ಶಿಕ್ಷಣದಿಂದ ಭವಿಷ್ಯ ಬದಲಾಗಲು ಸಾಧ್ಯ: ಉತ್ತಂಗಿ
ಮಹಾಲಿಂಗಪುರ 08: ಭಾರತರತ್ನ ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ, ದೇಶದ ಪ್ರತಿಯೊಬ್ಬ ಶಿಕ್ಷಣ ವಂಚಿತ, ಮೌಲ್ಯಯುತ ಶಿಕ್ಷಣ ಹೊಂದಿದಾಗ ಮಾತ್ರ ಅಂತಹವರ ಬದುಕು ಹಸನಾಗಿ ಭವಿಷ್ಯ ಬದಲಾಗಲು ಸಾಧ್ಯವೆಂದು ಪತ್ರಕರ್ತ ನಾರನಗೌಡ ಉತ್ತಂಗಿ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ದಲಿತ ಸಂಘರ್ಷ ಸಮಿತಿ, ಭೀಮ್ ಆರ್ಮಿ ಮತ್ತು ಟಿಪ್ಪು ಸುಲ್ತಾನ ಸಂಘ ಸಹಯೋಗದ ಸ್ಥಳೀಯ ಕೆಂಗೇರಿಮಡ್ಡಿ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಮಹಾ ಪರಿನಿರ್ವಾಣ ದಿನಾಚರಣೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಗತಿಪರ ಚಿಂತಕ ರವಿ ಹಲಸಪ್ಪಗೋಳ ಮಾತನಾಡಿ, ಭಾರತವು ಇವತ್ತು ಉತ್ತುಂಗ ಸ್ಥಿತಿಯಲ್ಲಿರಲು ಅಂಬೇಡ್ಕರ್ ಅವರು ನೀಡಿದ ಶ್ರೇಷ್ಠ ಸಂವಿಧಾನವೇ ಕಾರಣ ಎಂದರು.
ಅಂಬೇಡ್ಕರ್ ಅವರ ಭವ್ಯ ಭಾವಚಿತ್ರದ ಮುಂದೆ ಮೇಣಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಅರ್ಿಸಲಾಯಿತು.
ದಲಿತ ಸಂಘರ್ಷ ಸಮಿತಿಯ ತಾಲೂಕಾ ಅಧ್ಯಕ್ಷ ಪರಶುರಾಮ ಮೇತ್ರಿ, ಮುಖಂಡರಾದ ಅರ್ಜುನ ದೊಡಮನಿ, ಭೀಮಶಿ ಗೌಂಡಿ, ಚನ್ನಪ್ಪ ರಾಮೋಜಿ, ಶಿವಲಿಂಗ ಘಂಟಿ, ಲಕ್ಷ್ಮಣ ಮಾಂಗ, ವಿಠ್ಠಲಗೌಡ ಕುಳಲಿ, ಭೀಮ್ ಆರ್ಮಿ ತಾಲೂಕ ಅಧ್ಯಕ್ಷ ಜಯರಾಜ ಗಸ್ತಿ, ಶ್ರೀ ರಾಮ ಸೇನಾ ಅಧ್ಯಕ್ಷ ನಾಗರಾಜ ಭಜಂತ್ರಿ, ಸಿರಾಜ್ ಪಾಂಡು, ಚನ್ನಪ್ಪ ಮೇತ್ರಿ, ಹುಸೇನ್ ಉಕ್ಲಿ, ಶೇರ್ ಅಲಿ ಶೇಖ್, ಟಿಪ್ಪು ಸುಲ್ತಾನ್ ಸಂಘಷ9 ಸಮಿತಿಯ ಅಬ್ದುಲ್ ಆಲಗೂರ ಹಾಗೂ ಎಸ್.ಡಿ. ಪಿ. ಐ ಸಂಘಟನೆ ದಲಿತ ಸಂಘರ್ಷ ಸಮಿತಿ, ಭೀಮ್ ಆರ್ಮಿಯ ಸಮಿತಿಯ ಕಾರ್ಯಕರ್ತರು ಇದ್ದರು. ಭೀಮ್ ಆರ್ಮಿ ಅಧ್ಯಕ್ಷ ಬಸವರಾಜ ಮಾವಿನಹಿಂಡಿ ಕಾರ್ಯಕ್ರಮ ನಿರೂಪಿಸಿದರು.