ಭರವಸೆ ಹುಸಿಗೊಳಿಸಿದ ಕೇಂದ್ರ ಸರಕಾರ: ಜೆ.ಎಂ.ವೀರಸಂಗಯ್ಯ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 10: ರೈತ ವಿರೋಧಿ ಕಾಯ್ದಿಗಳನ್ನು ಕೂಡಲೇ ಹಿಂಪಡೆಯುವಂತೆ 514ಕಿಸಾನ್ ಮೋರ್ಚ್ಗಳೊಂದಿಗೆ ದೀರ್ಘ ಮಾತುಕತೆ ನಡೆಸಿ 9ಸುತ್ತಿನ ಮಾತುಕತೆಗೆ ಕಾಯ್ದಿಯನ್ನು ಹಿಂಪಡೆಯುವ ಭರವಸೆ ನೀಡಿದ ಕೇಂದ್ರ ಸರಕಾರ ಭರವಸೆ ಹುಸಿಗೊಳಿಸಿ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಸರಕಾರದ ವಿರುಧ್ಧ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ಜೆ.ಎಂ.ವೀರಸಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೃಷಿಕ ಭವನದಲ್ಲಿ ಬುಧವಾರ ಏರಿ್ಡಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರವು ಇಡೀ ಭಾರತದ ಕೃಷಿಯನ್ನು ತರಾತುರಯಲ್ಲಿ ಖಾಸಗೀಕರಣ ಮಾಡಲು ಮುಂದಾಗಿದ್ದು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಇನ್ನು 3ದಿನಗಳ ಕಾಲ ಅಧಿವೇಶನ ನಡೆಯಬೇಕಿದ್ದರೂ ಅದನ್ನು ಮೊಟಕುಗೊಳಿಸಲಾಗಿದೆ.ವಿದ್ಯುತ್ ಉತ್ಪಾದನೆ ಮತ್ತು ಹಂಚಿಕೆಯಲ್ಲಿ ರಾಜ್ಯ ಸರಕಾರಗಳು ಪ್ರಮುಖ ಪಾತ್ರ ವಹಿಸುತ್ತವೆ ಆದರೆ ಕೇಂದ್ರ ಯಾವುದೇ ರಾಜ್ಯ ಸರಕಾರದ ಜೊತೆ ಮಾತುಕತೆ ನಡೆಸದೇ ಧೋರಣಾ ನೀತಿಯನ್ನು ಅನುಸರಿಸಿದೇ, ಸಣ್ಣ ರೈತರು ಪಂಪ್ಸೆಟ್ಗಳನ್ನು ಹೆಚ್ಚಾಗಿ ತೋಟಗಾರಿಕಾ ಬೆಳೆಗಳು, ವಾಣಿಜ್ಯ ಬೆಳೆಗಳ ಜೊತೆ ಹೈನುಗಾರಿಕೆಗೆ ಒತ್ತು ನೀಡುವಂತೆ ಮಾಡಿದೆ ಆದರೆ ಇಂದು ಕೇಂದ್ರ ಸರಕಾರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಯಿಂದ ರೈತರ ಸೇರಿದಂತೆ ಇನ್ನಿತರೆ ಸಣ್ಣ ಉದ್ದಿಮೆದಾರರ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹೊಡೆತ ಬೀಳಲಿದೆ, ಪಂಪ್ಸೆಟ್ಗಳಿಗೆ ನೀಡುವ ವಿದ್ಯುತ್ ಸಬ್ಸಿಡಿ ನೀಡುವಂತೆ ಹತ್ತಾರು ಸರೆ ಬೇಡಿಕೆ ಇಡಲಾಗಿದೆ, 45ಲಕ್ಷ ಕೃಷಿ ಪಂಪ್ಸೆಟ್ಗಳಿದ್ದು ನೇರವಾಗಿ 4ಕೋಟಿ 50ಲಕ್ಷ ಕುಟುಂಬಗಳು ಆಸರೆಯಾಗಿವೆ ಮತ್ತು ಪರೋಕ್ಷವಾಗಿ 80ರಷ್ಟು ಭಾಗ ಈ ಪಂಪ್ಸೆಟ್ ಬೆಳೆಗಳ ಮೇಲೆ ಅವಲಂಬಿತವಾಗಿವೆ.ಸೆಪ್ಟೆಂಬರ್ ತಿಂಗಳಲ್ಲಿ ಅಧಿಕೃತವಾದ 25ಸಾವಿರ ಪಂಪ್ಸೆಟ್ದಾರರಿಂದ ಬೃಹತ್ ಸಮಾವೇಶ ಮಡಿಸುವುದರ ಮುಖಾಂತರ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗುವುದು, ಕೂಡಲೇ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುಧ್ಧ ಕಿಡಿ ಕಾರಿದರು.
ಈ ಸಂರ್ಭದಲ್ಲಿ ರೈತ ಸಂಘದ ರಾಜ್ಯ ವಿಭಾಗೀಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ, ವಿಜಯನಗರ ಜಿಲ್ಲಾಧ್ಯಕ್ಷ ಸಿದ್ದನಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಆಲಂಬಾಷಾ, ತಾಲೂಕಾಧ್ಯಕ್ಷ ಹರಟೆ ಕಾಳಪ್ಪ, ಉಪಾಧ್ಯಕ್ಷ ನಾಗಲಾಪುರ ವೀರಣ್ಣ, ಮುಖಂಡ ಪ್ರಜಾಸಿಂಹ ಸೇರಿದಂತೆ ರೈತ ಸಂಘದ ಸದಸ್ಯರುಗಳು ಭಾಗವಹಿಸಿದ್ದರು.