ಹಗರಿಬೊಮ್ಮನಹಳ್ಳಿ

ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆ ಅಗಾಧವಾದದ್ದು: ವೆಂಕಟೇಶ್

ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆ ಅಗಾಧವಾದದ್ದು: ವೆಂಕಟೇಶ್

ಹಗರಿಬೊಮ್ಮನಹಳ್ಳಿ 11: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಮತ್ತು ಕೊಟ್ಟೂರೇಶ್ವರ ಮಹಾವಿದ್ಯಾಲಯ, ಕೊಟ್ಟೂರು ಇವರ ಸಂಯುಕ್ತಾಶ್ರಯದಲ್ಲಿ ಕೊಟ್ಟೂರಲ್ಲಿ  ನಡೆದ ವಲಯ ಮಟ್ಟದ ಸಾಂಸ್ಕೃತಿಕ ವೈಭವ ಯುವಜನೋತ್ಸವ-2022ರಲ್ಲಿ ಜರುಗಿದ ಒಟ್ಟು 27ವಿವಿಧ ಸಾಂಸ್ಕೃತಿಕ ವಿಭಾಗಗಳ ಸ್ಪರ್ಧೆಯಲ್ಲಿ ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನಹಳ್ಳಿಯ ವಿದ್ಯಾರ್ಥಿಗಳು 22 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದು, ಕಾಲೇಜಿಗೆ “ಸಮಗ್ರ ಪ್ರಶಸ್ತಿ” ಲಭಿಸಿದೆ. 

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ವೆಂಕಟೇಶ್ ಮಾತನಾಡಿ ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆ ಅಗಾಧವಾದದ್ದು. ಸಾಹಿತ್ಯ, ಸಂಗೀತ, ಕಲೆ, ನೃತ್ಯ ಇತ್ಯಾದಿ ಆಸಕ್ತಿಗಳನ್ನು ರೂಢಿಸಿಕೊಂಡಿರುವ ವಿದ್ಯಾರ್ಥಿಗಳು ಆರೋಗ್ಯ ಪೂರ್ಣವಾದ ಆಲೋಚನೆಗಳನ್ನು ಹೊಂದಿರುತ್ತಾರೆ. ಇಂತಹ ಸಹಜ ಪ್ರತಿಭೆಗಳು ಹೊರಹೊಮ್ಮಲು ಸೂಕ್ತ ವೇದಿಕೆಯನ್ನು ರೂಪಿಸಬೇಕಾಗಿರುವುದು ಸಮಾಜದಲ್ಲಿರುವ ನಮ್ಮೆಲ್ಲರ ಹೊಣೆಯಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಲಭಿಸಿರುವ ಬಹುಮಾನ ್ಘ ಮನ್ನಣೆಗಳೇ ಇದಕ್ಕೆ ಸಾಕ್ಷಿಯಾಗಿವೆ. ಸಾಂಸ್ಕೃತಿಕ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ನಾಡಿನ ವೈವಿಧ್ಯಮಯ ಪರಂಪರೆಯ ಹಿರಿಮೆಯನ್ನು ಅರ್ಥಪೂರ್ಣವಾಗಿ ಮೆರೆದಿರುವುದು ಶ್ಲಾಘನೀಯ. ಇದು ಇಡೀ ಕಾಲೇಜಿನ ಸಾಮೂಹಿಕ ಶ್ರಮಕ್ಕೆ ಸಿಕ್ಕ ಗೌರವ ಮತ್ತು ಪ್ರತಿಫಲ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಒದಗಿಸಿದ ಕಾಲೇಜಿನ ಸಮಸ್ತ ಸಿಬ್ಬಂದಿ ಅಭಿನಂದನಾರ್ಹರು. ಕಾಲೇಜಿಗೆ ಲಭಿಸಿರುವ ಸಮಗ್ರ ಪ್ರಶಸ್ತಿಯನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಅರ​‍್ಿಸುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 

ಪಾಶ್ಚಾತ್ಯ ಸಂಗೀತ ಸೋಲೋ  ವೈಯಕ್ತಿಕ ವಿಭಾಗದಲ್ಲಿ ಚಾಂದಿನಿ ಪ್ರಥಮ ಸ್ಥಾನ, ಪಾಶ್ಚಾತ್ಯ ಸಂಗೀತ  ಗುಂಪು ವಿಭಾಗದಲ್ಲಿ ಚಾಂದಿನಿ ್ಘ ಸಂಗಡಿಗರು ಪ್ರಥಮ ಸ್ಥಾನ, ಲಘು ಸಂಗೀತ ವಿಭಾಗದಲ್ಲಿ ವಾರುಣಿ ದ್ವಿತೀಯ ಸ್ಥಾನ, ಅಣಕು ಪ್ರದರ್ಶನದಲ್ಲಿ ಘಂಟಿ ಉಮೇಶ ಪ್ರಥಮ ಸ್ಥಾನ, ಜಾನಪದ ್ಘ ದೇಶಭಕ್ತಿ ಗೀತೆಯಲ್ಲಿ ಸಿಂಧು ್ಘ ಸಂಗಡಿಗರು ಪ್ರಥಮ ಸ್ಥಾನ,    ಏಕಾಂಕ ನಾಟಕದಲ್ಲಿ ಗಂಗಮ್ಮ ್ಘ ಸಂಗಡಿಗರು, ರಸಪ್ರಶ್ನೆ (ಕ್ವಿಜ್) ವಿಭಾಗದಲ್ಲಿ ಮಂಜುನಾಥ ್ಘ ಸಂಗಡಿಗರು, ಬುಡಕಟ್ಟು ನೃತ್ಯದಲ್ಲಿ ಅಶ್ವಿನಿ ್ಘ ಸಂಗಡಿಗರು ಪ್ರಥಮ ಸ್ಥಾನ, ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ರಾಕೇಶ್ ಬಡಿಗೇರ್ ಪ್ರಥಮ ಸ್ಥಾನ, ಏಕಪಾತ್ರಾಭಿಯ ಸ್ಪರ್ಧೆಯಲ್ಲಿ ನಾಗನಗೌಡರ್ ದ್ವಿತೀಯ ಸ್ಥಾನ, ಮೂಕಾಭಿನಯ ಪಾತ್ರದಲ್ಲಿ ಶೈಲೇಂದ್ರ ್ಘ ಸಂಗಡಿಗರು, ಕೊಲ್ಯಾಜ್ ವಿಭಾಗದಲ್ಲಿ ಪ್ರಥಮ ಸ್ಥಾನ, ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಕೃಷ್ಣ ಅಂಬಿಗರ ಪ್ರಥಮ ಸ್ಥಾನ, ವ್ಯಂಗ್ಯಚಿತ್ರ ವಿಭಾಗದಲ್ಲಿ ಸೈಫುದ್ಧೀನ್‌.ಎನ್‌.ಪಿ ಪ್ರಥಮ ಸ್ಥಾನ, ಕವಿತೆ ರಚನೆ ವಿಭಾಗದಲ್ಲಿ ವಿ.ಸ್ಫೂರ್ತಿ ತೃತೀಯ ಸ್ಥಾನ, ಭಾಷಣ ಸ್ಪರ್ಧೆಯಲ್ಲಿ  ಐಶ್ವರ್ಯ ದ್ವಿತೀಯ ಸ್ಥಾನ, ರಂಗೋಲಿ ಸ್ಪರ್ಧೆಯಲ್ಲಿ ಅರುಣಕುಮಾರ ತೃತೀಯ ಸ್ಥಾನ, ಚರ್ಚಾ ಸ್ಪರ್ಧೆಯಲ್ಲಿ ಪಾಂಡುನಾಯ್ಕ ್ಘ ರಾಮಕೃಷ್ಣ ದ್ವಿತೀಯ ಸ್ಥಾನ ಗಳಿಸಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆಂದು ಬೋಧಕ ಹಾಘೂ ಬೋಧಕೇತ್ರ ಸಿಬ್ಬಂದಿ ಶ್ಲಾಘಿಸಿದ್ದಾರೆ. 


ಸುದ್ದಿ ಓದಿ