ರಾಘವೇಂದ್ರರೆಂಬ ಹೆಸರು ಮನುಕುಲದ ಮಹಾ ಉಸಿರು: ಮದ್ವಾಚಾರ್ಯ
ಮಹಾಲಿಂಗಪುರ : ಅಪಾರ ಭಕ್ತರ ಆರಾಧ್ಯ ದೈವ ಕಲಿಯುಗದ ಕಾಮಧೇನು ರಾಘವೇಂದ್ರ ಸ್ವಾಮಿಗಳು ಸತ್ಯ ಧರ್ಮದ ಸಂರಕ್ಷಕರಾಗಿದ್ದಾರೆ. ಈ ಜಗತ್ತಿನಲ್ಲಿ ಜಾತಿ, ಭಾಷೆ, ಅತೀತರಾದ ಗುರುಗಳು ತಮ್ಮ ದಿವ್ಯ ಶಕ್ತಿಯ ಮೂಲಕ ಕೋಟ್ಯಾನು ಕೋಟಿ ಭಕ್ತರ ಹೃದಯದಲ್ಲಿ ಅಸಿನರಾಗಿದ್ದಾರೆ. ಅರ್ಚಕರಾದ ಶ್ರೀ ಮದ್ವಾಚಾರ್ಯರು ಹೇಳಿದರು.
ಅವರು ಮಹಾಲಿಂಗಪುರದ ಎ ಪಿ ಎಂ ಸಿ ಎದುರುಗಡೆ ಇರುವ ಉತ್ತರಾಧಿಮಠದ ಅಧಿನದಲ್ಲಿರುವ ರಾಯರ ಮಠದಲ್ಲಿ ರಾಘವೇಂದ್ರ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಮೂರು ದಿನಗಳ ಉತ್ತರಾರಾಧನೆ ಪೂಜೆ ನೆರವೇರಿಸಿ ಮಾತನಾಡಿ ಸಕಲ ಭಕ್ತರ ಸಂಕಷ್ಟ ನಿವಾರಕರಾಗಿದ್ದಾರೆ. ಜಗತ್ತಿನಲ್ಲಿ ಅನೇಕ ಗುರುಗಳಿದ್ದಾರೆ ಆದರೆ ರಾಯರರಂಥ ಗುರುಗಳು ದೊರೆಯುವುದು ಪೂರ್ವ ಜನ್ಮದ ಪುಣ್ಯ ಎಂದು ಹೇಳಿದರು .
ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ,ಸುಪ್ರಭಾತ,ಕನಕಾಭಿಷೇಕ , ಶ್ರೀ ವಿಷ್ಣು ಸಹರ್ಶನಾಮ ವೆಂಕಟೇಶ ಸ್ತೋತ್ರ ಹಾಗೂ ರಾಘವೇಂದ್ರ ಅಷ್ಟೋತ್ತರ, ನಂತರ ಮಹಾಮಂಗಳಾರತಿ ನೈವೇದ್ಯ ಅನ್ನ ಸಂತರ್ಪಣೆ, ವಿವಿಧ ಸಂಗೀತ ದಾಸರ ಪದಗಳ ಮೂಲಕ ಹಾಡುತ್ತ ಕುಣಿಯುತ್ತ ಸುತ್ತು ಹಾಕಿ ಮಂಗಳಾರತಿ ಪುಷಾರ್ಪಚಣೆ ಮಾಡುವ ಮೂಲಕ ರಾಯರ ಆರಾಧನೆ ಸಂಪನ್ನಗೊಂಡಿತು.ಆರಾಧನಾ ಮಹೋತ್ಸವಕ್ಕೆ ವಿವಿಧ ಸೇವೆಯನ್ನು ಮಾಡಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಳೆ : ಇಡೀ ರಾಜ್ಯ ಬರಗಾಲದತ್ತ ಮುಖ ಮಾಡಿತ್ತು.ರಾಜ್ಯದ ಜನತೆಗೆ ರಾಯರ ಆರಾಧನೆ ಆರಂಭವಾದ ಅಗಸ್ಟ 31 ರಂದು ರಾಯರ ಕೃಪೆಯಿಂದ ರಾಜ್ಯದ್ಯಾದಂತ ಮಳೆ ಆರಂಭವಾಗಿ ಜನರಲ್ಲಿ ನಿರಾಳ ಭಾವ ಮೂಡಿ ರಾಯರ ಇಂದಿಗೂ ಇರುವಿಕೆಗೆ ಕಳೆದ ಮೂರು ದಿನಗಳಿಂದ ಇಡೀ ರಾಜ್ಯದಾದಂತ ಸುತಿಯುತ್ತಿರುವ ಮಳೆ ಸಾಕ್ಷಿಯಾಗಿದೆ.
ನಗರದ ಭಾಗ್ಯ : ನಗರದಲ್ಲಿ ಎರಡು ಕಡೆ ವಾಸವಿ ಕಲ್ಯಾಣ ಮಂಟಪ ಹತ್ತಿರವಿರುವ ಮೂಲ ಸಂಸ್ಥಾನ ನಂಜನಗೂಡು ಶ್ರೀ ವೆಂಕಟೇಶ್ವರಸ್ವಾಮಿ ಹಾಗೂ ಶ್ರೀ ವೀರಾಂಜನೇಯ ಸಹಿತ ಶ್ರೀ ರಾಘವೇಂದ್ರ ಸ್ವಾಮಿಗಳು ಮಠ ಶಾಖಾ ಮಹಾಲಿಂಗಪುರ, ಎ ಪಿ ಎಂ ಸಿ ಹತ್ತಿರವಿರುವ ಉತ್ತರಾಧಿಮಠದ ಶಾಖಾ ಮಠ ಈ ಎರಡು ಮಠಗಳನ್ನು ಹೊಂದಿರುವದು ನಗರದ ಪುಣ್ಯ
ಸಂಜಯ ಕುಲಕರ್ಣಿ ಸತೀಶ ದೇಶಪಾಂಡೆ, ಕೃಷ್ಣಾ ಕುಲಕರ್ಣಿ, ರಾಮನ್ನಾ ಕುಲಕರ್ಣಿ, ರಮೇಶಾಚಾರ್ಯ ಕುಲಕರ್ಣಿ, ಗೋವಿಂದ ಕುಲಕರ್ಣಿ, ಮಂಜುನಾಥ ಭಟ್ಟ , ವೆಂಕಟೇಶ ಕುಲಕರ್ಣಿ , ವೇಣು ಕುಲಕರ್ಣಿ, ಬಾಬುರಾವ ಕಮತಗಿ, ಬಾಬುರಾವ ಪಾಟೀಲ, ಚೇತನ ಕುಲಕರ್ಣಿ, ಡಾ ಸಂದೀಪ್ ಕನಕರಡ್ಡಿ, ರಾಹುಲ ಅವರಾಧಿ ನಾರಾಯಣ ಜೋಶಿ, ಗುರುರಾಜ ಖಾಸನಿಸ, ರಾಘವೇಂದ್ರ ಯಾದವಾಡ, ಪುಟು ಗಲಗಲಿ, ಮನೋಜ ಕುಲಕರ್ಣಿ, ಅನಿಲ ದೇಸಾಯಿ. ಸೇರಿದಂತೆ ಹಲವರು ಇದ್ದರು.ಮೂರು ದಿನಗಳ ಕಾಲ ಜರುಗಿದ ಆರಾಧನೆ ಮಹೋತ್ಸದಲ್ಲಿ ಸಾವಿರಾರು ಭಕ್ತರು ದರ್ಶನ ಪಡೆದು ಪುನೀತರಾದರು