ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆ
ಬಳ್ಳಾರಿ ಫೆ. 20 : ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ದಿ. 21ರಂದು ನಡೆಯಲಿದೆ.
ಸಂಘದ ಮುಂದಿನ ಮೂರು ವರ್ಷದ ಅವದಿಗೆ 30 ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಬೇಕಾದ ಜವಾಬ್ದಾರಿ ತಮ್ಮ ಮೇಲಿದೆ ಆದ್ದರಿಂದ ಈ ಸಲದ ಚುನಾವಣೆ ಸರ್ವಾಂಗೀಣ ಅಭಿವೃದ್ದಿ ಹಾದಿಯಲ್ಲಿ ಮುನ್ನಡಿಯಾಗಲಿದೆ. ಯಾವುದೆ ಆಶ್ವಾಸನೆಗಳನ್ನು ನೀಡದೆ ವಾಸ್ತವ ನೆಲೆಗಟ್ಟಿನಲ್ಲಿ ಸಂಘದ ಆಡಳತವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ತಮ್ಮೆಲ್ಲರ ಸಹಕಾರದಿಂದ ಮುನ್ನಡೆಸುತ್ತೇವೆ ಎಂದು ಹಿರಿಯರ ತಂಡದ ಅಭ್ಯರ್ಥಿಗಳಾದ ಸೇವಾಕಾಂಕ್ಷಿಗಳು ಭರವಸೆ ನೀಡಿದ್ದಾರೆ. ಇನ್ನು ಸಂಘದ ಆಡಳಿತ ಸೇವೆಗೆ ಬಹುಮತ ನೀಡಬೇಕೆಂದು ಮನವಿ ಮಾಡಿಕೊಂಡೆರು.