ರೈತರ ಅಭಿಪ್ರಾಯ ಹಾಗೂ ಮೂಲಾದಾರವಿಲ್ಲದೇ ರೈತರ ಜಮೀನುಗಳ ಮೇಲೆ ವಕ್ಫ್ ಬೋಡ್ ಇಲಾಖೆಯವರು ಅಕ್ರಮ
ರೈತರ ಅಭಿಪ್ರಾಯ ಹಾಗೂ ಮೂಲಾದಾರವಿಲ್ಲದೇ ರೈತರ ಜಮೀನುಗಳ ಮೇಲೆ ವಕ್ಫ್ ಬೋಡ್ ಇಲಾಖೆಯವರು ಅಕ್ರಮ
ಮುದ್ದೇಬಿಹಾಳ 05 : ರೈತರ ಅಭಿಪ್ರಾಯ ಹಾಗೂ ಮೂಲಾದಾರವಿಲ್ಲದೇ ರೈತರ ಜಮೀನುಗಳ ಮೇಲೆ ವಕ್ಫ್ ಬೋಡ್ ಇಲಾಖೆಯವರು ಅಕ್ರಮವಾಗಿ ಉತಾರೆಯಲ್ಲಿ ವಕ್ಫ್ ಸರಕಾರ ಎಂದು ನಮೂದಿಸಿದ್ದನ್ನು ಖಂಡಿಸಿ ತಾಲ್ಲೂಕಿನ ಕುಂಟೋಜಿ ಬಿದರಕುಂದಿ ಗ್ರಾಮದ ರೈತರು ರೈತಪರ ಸಂಘಟನೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಶಿಲ್ದಾರ ಬಲರಾಮ ಕಟ್ಟಿಮನಿಯವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ಮೂಲಕ ಜಮೀನಿನ ಮೇಲೆ ದಾಖಲಾಗಿರುವ ವಕ್ಸ್ ಮಂಡಳಿ ಕರ್ನಾಟಕ ಸರ್ಕಾರ ಹೆಸರನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು,
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹುಡ್ಕೋ ಬಡಾವಣೆಯಲ್ಲಿರುವ ತಹಶೀಲ್ದಾರ್ ಕಚೇರಿ ಆವರಣಕ್ಕೆ ತೆರಳಿ ಈ ವೇಳೆ ಸರ್ಕಾರದ ಆದೇಶದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ 1973ರ ಗೆಜೆಟ್ನಲ್ಲಿ ವಕ್ಸ್ ಆಸ್ತಿ ಹಾಗೂ ಪಹಣಿಗಳಲ್ಲಿನ ಮಂಡಳಿ ಕರ್ನಾಟಕ ಸರ್ಕಾರ ತಗೆದು ಹಾಕಬೇಕು ಎಂದರು
ಮುಖಂಡ ಸಿದ್ದು ಹೆಬ್ಬಾಳ ಮಾತನಾಡಿ ತಾಲೂಕಿನ ಕುಂಟೋಜಿ ಹಾಗೂ ಬಿದರಕುಂದಿ ಗ್ರಾಮಗಳ ಬಹುತೇಕ ರೈತರ ಜಮೀನುಗಳು ಇನಾಮು ಜಮೀನುಗಳಾಗಿದ್ದವು ಆದರೇ 1961ರಲ್ಲೇ ಇವುಗಳ ಉತಾರೆಯಲ್ಲಿದ್ದ ಸರಕಾರ ಎಂದು ನಮೂದಿಸಿದ್ದನ್ನು ತೆಗೆದು ಹಾಕಿ ಸಂಪೂರ್ಣ ರೈತರ ಮಾಲಿಕರು ಎಂಬುದನ್ನು ಖಚಿತ ಪಡಿಸಲಾಗಿತ್ತು, ಆದರೇ ವಕ್ಫ್ ಮಂಡಳಿಯವರು ಏಕಾಏಕಿ ಕೆಲ ಸರ್ವ ನಂಬರ ಗಳ ಉತಾರದಲ್ಲಿ ವಕ್ಫ್ ಸರಕಾರ ಎಂದುನಮೂದಿಸಿದೆ. ಇಂತಹ ಅನೇಕ ಪ್ರಕರಣಗಳನ್ನು ಗಮನಿಸಿದ್ದರೂ ಯಾರೂ ಕೂಡ ರೈತರ ಪರವಾಗಿ ವಕ್ಫ್ ಮಂಡಳಿಯ ವಿರುದ್ಧ ಧ್ವನಿ9 ಎತ್ತುವ ಧೈರ್ಯ ಮಾಡಿರಲಿಲ್ಲ ಆದರೇ ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರು ರೈತರ ಪರವಾಗಿ ವಕ್ಫ ಮಂಡಳಿಯ ವಿರುದ್ಧ ಧ್ವಿನಿ ಎತ್ತುವ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಲ್ಲದೇ ರೈತರ ಪರವಾಗಿ ನಿಂತಿರುವ ಏಕೈಕ ನಾಯಕರಾಗಿದ್ದಾರೆ.ಸಧ್ಯ ಉತಾರದಲ್ಲಿ ನಮೂದಿಸಿದ ತಕ್ಷಣ ರೈತರ ಜಮೀನುಗಳ ಮೇಲೆ ಇರುವ ವಕ್ಸ್ ಬೋರ್ಡ್ ಪದವನ್ನು ತೆಗೆದು ಹಾಕಿ ರೈತರಿಗೆ ನ್ಯಾಯ ಒದಗಿಸಬೇಕು ಇಲ್ಲದಿದ್ದರೇ ಇದೇ ನ.6 ರಿಂದ ಪಟ್ಟಣದ ತಹಶಿಲ್ದಾರ ಕಚೇರಿ ಎದುರು ನೂರಾರು ರೈತರ ಸಮ್ಮುಖದಲ್ಲಿ ಆಮರಣ ಉಪವಾಸ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಗತಿಪರ ರೈತ ಭೀಮಸಿ ಹೂಗಾರ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಓಡಾಡಿ ಓಟ ಹಾಕಿಸಿಕೊಂಡದ್ದೇವೆ ಆದರೇ ಇಂದು ರೈತರ ಆಗಿರುವ ಅನ್ಯಾಯದ ವಿರುದ್ದ ರೈತರ ಪರವಾಗಿ ನಿಲ್ಲಬೇಕಾಗಿದೆ ಈ ನಿಟ್ಟಿನಲ್ಲಿ ಶಾಸಕ ಸಿ ಎಸ್ ನಾಡಗೌಡ ಅವರು ರೈತರ ದ್ವನಿಯಾಗಿ ಮುಂಬರುವ ಅದಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ರೈತರ ಪರವಾಗಿ ನಿಲ್ಲಬೇಕು ಎಂದರು.
ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿ, ಕುಂಟೋಜಿ ಸರ್ವೆ ನಂಬರ್ 277, 278,279,289 290,291, 300,301, 303, 304, 305, 311, 312, 313, 466/2ರಲ್ಲಿ ಅಂದಾಜು 380 ಜಮೀನುಗಳನ್ನು ಕೆಲವರು ಖರೀದಿ ಮಾಡಿದ್ದು ಇನ ಕೆಲವರ ಆಸ್ತಿಗಳು ಪಿತ್ರಾರ್ಜಿತ ಆಸ್ತಿಗಳಿವೆ. ಈ ರೀತಿಯ ಜಮೀನುಗಳಲ್ಲಿ 2019 ಜನವೇರಿಯಲ್ಲಿ ವಕ್ಸ್ ಆಸ್ತಿ ಕರ್ನಾಟಕ ಸರಕಾರ ಅಂತ 11ನೇ ಕಾಲಂನಲ್ಲಿ ನಮೂದಿಸಲಾಗಿದೆ.ಇದರಿಂದ ರೈತರು ಸರಕಾರದ ಯಾವುದೇ ಸೌಲಭ್ಯ, ಸಾಲ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗದೇ ಕಂಗಾಲಾಗಿದ್ದಲ್ಲದೇ ಅನ್ಯಾಯವಾಗಿದ್ದರಿಂದ ಅಸಹಾಯಕ ಸ್ಥಿತಿಯಲ್ಲದ್ದಾರೆ. ಈಕೂಡಲೆ ನಮ್ಮ ರೈತರಿಗೆ ನ್ಯಾಯ ಒದಗಿಸಬೇಕು ಎಂದರು.
ಮುಖಂಡರಾದ ಗುರುಲಿಂಗಪ್ಪ ಸುಲ್ಲಳ್ಳಿ, ಸಂತೋಷಗೌಡ ಬಿರಾದಾರ, ಗುರುಪಾದ ಹೆಬ್ಬಾಳ, ಅಬ್ಬಿಹಾಳಮಠ ಮಲ್ಲಿಕಾರ್ಜುನ ನಾಟಿಕಾರ, ಸಚೀನ ಚಿನ್ನಾಪೂರ, ಈರಣ್ಣ ಹೂಗಾರ, ಸಂಗಣ್ಣ , ದುರ್ಗಪ್ಪ ಕವಡಿಮಟ್ಟಿ ಸೇರಿದಂತೆ ಕುಂಟೋಜಿ ಹಾಗೂ ಬಿದರಕುಂದಿ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದರು.