ಹಗರಿಬೊಮ್ಮನಹಳ್ಳಿ

ಮೃತ್ಯ ಕೂಪಕ್ಕೆ ತಳ್ಳುವ ಮಾಹಾ ಮಾರಿ ಏಡ್ಸ್‌ನಿಂದ ಎಚ್ಚರ ಅವಶ್ಯಕ: ಕೃಷ್ಣಮೂರ್ತಿ

ಮೃತ್ಯ ಕೂಪಕ್ಕೆ ತಳ್ಳುವ ಮಾಹಾ ಮಾರಿ ಏಡ್ಸ್‌ನಿಂದ ಎಚ್ಚರ ಅವಶ್ಯಕ: ಕೃಷ್ಣಮೂರ್ತಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 19: ಏಡ್ಸ್‌/ಹೆಚ್‌ಐವಿ ಸೊಂಕು ಮನುಷ್ಯನನ್ನು ಹಂತ ಹಂತವಾಗಿ ಮೃತ್ಯು ಕೂಪಕ್ಕೆ ತಳ್ಳುವ ಭಯಾನಕ ವೈರಸ್ ಆಗಿದೆ, ಇದರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವುದು ಅವಶ್ಯಕ ಎಂದು ತಂಬ್ರಹಳ್ಳಿ  ಪಿಡಿಒ ಎಂ. ಕೃಷ್ಣಮೂರ್ತಿ ಹೇಳಿದರು. 

ತಾಲೂಕಿನ ತಂಬ್ರಹಳ್ಳಿಯಲ್ಲಿ ಏಡ್ಸ್‌ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕದ ಸಂಯುಕ್ತಾಶ್ರಯದಲ್ಲಿ  ಜಾನಪದ ತಂಡಗಳ ಮೂಲಕ ಹೆಚ್‌ಐವಿ/ ಏಡ್ಸ್‌ ಜಾಗೃತಿ ಅಂದೋಲನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. 

 ಈ ಮಾರಕ ವೈರಸ್ ಹೆಚ್‌ಐವಿ ಸೊಂಕಿತರಿಗೆ ಬಳಸಿದ ಚುಚ್ಚುಮದ್ದ ಬಳಸುವುದು, ಮುಂಜಾಗ್ರತಾ ಕ್ರಮಗಳಿಲ್ಲದೆ ದೈಹಿಕ ಸಂಪರ್ಕ, ಸೊಂಕಿತರ ರಕ್ತ ಪಡೆಯುವುದರಿಂದ ಹರಡುತ್ತದೆ. ಈ ಭಯಾನಕ ವೈರಸ್ ಸೊಂಕಿತನನ್ನು ಒಂದೇ ಸಾರೆ ಕೊಲ್ಲುವುದಿಲ್ಲ, ಇದು ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತಾ ಸಾವಿನ ದವಡೆಗೆ ತಳ್ಳುತ್ತದೆ, ಕ್ರಮೇಣ ಹತ್ತಾರು ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ, ಇಂದಿನ ಹದಿಹರೆಯದವರೇ ಇದಕ್ಕೆ ಹೆಚ್ಚು ತುತ್ತಾಗುತ್ತಿದ್ದು ಇದರ ಬಗ್ಗೆ ಎಚ್ಚರ ವಹಿಸುವುದರ ಜೊತೆ ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕು ಎಂದರು. 

ಮರಿಯಮ್ಮನಹಳ್ಳಿಯ ಲಲಿತಾ ಕಲಾ ರಂಗ ತಂಡದ ಮಾ.ಬ.ಸೋಮಣ್ಣ ಇವರ ಬಳಗದ ಕಲಾವಿದರು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ ಸಾರ್ವಜನಿಕರಿಗೆ ಏಡ್ಸ್‌ ತಡೆಗಟ್ಟುವ ಮುಂಜಾಗ್ರತ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. 

 ಗ್ರಾಪಂ ಸದಸ್ಯ ಆನೇಕಲ್ ದೊಡ್ಡಬಸಪ್ಪ, ತಂಬ್ರಹಳ್ಳಿ ಪ್ರಾ.ಆ.ಕೇಂದ್ರದ ಡಾ.ಮೋಹನ್, ನಾಗರಾಜ್, ಕ್ಷೇತ್ರ ಆರೋಗ್ಯ ಅಧಿಕಾರಿ ಯು ಯಮುನಾ, ಸ್ಟಾಫನರ್ಸ ನಾಗರತ್ನ, ಆಶಾ ಕಾರ್ಯಕರ್ತೆಯರಾದ ಎಂ.ಮಂಗಳ, ಕೆ.ಸುರೇಖಾ, ಮುಂಡರಗಿ ಲೀಲಾವತಿ, ಜಿ.ಪಾರ್ವತಿ, ನಿರ್ಮಲ, ಕಲಾವತಿ, ಪಂಚಾಯಿತಿ ಸಿಬ್ಬಂದಿ ಕೊಟ್ರೇಶ್ ಕಾಶೀನಾಯ್ಕರ್, ಕನಕೇರಿ ನಾಗಭೂಷಣ, ಶಿವುಕುಮಾರ್, ಗ್ರಂಥಾಲಯ ಮೇಲ್ವಿಚಾರಕ ಟಿ.ಪಾಂಡುರಂಗಪ್ಪ ಇತರರು ಇದ್ದರು. 


ಸುದ್ದಿ ಓದಿ