ಜ್ಞಾನ ಎಂಬುದು ಒಂದು ಬೆಳಕು: ಡಾ. ನಾಯಕ
ಹೂವಿನಹಡಗಲಿ 23: ಜ್ಞಾನ ಎಂಬುದು ಒಂದು ಬೆಳಕು, ಅದಕ್ಕಿಂತ ಮಿಗಿಲಾಗಿದ್ದು ಯಾವುದೂ ಇಲ್ಲಾ ಅದು ಮನುಷ್ಯನನ್ನ ಶ್ರೇಷ್ಠವನ್ನಾಗಿ ಮಾಡುವುದರ ಜೊತೆಗೆ ವ್ಯಕ್ತಿತ್ವ ವಿಕಸನಗೊಳಿಸುತ್ತದೆ ಎಂದು ಗೊಟಗೊಡಿ ಕನ್ನಡ ಜನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಬಿ.ನಾಯಕ ಹೇಳಿದರು.
ಅವರು ಪಟ್ಟಣದ ಜಿಬಿಆರ್ ಪದವಿ ಮಹಾವಿದ್ಯಾಲಯ ಮತ್ತು ಸ್ನಾತ್ತಕೋತ್ತರ ಕೇಂದ್ರದ ಕರ್ನಾಟಕ ಸಂಘದ ಅಡಿಯಲ್ಲಿ 2020-21ನೇ ಸಾಲಿನ ವಿವಿಧ ಸಾಂಸ್ಕೃತಿಕ ಸಂಘಗಳ ಉದ್ಘಾಟನೆ ಹಾಗೂ ದತ್ತಿ ಪುರಸ್ಕರ ವಿತರಣಾ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಶಿಕ್ಷಣ ಎಂಬುದು ಒಂದು ಆಯುಧ, ಇದರ ಮೂಲಕ ಏನೆಲ್ಲಾ ಬದಲಾವಣೆ ಮಾಡಬಹುದು ಎಂದು ಹೇಳುತ್ತಾ ಇಂದಿನ ವಿಜ್ಞಾನ ಯುಗದಲ್ಲಿ ತಂತ್ರಜ್ಞಾನ ಹೆಚ್ಚಾಗಿ ಪಾರಂಪರಿಕ ಶಿಕ್ಷಣ ಹಿನ್ನಡೆಯಾಗಿದೆ, ಅದಕ್ಕಾಗಿ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಉನ್ನತ ಗುರಿಯೊಂದಿಗೆ ಉತ್ತಮ ಜೀವನ ರೂಪಿಸಿಕೊಳ್ಳಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ.ಎಸ್.ಎಸ್.ಪಾಟೀಲ್ ಮಾತನಾಡಿ ಯಾವುದೇ ರಾಷ್ಟ್ರದ ಅಭಿವೃದ್ಧಿ ಆ ದೇಶದ ಉನ್ನತ ಶಿಕ್ಷಣವನ್ನು ಅವಲಂಭಿಸಿದ್ದು, ನಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಶೇ.28.1 ಇದ್ದು ಇನ್ನು ಹೆಚ್ಚಿನ ಪ್ರಮಾಣದ ಉನ್ನತ ಶಿಕ್ಷಣ ಹೊಂದಬೇಕಾಗಿದೆ ಎಂದು ಹೇಳುತ್ತಾ, ಇಂದಿನ ದಿನಮಾನಗಳಲ್ಲಿ ಸಂಪ್ರದಾಯಿಕ ಶಿಕ್ಷಣ ಬದಲು ಕೌಶಲ್ಯಾದರಿತ ಶಿಕ್ಷಣ ಅವಶ್ಯಕವಾಗಿದ್ದು, ಅಂತಹ ಶಿಕ್ಷಣ ಹೊಂದಿ ಉತ್ತಮ ಬದುಕನ್ನ ರೂಪಿಸಿಕೊಳ್ಳಿರಿ ಎಂದು ಅಧ್ಯಕ್ಷೀಯ ನುಡಿ ನುಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯ ಡಾ.ಕೆ.ರುದ್ರಪ್ಪ ಮುಖ್ಯ ಅತಿಥಿ ನುಡಿ ನುಡಿದರು. 2020-21ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನ ನೀಡಲಾಯಿತು. ದತ್ತಿ ದಾನಿಗಳಾದ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬೂದನೂರು ಸುರೇಶ್, ಉಪನ್ಯಾಸಕ ಪ್ರೊ.ಪ್ರಭು ಸೊಪ್ಪಿನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು., ವಿದ್ಯಾರ್ಥಿ ದೀಪಾ.ವೈ ಪ್ರಾರ್ಥಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ.ಶಾಂತಮೂರ್ತಿ.ಬಿ.ಕುಲಕರ್ಣಿ ಸ್ವಾಗತಿಸಿದರು, ಉಪನ್ಯಾಸಕ ಪ್ರಭು ಸೊಪ್ಪಿನ ದತ್ತಿ ಪುರಸ್ಕಾರ ಪ್ರಧಾನ ಮಾಡಿದರು, ಡಾ.ಹೆಚ್.ಕೆ.ಮಹೇಶ್ ನಿರೂಪಿಸಿದರು