ಭೀಮ್ ಆರ್ಮಿಯ ಮೂಲ ಉದ್ದೇಶವೇ ಸಂವಿಧಾನ ರಕ್ಷಣೆ: ರಾಘವೇಂದ್ರ
ಲೋಕದರ್ಶನ ವರದಿ
ಬಳ್ಳಾರಿ 04: ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ರವರ ತತ್ವಾದರ್ಶಗಳನ್ನು ಪಾಲಿಸುತ್ತಾ, ಅವರ ಹಾದಿಯಲ್ಲಿಯೇ ನಡೆದು ಸಮಾಜಕ್ಕಾಗಿ ಏನನ್ನಾದರೂ ಒಳಿತು ಮಾಡುವ ಉದ್ದೇಶದಿಂದಲೇ ಭೀಮ್ ಆರ್ಮಿಯನ್ನು ಇಂದು ಸ್ಥಾಪಿಸಿದ್ದೇವೆ. ಭೀಮ್ ಆರ್ಮಿಯ ಮೂಲ ಉದ್ದೇಶವೇ ಸಂವಿಧಾನ ರಕ್ಷಣೆ ಎಂದು ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ರಾಘವೇಂದ್ರ ಸಿ. ತಿಳಿಸಿದರು.
ಭಾನುವಾರ ಬಿಡಿಎಎ ಫುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ಭೀಮ್ ಆರ್ಮಿ ಸಂಘಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಮಾಜ ಸೇವಕ ಬಿ.ಸಿಮ್ರನ್ ಅವರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದ ನಂತರ ಸಂಘದ ಅಧ್ಯಕ್ಷರು ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸವಾಲುಗಳನ್ನು ಸಂಘಟನೆಯ ಮೂಲಕ ಪರಿಷ್ಕರಿಸಲು ಶಕ್ತಿ ಮೀರಿ ಶ್ರಮಿಸುವುದಾಗಿ, ಇದಕ್ಕೆ ಸಂಘದ ಪ್ರತಿಯೊಬ್ಬರೂ ಕಟುಬದ್ಧರಾಗಿರುತ್ತಾರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮೈನಾರಿಟಿ ಮತ್ತು ಹಿಂದುಳಿದ ವರ್ಗಗಳ ಯುವಕರೆಲ್ಲರೂ ಒಗಟ್ಟಿನಿಂದ ಕೆಲಸ ನಿರ್ವಹಿಸುವ ಅವಶ್ಯ ಇದೀಗ ಒದಗಿ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯೂನ್ 14ರ ಸಂಪಾದಕರಾದ ಭಾಸ್ಕರ್ ಪ್ರಸಾದ್ ಅವರು ಮಾತನಾಡುತ್ತಾ, ಸಂಘ, ಸಂಸ್ಥೆಗಳು ಸಮಾಜದ ಏಳಿಗಾಗಿ ಮಾಧ್ಯಮಗಳನ್ನು ಉಪಯೋಗಿಸುವ ವಿಧಿ-ವಿಧಾನಗಳನ್ನು ಎಳೆ ಎಳೆಯಾಗಿ ವಿವರಿಸಿದರು. ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪಿ.ಅರಡಿ ಮಲ್ಲಯ್ಯ ಕಟ್ಟೇರ ಇವರು ಮಾತನಾಡುತ್ತ, ಸಂಘಟನೆ ಯಶಸ್ವಿಯಾಗಲು ಪಾಲನೆಯಾಗಬೇಕಾದ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸಿದರು. ಅದೇರೀತಿ ಅಂಬೇಡ್ಕರ್‌ರವರ ಪೂನಾ ಒಪ್ಪಂದದ ಬಗ್ಗೆ ವಿವರಿಸಿದರು.
ರಾಜ್ಯಾಧ್ಯಕ್ಷರಾದ ಮತಿನ್ ಕುಮಾರ್, ದಕ್ಷಿಣ ಕನಾಟಕ ಅಧ್ಯಕ್ಷರಾದ ರಾಜಗೋಪಾಲ್, ರಾಜ್ಯ ಉಪಾಧ್ಯಕ್ಷರಾದ ಖಾಲಿದ್ ಹುಸೇನ್, ಪ್ರಧಾನ ಕಾರ್ಯದರ್ಶಿ ಕೆ.ವೆಂಕಟೇಶುಲು, ಕಾರ್ಯಾಧ್ಯಕ್ಷ ಅಕ್ರಂ ಪೀರ್, ಸಂಘದ ಕಾನೂನು ಸಲಹೆಗಾರರಾದ ಎಂ.ಎಂ.ಕೊತ್ವಾಲ್ ಅವರುಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಇಫ್ತಿಕಾರ್ ಅಹಮ್ಮದ್, ವಿನೋದ್ ಕುಮಾರ್, ರಾಘವೇಂದ್ರ, ನಾಗೇಶ್, ಶಶಿಧರ್, ಮಲ್ಲಿಕಾರ್ಜುನ, ನವೀನ್, ಕೋನಪ್ಪ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.