ಶಾಸಕ ಲಕ್ಷ್ಮಣ ಸವದಿ ಪುತ್ರನ ಕೊರಳಿಗೂ ಸುತ್ತಿಕೊಂಡ ಹುಲಿ ಉಗುರಿನ ಪ್ರಕರಣ

ಶಾಸಕ ಲಕ್ಷ್ಮಣ ಸವದಿ ಪುತ್ರನ ಕೊರಳಿಗೂ ಸುತ್ತಿಕೊಂಡ ಹುಲಿ ಉಗುರಿನ ಪ್ರಕರಣ

ಬೆಳಗಾವಿ : ರಾಜ್ಯದ ತುಂಬೆಲ್ಲ ಸದ್ದು ಮಾಡುತ್ತಿದ್ದ ಹುಲಿ ಉಗುರು ಹಾಗೂ ಚರ್ಮದ ನಂಟು ಈಗ ಬೆಳಗಾವಿ ರಾಜಕಾರಣಿಗಳ ಮಕ್ಕಳಿಗೂ ಅಂಟಿಕೊಂಡಿದ್ದು, ಅಥಣಿ ಶಾಸಕ ಲಕ್ಣ್ಮಣ ಸವದಿ ಅವರ ಪುತ್ರನ ಕೊರಳಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಹಾಕಿಕೊಂಡಿರುವ ಪೋಟೊ ಒಂದು ವೈರಲ್ ಆಗಿದೆ. 

    ಅತ್ತ ರಾಜ್ಯದಲ್ಲಿ ಚಿತ್ರ‌ನಟರು ಹಾಗೂ ರಾಜಕೀಯ ಮುಖಂಡರ ಕೊರಳಲ್ಲಿ ಹುಲಿ ಉಗುರು ಪತ್ತೆಯಾಗುವ ಸುದ್ದಿ ರಾಜ್ಯದ ತುಂಬೆಲ್ಲ ಸಂಚಲನ ಮೂಡಿಸುತ್ತಿರುವಾಗ ಇತ್ತ ಬೆಳಗಾವಿ ರಾಜಕಾರಣಿ ಮಕ್ಕಳು ಕೊರಳಲ್ಲಿ ಹುಲಿ ಉಗುರು ಹಾಕಿಕೊಂಡಿರುವ ಪೋಟೊಗಳು ವೈರಲ್ ಆಗತೋಡಗಿವೆ. 

     ನಿನ್ನೆಯಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ ಮೃಣಾಲ ಹೆಬ್ಬಾಳಕರ್ ಅವರ ಕೊರಳಲ್ಲಿ ಹುಲಿ ಉಗುರು ಪೆಂಡೆಂಟ್ ಹಾಕಿಕೊಂಡಿದ್ದ ಪೊಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬೆನ್ನಲ್ಲೆ ಶುಕ್ರವಾರ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಪುತ್ರನ ಕೊರಳಲ್ಲಿ ಹುಲಿ ಉಗುರು ಹಾಕಿಕೊಂಡಿರುವ ಪೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನನ್ನ ಸಹೋದರನ ಕೊರಳಲ್ಲಿರುವದು ಪ್ಲಾಸ್ಟಿಕ್ ಉಗುರು : 

   ಲಕ್ಷ್ಮಣ್ ಸವದಿ ಪುತ್ರ ಸುಮಿತ್ 'ಹುಲಿ ಉಗುರು' ಪೆಂಡೆಂಟ್ ಧರಿಸಿದ ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿಯಲ್ಲಿ ಲಕ್ಷ್ಮಣ್ ಸವದಿ ಹಿರಿಯ ಪುತ್ರ ಚಿದಾನಂದ ಸವದಿ ಸ್ಪಷ್ಟನೆ ನೀಡಿದ್ದಾರೆ.

  ನನ್ನ ಸಹೋದರ ಬಳಿ ಇರೋದು ಪ್ಲಾಸ್ಟಿಕ್ ಉಗುರು. ಬಂಗಾರದ ಸರ ಇದ್ದು 'ಹುಲಿ ಉಗುರು' ಮಾದರಿ ಪ್ಲಾಸ್ಟಿಕ್‌ದ್ದು ಇದೆ. ಮದುವೆ ಸಮಾರಂಭದಲ್ಲಿ ಸುಮಿತ್ ಗೆಳೆಯರು ಉಡುಗೊರೆ ಕೊಟ್ಟಿದ್ದಾರೆ‌ ಎಂದು ಸ್ಪಷ್ಟನೆ ನೀಡಿದ್ದಾರೆ.

   ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅದನ್ನ ಕೊಟ್ಟಿದ್ದೇವೆ. ಕಾನೂನಿನಿಗಿಂತ ಯಾರೂ ದೊಡ್ಡವರಲ್ಲ, ತನಿಖೆಗೆ ಸಹಕರಿಸುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಹುಲಿ ಉಗುರು ಎಂದು ಧರಿಸುವುದು ಒಂದ್ ರೀತಿ ಶೋಕಿಯಾಗಿದೆ.

ಗೌಡರು ಅದನ್ನ ಧರಿಸ್ತಾ ಇದ್ರು ಈಗ ಅದು ಫ್ಯಾಶನ್ ಆಗಿದೆ ಅಷ್ಟೇ. ಸುಮಿತ್ ಪ್ರವಾಸದಲ್ಲಿದ್ದಾರೆ. 4 ದಿನಗಳಲ್ಲಿ ವಾಪಸ್ ಆಗುತ್ತಾರೆ. ತಂದೆ ಕೂಡ ಮಾತನಾಡಿದ್ದಾರೆ. ಇಲಾಖೆ ಒಪ್ಪಿಸಲು ಹೇಳಿದ್ದು ಸಹಕರಿಸುವಂತೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಇದು ಅಸಲಿ ಉಗುರು ಅಲ್ಲ. ಪ್ಲಾಸ್ಟಿಕ್ ನಿಂದ ಮಾಡಿರುವ ಹುಲಿ ಉಗುರಿನ ಆಕೃತಿ ಆಗಿದೆ. ಉಗುರು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. 

   FSL ವರದಿ ಬರಲಿ, ವರದಿ ಬಳಿಕ ಏನೆ ಕ್ರಮ ಕೈಗೊಂಡರು ನಾವು ಸಹಕಾರ ನೀಡುತ್ತೇವೆ. ಎಲ್ಲಾ ತನಿಖೆಗೂ ನಾವು ಸಿದ್ದ ಎಂದು ಶಾಸಕ ಲಕ್ಮಣ ಸವದಿ ಅವರ ಹಿರಿಯ ಪುತ್ರ ಚಿದಾನಂದ ಸವದಿ ಹೇಳಿದ್ದಾರೆ.

ಸುದ್ದಿ ಓದಿ