ಬೆಳಗಾವಿಯಲ್ಲಿ ಗಣೇಶ ಹಬ್ಬ ಆಚರಣೆಯ ಸಿದ್ದತೆ ವೀಕ್ಷಿಸಿದ ಜಿಲ್ಲಾಡಳಿತ : ಭದ್ರತೆ, ಮೆರವಣಿಗೆ ಮಾರ್ಗ, ವಿಸರ್ಜನೆ ಹೊಂಡ ಪರಿಶೀಲಿಸಿದ ಜಿಲ್ಲಾಧಿಕಾರಿ
ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದ್ದೂರಿಯಾಗಿ ನಡೆಯಲಿರುವ ಗಣೇಶ ಹಬ್ಬದ ಪ್ರಯುಕ್ತ ಜಿಲ್ಲಾಡಳಿತ ಮಂಗಳವಾರ ಬೆಳಿಗ್ಗೆ ಗಣಪತಿ ಮಂಟಪ ಪ್ರತಿಷ್ಟಾಪನೆ ಮತ್ತು ಗಣೇಶ ಮೂರ್ತಿಗಳು ಸಾಗುವ ವಿವಿಧ ಮಾರ್ಗಗಳ ಹಾಗೂ ಗಣೇಶ ಮೂರ್ತಿಯ ವಿಸರ್ಜನೆಯ ಕಪಿಲೇಶ್ವರ ಹೊಂಡ ಸೇರಿದಂತೆ ಪೂರ್ವ ತಯಾರಿ ವೀಕ್ಷಣೆ ಮಾಡಲಾಯಿತು.

ಈ ವೇಳೆಯಲ್ಲಿ ಬೆಳ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮುಂದಾಳತ್ವದಲ್ಲಿ ನಡೆದ ಈ ವಿಕ್ಷಣೆ ಕಾರ್ಯದಲ್ಲಿ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡುಗುಂಟಿ, ಉಪ ಪೊಲೀಸ ಆಯುಕ್ತೆ ಸ್ನೆಹಾ, ವಿವಿಧ ಅಧಿಕಾರಿಗಳು ಮತ್ತು ಕೆಲ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.