ಶಿಗ್ಗಾವ್

ಹಬ್ಬಗಳ ಆಚರಣೆಯ ಮೂಲ ದ್ಯೇಯವನ್ನು ಅರ್ಥೈಸಿದಾಗ ಹಬ್ಬಗಳ ಆಚರಣೆಗೆ ಅರ್ಥ: ಮಂಜುನಾಥ

ಹಬ್ಬಗಳ ಆಚರಣೆಯ ಮೂಲ ದ್ಯೇಯವನ್ನು ಅರ್ಥೈಸಿದಾಗ ಹಬ್ಬಗಳ ಆಚರಣೆಗೆ ಅರ್ಥ: ಮಂಜುನಾಥ

ಶಿಗ್ಗಾವಿ 17: ಮಕ್ಕಳಿಗೆ ಹಬ್ಬಗಳ ಆಚರಣೆಯ ಜೊತೆಗೆ ನಮ್ಮ ಮೂಲ ಸಂಸ್ಕೃತಿ ಹಾಗೂ ನಾಡಿನ ಹಬ್ಬಗಳ ಆಚರಣೆಯ ಮೂಲ ದ್ಯೇಯವನ್ನು ಅರ್ಥೈಸಿದಾಗ ಹಬ್ಬಗಳ ಆಚರಣೆಗೆ ಅರ್ಥ ಬರುತ್ತದೆ ಎಂದು ಫೀನೀಕ್ಸ್‌ ಇಂಟರ್‌ನ್ಯಾಷನಲ್ ಶಾಲೆಯ ಪ್ರಾಚಾರ್ಯ ಮಂಜುನಾಥ ಕೆ ಎಚ್ ಹೇಳಿದರು. 

ಪಟ್ಟಣದ ಫೀನೀಕ್ಸ್‌ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ  ಹಮ್ಮಿಕೊಂಡ “ಸಂಕ್ರಾಂತಿ ಸಡಗರ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಸಂಕ್ರಾಂತಿ ಹಬ್ಬ ನಮ್ಮ ರೈತರ ಹಬ್ಬವಾಗಿದೆ ಮಕ್ಕಳು ಹೆಚ್ಚು ರೈತರ ಮಕ್ಕಳಾಗಿರುತ್ತಾರೆ ಹೀಗಾಗಿ ಸಂಕ್ರಾಂತಿ ಹಬ್ಬ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ, ಹಬ್ಬಗಳು ನಮ್ಮ ವರ್ತಮಾನ ಮತ್ತು ನಮ್ಮ ಭವಿಷ್ಯವನ್ನು ಜಾಗೃತ ರೀತಿಯಲ್ಲಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಆಚರಣೆಗಳಲ್ಲಿದ್ದು ಆದ್ದರಿಂದ ಮಕರ ಸಂಕ್ರಾಂತಿ ಹಬ್ಬವನ್ನು ಸುಗ್ಗಿಯ ಹಬ್ಬ ಎಂದು ಕರೆಯಲಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಂಕ್ರಾಂತಿ ಹಬ್ಬದಂದು ಮಾಡುವ ಜೋಳ, ಬತ್ತ, ಎಳ್ಳು, ಬೆಲ್ಲದ ರಾಶಿಗಳಿಂದ ಅಲಂಕೃತವಾದ ಕಣದ ರಾಶಿಯನ್ನು ಮಾಡಿ ಮಕ್ಕಳಿಗೆ ಅದರ ಮಹತ್ವ ಮತ್ತು ಪ್ರಯೋಜನಗಳ ಕುರಿತು ಮಕ್ಕಳಿಗೆ ಶಿಕ್ಷಕರು ತಿಳಿಸಿದರು, ಮಕ್ಕಳೂ ಸಹಿತ ಸಾಂಪ್ರದಾಯಿಕ ಉಡುಪಗಳೋಂದಿಗೆ ಆಗಮಿಸಿ ಹಬ್ಬದ ಕಳೆ ಹೆಚ್ಚಿಸಿದ್ದರು. 

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷ ಡಾ. ಎಂ ಎಂ ತಿರ್ಲಾಪೂರ, ಉಪಾದ್ಯಕ್ಷ ನರಹರಿ ಕಟ್ಟಿ, ಕಾರ್ಯದರ್ಶಿ ಡಾ. ರಾಣಿ ಎಂ ತಿರ್ಲಾಪೂರ, ಉಪ ಪ್ರಾಚಾರ್ಯ ಗೀರೀಶ ಡಿ ಬಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ