ಬೆಳಗಾವಿ ತುಂಬೆಲ್ಲ ಹರಡಿದ ಕನ್ನಡದ ಕಂಪು : ಯಾರಪ್ಪಂದ ಎನೈತಿ, ಬೆಳಗಾವಿ ನಮ್ಮದೈತಿ : ದಸರಾ ಮಾದರಿ ಕನ್ನಡ ಹಬ್ಬ

ಬೆಳಗಾವಿ ತುಂಬೆಲ್ಲ ಹರಡಿದ ಕನ್ನಡದ ಕಂಪು : ಯಾರಪ್ಪಂದ ಎನೈತಿ, ಬೆಳಗಾವಿ ನಮ್ಮದೈತಿ : ದಸರಾ ಮಾದರಿ ಕನ್ನಡ ಹಬ್ಬ
The flavor of Kannada spread throughout Belgaum: Yarappanda Enaithi, Belgaum Namma Daiti: A Kannada

ಬೆಳಗಾವಿ : "ಹಚ್ವೇವು ಕನ್ನಡದ ದೀಪಾ, ಕರುನಾಡ ದೀಪಾ, ಬೆಳಗಾವಿ ಬೆಳಗುವಾ ದೀಪಾ, ಎಂಬ ಹಾಡಿನೊಂದಿಗೆ ಶನಿವಾರ ಬೆಳಿಗ್ಗೆಯಿಂದ ತಡರಾತ್ರಿ ವರೆಗೆ ಬೆಳಗಾವಿಯಲ್ಲಿ ಕನ್ನಡ ಹಬ್ಬ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.  ಎಲ್ಲಿ ನೋಡಿದರು ಕನ್ನಡ ಹಾಡಿನ ಕಲರವಾ, ಕನ್ನಡ ಹಾಡುಗಳಿಗೆ ಯುವ ಪಡೆ ಹೆಜ್ಜೆ ಹಾಕುತ್ತಿದ್ದ ದೃಶ್ಯ, ಆನೆ ಮೇಲೆ ಅಂಬಾರಿ ಹಾಕಿ ತಾಯಿ ಭುವನೇಶ್ವರಿ ದೇವಿಯ ಮೂರ್ತಿಯ ಮೇರವಣಿಗೆಯು ಮೈಸೂರು ದಸರಾ ನೆನಪಿಸುವಂತೆ ಬೆಳಗಾವಿ ರಾಜ್ಯೋತ್ಸವ ಕಂಡು ಬಂದಿತು. 

 ಕನ್ನಡದ ಹಬ್ಬ ಕರ್ನಾಟಕ ರಾಜ್ಯೋತ್ಸವ ಆಚರಣೆ ಎಂದಾ ಕೂಡಲೆ ಬೆಳಗಾವಿ ಈ ಕನ್ನಡ ಹಬ್ಬ‌‌ ಎಲ್ಲರನ್ನು ಕೈಬೀಸಿ‌ ಕರೆಯುಂತೆ ಮಾಡಿತು. ಬೆಳಗಾವಿಯ ಗಲ್ಲಿ ಗಲ್ಲಿಯಲ್ಲೂ ಕನ್ನಡದ ಧ್ವಜಗಳನ್ನು ಹಿಡಿದು ಕನ್ನಡದ ನಾಡು ನುಡಿಯ ಹಾಡುಗಳಿಗೆ ಯವ ಸಮುದಾಯವು ಹೆಜ್ಜೆ ಹಾಕುವ ಮೂಲಕ ಬೆಳಗ್ಗೆ ಯಿಂದ ರಾತ್ರಿ ವರೆಗೆ ಧನಿವಿಲ್ಲದೆ ಕನ್ನಡದ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. 

    ಅತ್ತ ರೂಪಗಳ‌ ಮೆರವಣಿಗೆಗಳು ನೋಡುಗರ ಮನಸೆಳೆದರೆ ಇತ್ತ ಆನೆ ಮೇಲೆ ಅಂಬಾರಿ ಹಾಕಿ ಅಂಬಾರಿಯೋಳಗೆ ತಾಯಿ ಭುವನೇಶ್ವರಿ ದೇವಿಯ ಮೂರ್ತಿ ಅಲಂಕಾರ ಜೊತೆಗೆ ಮೆರವಣಿಗೆ ಮಾಡುತ್ತಿದ್ದ ದೃಶ್ಯವು ಮೈಸೂರು ದಸರಾ ಮೀರಿಸುವಂತೆ ಮಾಡಿತು. 

  ಮೆರಣಿಗೆಯುದ್ದಕ್ಕು ಚಿಕ್ಕಮಕ್ಕಳಿಂದ‌ ಹಿಡಿದು ವಯೋವೃದ್ದರ ವರೆಗೆ ಕೈಯಲ್ಲಿ ಕನ್ನಡ ಧ್ವಜ ಹಿಡಿದು ಮುಖಗಳ‌ ಮೇಲೆ ಕನ್ನಡ ಬಾವುಟದ ಕೆಂಪು ಹಳದಿ ಬಣ್ಣ ಹಾಕಿಕೊಂಡು ದೃಶ್ಯ ಕನ್ನಡಿಗೆ ಮನತನಿಸುವಂತೆ ಮಾಡಿತು. 

   ಯಾರಪ್ಪಂದ‌ ಎನ್ ಐತಿ ಬೆಳಗಾವಿ ನಮ್ಮದೈತಿ ಎನ್ನುವ ಘೋಷವು‌ ಕನ್ನಡಿಗರ ಮನತುಂಬಿ ಬರುವಂತೆ ಮಾಡಿತು. ಕನ್ನಡ ಸಂಘಟನೆಗಳು ಬೆಳಗಾವಿ ಜಿಲ್ಲಾಡಳಿತ ಈ ಅದ್ದೂರಿ ಕನ್ನಡ ಹಬ್ಬಕ್ಕೆ ಮೆರಗು ನೀಡುವಂತೆ ಕಾರ್ಯ ಮಾಡಿದವು. 

ಸುದ್ದಿ ಓದಿ