ಇಬ್ಬರು ಮಕ್ಕಳೊಂದಿಗೆ ತಾಯಿ ಕಾಣೆ: ಪ್ರಕರಣ ದಾಖಲು
ಮಹಾಲಿಂಗಪುರ 23: ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ಸಮೀರ್ವಾಡಿಯ ಗೃಹಿಣಿಯೊಬ್ಬಳು ತನ್ನೆರಡು ಮಕ್ಕಳನ್ನು ಕರೆದುಕೊಂಡು ಜನವರಿ ತಿಂಗಳಲ್ಲಿ ಕಾಣೆಯಾಗಿದ್ದಾಳೆ ಎಂದು ಗಂಡ ಪ್ರಕಾಶ ಗಂಗಪ್ಪ ಬಳ್ಳೊಳ್ಳಿ ಸ್ಥಳೀಯ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಿಸಿದ್ದಾರೆ.
ಪಿರ್ಯಾದಿದಾರನ ಹೆಂಡತಿಯ ಹೆಸರು ಶಿಲ್ಪಾ ಪ್ರಕಾಶ್ ಬಳ್ಳೋಳಿ (33) ಸಾಧು ಗೆಂಪು ಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿ ಕನ್ನಡ ಮತ್ತು ಹಿಂದಿ ಮಾತನಾಡುತ್ತಾಳೆ.
ಮಗ ಗಣೇಶ್ ಪ್ರಕಾಶ್ ಬಳ್ಳೊಳ್ಳಿ (11), ಮಗಳು ಲಕ್ಷ್ಮಿ ಪ್ರಕಾಶ್ ಬಳ್ಳೊಳ್ಳಿ (09) ಕನ್ನಡ ಮಾತನಾಡುವ ಇವರು ಒಟ್ಟಿಗೆ ಕಳೆದ ವರ್ಷ ಡಿಸೆಂಬರ್ 25ರಂದು ಕಾಣೆಯಾಗಿರುವ ಪ್ರಕರಣವನ್ನು ಸ್ಥಳೀಯ ಠಾಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕಾಣೆಯಾದ ಇವರ ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ ಬಾಗಲಕೋಟ್ 08354-235079 , ಡಿಎಸ್ಪಿ ಜಮಖಂಡಿ 08353 230114, ಸಿಪಿಐ ಮುಧೋಳ 08350 280103 ಅಥವಾ ಮಹಾಲಿಂಗಪುರ ಠಾಣೆ 08350 270033 ಸಂಪರ್ಕಿಸಲು ಕೋರಲಾಗಿದೆ.