ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರ: ಯಾಡಗಿ
ಸಿಂದಗಿ: ಮಹಿಳೆಯರು ಸಮಾಜದ ವಿವಿಧ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದು ಡಾ.ಜಿ.ಎಂ. ಯಾಡಗಿ ಹೇಳಿದರು.
ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ದೂರಸಂಪರ್ಕ ಶಾಖೆಯಲ್ಲಿ ಪ್ರತಿನಿಧಿಗಳು ಏರಿ್ಡಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ ಹೋರಾಟದಲ್ಲಿ ತಾವು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಆನಂದಬಾಯಿ ನಾರಾಯಣಕರ ಮಾತನಾಡಿ, ಪುರಾಣ ಕಾಲದಿಂದ ಹಿಡಿದು ಇಂದಿನವರೆಗೂ ದೇಶದಲ್ಲಿ ಮಹಿಳೆಯರಿಗೆ ಗೌರವಸ್ಥಾನವಿದೆ ಎಂದು ಹೇಳಿದರು.
ಆಢಳಿತಾಧಿಕಾರಿ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿದರು. ಪಿ.ವಿ. ಯಾದವ, ಜಯಶ್ರೀ ಪಾರತನಹಳ್ಳಿ, ಸಾವಿತ್ರಿ ಕಪಾಲಿ, ಉಮಾದೇವಿ ಧೂಪ, ಸರೋಜಾ ವಾಲಿಕಾರ, ಡಿ.ಎಂ. ಮುಲ್ಲಾ, ಪಾರ್ವತಿ ಸಾತಿಹಾಳ, ಬಸಮ್ಮ ಕೌದಿ, ವಿಜಯಲಕ್ಷ್ಮೀ ಹೂಗಾರ, ಅಧಿಕಾರಿಗಳಾದ ಪಿ.ರಾಹೂಲ್, ಬಸವರಾಜ ಹವಾಲ್ದಾರ, ಎಂ.ಬಿ. ಶೇರಖಾನೆ, ಪ್ರತಿನಿಧಿಗಳಾದ ದಯಾನಂದ ಕಟಗಿಗಾಣ, ಶಿವಾನಂದ ಹುಣಸಗಿ, ವಿಜಯಕುಮಾರ ತಳ್ಳೊಳ್ಳಿ ಸೇರಿದಂತೆ ಇತರರು ಇದ್ದರು.