ನೇರಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ
ಹುಕ್ಕೇರಿ 30: ನೇರಲಿ ಗ್ರಾಮದ ಅಭಿವೃದ್ಧಿಗಾಗಿ ಮಸರಗುಪ್ಪಿ ಗ್ರಾಮದ ಹಿರಿಯ ಬಶೀರಬೇಗ ಇನಾಮದಾರ ಮತ್ತು ನೇರಲಿ ಗ್ರಾಮದ ಜಾಧವ ಕುಟುಂಬ ಹಾಗೂ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ನೂತನ ಸದಸ್ಯರು ರಾಜ್ಯದಲ್ಲಿಯೆ ನೇರಲಿ ಗ್ರಾಮ ಮಾದರಿ ಗ್ರಾಮವಾಗಲು ನಾವೆಲ್ಲರೂ ಸಹಕಾರ ಮಾಡುತ್ತೆವೆ ಎಂದು ಸಭೆಯಲ್ಲಿ ನೂತನ ಸದಸ್ಯರನ್ನು ಉದ್ದೇಸಿಸಿ ಬಸವಪ್ರಸಾದ ಸಂಕಪಾಳ ಮಾತನಾಡಿದರು.
ಜ. 30 ಮಹಾತ್ಮಾಗಾಂಧಿಜಿ ಯವರ ಪುಣ್ಯಸ್ಮರಣೆ ನಿಮಿತ್ಯ ನೂತನ ಸದಸ್ಯರು ಎರಡು ನಿಮಿಷ ಮೌನ ಆಚರಿಸಿ ಮೊದಲ ಸಭೆಯನ್ನು ಪ್ರಾರಂಭಿಸಿದರು.
ತಾಲೂಕಿನ ನೇರಲಿ ಗ್ರಾಮದ ಗ್ರಾಮಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮ ಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾ ಅಧಿಕಾರಿ ಮಹಾದೇವ ಪಟಗುಂದಿ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿ ಮಾಳಗೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದುಂಡಪ್ಪಾ ಕಡಕಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ನಂತರ ನೂತನ ಅಧ್ಯಕ್ಷ ಲಕ್ಷ್ಮಿ ಮಾಳಗೆ ಮತ್ತು ದುಂಡಪ್ಪಾ ಖಡಕಿ ಮಾತನಾಡಿ ಪಂಚಾಯತಿ ಸದಸ್ಯರ ಮತ್ತು ಗ್ರಾಮದ ಹಿರಿಯರಾದ ಬಶೀರಬೇಗ ಇನಾಮದಾರ ,ನಿಲೇಶ ಜಾಧವ ಹಾಗೂ ಪಾಂಡುರಂಗ ಖೋತ ಹಾಗೂ ಗ್ರಾಮಸ್ಥರ ಸಹಕಾರದಿಂದ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಲಾಗುವದು ಎಂದರು . ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಮಹಾದೇವ ಪಟಗುಂದಿ,ಅಭಿವೃದ್ಧಿ ಅಧಿಕಾರಿ ಅವಿನಾಶ ಹೋಳೆಪ್ಪಗೋಳ, ಬಶೀರಬೇಗ ಇನಾಮದಾರ, ನೀತಿನ ಜಾಧವ, ನೀಲೇಶ ಜಾಧವ, ಅನಿಲ ಪಾಟೀಲ, ಕಲಗೌಡಾ ಪಾಟೀಲ, ಶಿವಾನಂದ ಹಂದಿಗುಡ ಮಠ, ಶಂಕರ ಸಂಕಪಾಳ ಹಾಗೂ ನೂತನ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.