ಅರಣ್ಯ ಸಚಿವ ಆನಂದ್ ಸಿಂಗ್ ಬಂಗ್ಲೆ ಬಳಿ ಮೊಸಳೆ…..!!!!
ಬಳ್ಳಾರಿ, ನವೆಂಬರ್.11: ಅರಣ್ಯ ಸಚಿವರ ನಿವಾಸದ ಬಳಿ ಮೊಸಳೆ ಕಾಣಿಸಿಕೊಂಡಿದೆ.
ಮನೆ ಬಳಿ ಮೊಸಳೆ ಕಾಣಿಸಿಕೊಂಡಿರುವುದು ವಾಸ್ತುಪ್ರಕಾರ ಶುಭ ಶಕುನವೋ, ಅಶುಭ ಶಕುನವೋ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.
ಹೊಸಪೇಟೆಯ ವರ್ತುಲ ರಸ್ತೆಯಲ್ಲಿರುವ ಆನಂದ್ ಸಿಂಗ್ ಅವರ ಬಂಗ್ಲೆ ಬಳಿ ಬುಧವಾರ ನಸುಕಿನ ಜಾವ ಮೊಸಳೆ ಕಾಣಿಸಿಕೊಂಡಿದೆ. ತಕ್ಷಣವೇ ಸಿಬ್ಬಂದಿ ವಿಷಯವನ್ನು ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದರು.
ಬಳಿಕ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆಯನ್ನು ಸುರಕ್ಷಿತವಾಗಿ ರಕ್ಷಿಸಿ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಬಿಟ್ಟಿದ್ದಾರೆ.
ಸಚಿವರ ಬಂಗ್ಲೆ ಸಮೀಪ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆ ಇರುವುದರಿಂದ ಕಾಲುವೆ ಮೂಲಕವೇ ಮೊಸಳೆ ಬಂಗ್ಲೆ ಸಮೀಪ ಆಗಮಿಸಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕಿಸಿದ್ದಾರೆ.