ಬಳ್ಳಾರಿ ಜಿಲ್ಲೆಯ ವಿಭಜನೆ ತಡೆಯಲು ಕಾನೂನು ಹೋರಾಟ ನಿಲ್ಲಲ್ಲ
ಬಳ್ಳಾರಿ 23: ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಬಳ್ಳಾರಿ ವಿಭಜನೆಗೆ ಕರ್ನಾಟಕ ಜನಸೈನ್ಯ ಸೇರಿದಂತೆ ಜಿಲ್ಲೆಯ ವಿವಿಧ ಕನ್ನಡಪರ, ರೈತಪರ, ಕಾರ್ಮಿಕ ಪರ ಹಾಗೂ ವಿವಿಧ ಸಮುದಾಯಗಳ ಸಂಘ-ಸಂಸ್ಥೆಗಳು ಸೇರಿದಂತೆ ಹಲವಾರು ಸ್ಥಳೀಯ ಸಾರ್ವಜನಿಕರೊಂದಿಗೆ ಸುಮಾರು ಒಂದೂವರೆ ವರ್ಷದಿಂದ ಹೋರಾಟ ಮಾಡಿ, ಆನಂತರ ವಿಜಯನಗರ ಜಿಲ್ಲೆಗೆ ಸದನದಲ್ಲಿ ತಾತ್ವಿಕ ಒಪ್ಪಿಗೆ ನೀಡಿದ ಸಂದರ್ಭದಲ್ಲಿ ಒಂದು ತಿಂಗಳುಗಳ ಕಾಲ ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದರೂ, ಅದರಲ್ಲೂ ವಿಶೇಷವಾಗಿ ಕರ್ನಾಟಕ ಜನಸೈನ್ಯದ ವತಿಯಿಂದ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಅಂಚೆ ಚಳುವಳಿ ಮೂಲಕ ಜಿಲ್ಲಾ ವಿಭಜನೆಯನ್ನು ತಡೆಹಿಡಿಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಿರುವುದಿಲ್ಲ. ವಿಭಜನೆಯ ವಿರುದ್ಧ ಸಾವಿರಾರು ಆಕ್ಷೇಪಣಾ ಪತ್ರಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಸಿದ್ದರೂ ಕೂಡಾ ಯಾವುದೇ ರೀತಿಯ ಪ್ರಯೋಜನವಾಗದಿರುವುದು ದುರಾದೃಷ್ಟಕರದ ಸಂಗತಿ. ಹಾಗೆಯೇ ರಾಜ್ಯ ಸರ್ಕಾರ ಇದ್ಯಾವುದಕ್ಕೂ ಕಿಮ್ಮತ್ತು ನೀಡಿದೇ ಅಂತಿಮವಾಗಿ ಜಿಲ್ಲೆಯನ್ನು ಇಬ್ಭಾಗ ಮಾಡಿ ಆದೇಶ ಹೊರಡಿಸಿತು.
ಇದಕ್ಕೆ ವಿರೋಧಿಸಿದ ಕರ್ನಾಟಕ ಜನಸೈನ್ಯ ಸಂಘಟನೆಯು ದಿ. 05ರಂದು ಕರ್ನಾಟಕ ಉಚ್ಛ ನ್ಯಾಯಾಲಯ ರಿಟ್ ಅರ್ಜಿ (ಅರ್ಜಿ ಸಂಖ್ಯೆ: 2651/2021 (ಪಿಲ್)) ಯನ್ನು ಉಚ್ಛ ನ್ಯಾಯಾಲಯದ ಖ್ಯಾತ ವಕೀಲರು ಹಾಗೂ ಕರ್ನಾಟಕ ಜನಸೈನ್ಯದ ರಾಜ್ಯ ಕಾನೂನು ಸಲಹೆಗಾರರಾದ ಶೈಲಜಾ ಅವರೊಂದಿಗೆ ಸಲ್ಲಿಸಲಾಯಿತು. ಇದನ್ನು ಕೈಗೆತ್ತಿಕೊಂಡ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ದಿ. 12ರಂದು ತೀರ್ಪು ನೀಡಿತು.
ಕರ್ನಾಟಕ ಉಚ್ಛ ನ್ಯಾಯಾಲಯವು ನಮಗೆ ಮತ್ತೊಮ್ಮೆ ಅವಕಾಶ ನೀಡಿರುವುದರಿಂದ ಕರ್ನಾಟಕ ಜನಸೈನ್ಯದ ವತಿಯಿಂದ ಇದೇ ರೀತಿ ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಈ ಮೂಲಕ ತಿಳಿಸುತ್ತಾ, ಹಾಗೆಯೇ ಈ ತೀರ್ಪಿನ ಅವಕಾಶವನ್ನು ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಇದನ್ನು ಉಪಯೋಗಿಸಿಕೊಂಡು ತಾವೂ ಸಹ ಹೋರಾಟಗಳನ್ನು ಮುಂದುವರೆಸಬೇಕೆಂದು ಈ ಮೂಲಕ ಕರೆ ನೀಡುತ್ತೇವೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜನಸೈನ್ಯ ಸಂಘಟನೆಯ ಸಂಸ್ಥಾಪಕ ರಾಜ್ಯಾದ್ಯಕ್ಷರು ಕೆ. ಎರ್ರಿಸ್ವಾಮಿ ರಾಜ್ಯ ಸಲಹಾ ಸಮಿತಿ ಸದಸ್ಯರಾದ ಎಂ.ಚೆಂಚಯ್ಯ, ಉತ್ತರ ಕರ್ನಾಟಕ ಉಪಾಧ್ಯಕ್ಷರಾದ ಫಯಾಜ್ ಭಾಷೆ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾರೂಕ್ ಹಾಗೂ ಇಂದು ಮಂಜುನಾಥ್ ನಾಸಿರ್ ಉಪಸ್ಥಿತರಿದ್ದರು.