ಪಡೆಯುವ ವ್ಯಾಪ್ತಿ ಇರುತ್ತದೆ.  ಆಯೋಗಗಳಲ್ಲಿ ಒಬ್ಬರು ಅಧ್ಯಕ್ಷರು, ಒಬ್ಬ ಪುರುಷ ಸದಸ್ಯ ಮತ್ತು ಒಬ್ಬ ಮಹಿಳಾ ಸದಸ್ಯಣಿ ಕಾರ್ಯ ನಿರ್ವಹಿಸುತ್ತಾರೆ.  

ಗ್ರಾಹಕ ಆಯೋಗ ದೂರನ್ನು ಸ್ವೀಕರಿಸಿದ 21 ದಿನಗಳಲ್ಲಿ ದೂರನ್ನು ಸ್ವೀಕರಿಸುವ ಬಗ್ಗೆ ನಿರ್ಣಯಿಸಬೇಕಾಗುತ್ತದೆ.  ನೋಟಿಸ್ ಜಾರಿಯಾದ 45 ದಿನಗಳಲ್ಲಿ ಎದುರುಪಕ್ಷದವರು ತಮ್ಮ ತಕರಾರನ್ನು ಸಲ್ಲಿಸುವುದು ಕಡ್ಡಾಯವಾಗಿದೆ.  ಒಟ್ಟಿನಲ್ಲಿ ನ್ಯಾಯಾಲಯಗಳಿಗಿಂತ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳಲ್ಲಿ ಕಡಿಮೆ ಖರ್ಚಿನಲ್ಲಿ ಮತ್ತು ಕಡಿಮೆ ವೇಳೆಯಲ್ಲಿ ಶೀಘ್ರ ನ್ಯಾಯ ಲಭಿಸುವುದರಿಂದ ಪ್ರತಿಯೊಬ್ಬ ಗ್ರಾಹಕರು ನೂತನ ಕಾಯ್ದೆಯ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. 

ಮಧ್ಯಸ್ಥಿಕೆ:- ಶೀಘ್ರ ಪರಿಹಾರ ಗ್ರಾಹಕರಿಗೆ ತಲುಪುವ ಉದ್ದೇಶದಿಂದ, ಪ್ರತಿಯೊಂದು ಆಯೋಗಗಳಲ್ಲಿ ಮಧ್ಯಸ್ಥಗಾರರನ್ನು (ಕನ್ಸಿಲೇಟರ್) ರನ್ನು ನೇಮಿಸಲಾಗಿದೆ.  ಉಭಯ ಪಕ್ಷಗಾರರ ಒಪ್ಪಿಗೆ ಮೇರೆಗೆ ರಾಜಿ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮಧ್ಯಸ್ಥಗಾರರಿಗೆ ಜವಾಬ್ದಾರಿ ನೀಡಲಾಗುವುದು. ಮಧ್ಯಸ್ಥಗಾರ ಉಭಯ ಪಕ್ಷಗಾರರ ಸಮಸ್ಯೆ ಆಲಿಸಿ, ಇಬ್ಬರಿಗೂ ಒಪ್ಪಿಗೆ ಆಗುವ ಒಂದು ಪ್ರಸ್ತಾಪ ನೀಡಿ, ಸದರಿ ಪ್ರಸ್ತಾವನೆಗೆ ಪಕ್ಷಗಾರರು ಒಪ್ಪಿಗೆ ನೀಡಿದರೆ, ಆ ಬಗ್ಗೆ ವಿವರವಾದ ವರದಿಯನ್ನು ಆಯೋಗಕ್ಕೆ ನೀಡುತ್ತಾರೆ. ಆಯೋಗ ಪುನ: ಉಭಯ ಪಕ್ಷಗಾರರನ್ನು ಸದರಿ ವರದಿಗೆ ಒಪ್ಪಿಗೆ ಇದ್ದ ಬಗ್ಗೆ ಖುದ್ದಾಗಿ ವಿಚಾರಿಸಿ, ಒಪ್ಪಿಗೆಯನ್ನು ಖಾತರಿಪಡಿಸಿಕೊಂಡು ವರದಿಯನ್ನು ಸ್ವೀಕರಿಸಿ ಅವಾರ್ಡ ಮಾಡಲಾಗುವುದು. ಇಂತಹ ಅವಾರ್ಡನ್ನು ಪ್ರಶ್ನಿಸಿ ಯಾವುದೇ ಆಯೋಗದ ಮುಂದೆ ಮೇಲ್ಮನವಿ ಮಾಡಲು ಅವಕಾಶ ಇರುವುದಿಲ್ಲ. ಮಧ್ಯಸ್ಥಿಕೆ ಅವಾರ್ಡ ಅಂತಿಮವಾಗಿದ್ದು, ಉಭಯ ಪಕ್ಷಗಾರರಿಗೆ ಬಂಧನಕಾರ ಇರುತ್ತದೆ. ಒಂದು ವೇಳೆ, ಅವಾರ್ಡಿನ ಷರತ್ತಿನ ಪ್ರಕಾರ ಪಕ್ಷಗಾರರು ನಡೆದುಕೊಳ್ಳದೇ ಇದ್ದರೆ, ಬಾಧಿತ ಪಕ್ಷಗಾರ ಪುನ: ಆಯೋಗಕ್ಕೆ ಅವಾರ್ಡನ್ನು ಜಾರಿಗೊಳಿಸಲು ಜಾರಿ ಅರ್ಜಿ ಸಲ್ಲಿಸಿ, ಪರಿಹಾರ ಪಡೆಯಲು ಅವಕಾಶ ಇದೆ. ಮಧ್ಯಸ್ಥಗಾರ ಮೂಲಕ ಪರಸ್ಪರ ಒಪ್ಪಿಗೆ ಮೇರೆಗೆ ವ್ಯಾಜ್ಯ ಪರಿಹರಿಸಿಕೊಂಡರೆ, ವಿನಾಕಾರಣ ಆಯೋಗಕ್ಕೆ ಅಲೆದಾಡುವುದನ್ನು ತಪ್ಪಿಸಿ, ಹಣ ಮತ್ತು ಸಮಯ ಉಳಿತಾಯವಾಗಿ ಶೀಘ್ರ ನ್ಯಾಯ ಪಡೆಯಲು ಮಧ್ಯಸ್ಥಿಕೆ ಗ್ರಾಹಕರಿಗೆ ಸಂಜೀವಿಣಿಯಾಗಿದೆ. ಶೋಷಿತ, ವಂಚತಿ ಹಾಗೂ ನೊಂದ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಪಡೆದು ನೆಮ್ಮದಿ ಜೀವನ ಪಡೆದರೆ, ಗ್ರಾಹಕರ ದಿನಾಚಾರಣೆಯ ಆಶೆಯ ಸ್ವಾರ್ಥಕವಾಗುವುದು.  

- ಡಿ. ವೈ. ಬಸಾಪೂರ 

ಗದಗ 

- * * * - 


ಸುದ್ದಿ ಓದಿ