ಸಂಭ್ರಮದ ನಯಾನಗರ ಐತಿಹಾಸಿಕ ಬಸವೇಶ್ವರ ರಥೋತ್ಸವ

ಸಂಭ್ರಮದ ನಯಾನಗರ ಐತಿಹಾಸಿಕ ಬಸವೇಶ್ವರ ರಥೋತ್ಸವ

ಲೋಕದರ್ಶನ ವರದಿ 

ಸಂಭ್ರಮದ ನಯಾನಗರ ಐತಿಹಾಸಿಕ ಬಸವೇಶ್ವರ ರಥೋತ್ಸವ  

ಬೈಲಹೊಂಗಲ 28: ಸಮೀಪದ ನಯಾನಗರ ಗ್ರಾಮದ ಇತಿಹಾಸ ಪ್ರಸಿದ್ಧ ಬಸವೇಶ್ವರ ಜಾತ್ರಾ ರಥೋತ್ಸವ ಸಡಗರ ಸಂಭ್ರಮದಿಂದ, ಭಕ್ತರ ಹರ ಹರ ಮಹಾದೇವ ಎಂಬ ಹರ್ಷೋದ್ಧಾರ ಮುಗಿಲು ಮುಟ್ಟುವ ಮೂಲಕ ವಿಜೃಂಭಣೆಯಿಂದ ಜರುಗಿತು. 

 ರಥವು ರುದ್ರಾಕ್ಷಿಯ ಮಾಲೆ ತರ ತರನಾದ ಹೂವಿನ ಮಾಲೆಗಳಿಂದ ಕಂಗೊಳಿಸಿತು. ಭಕ್ತರು ರಥೋತ್ಸವಕ್ಕೆ ಹೂವು, ಹಣ್ಣು, ನೈವೇದ್ಯ, ಖಾರಿಕ ಸಮರ​‍್ಿಸಿ ಪುಳಕಿತರಾದರು ರಥೋತ್ಸವದ ಹಾದಿಯುದ್ದಕ್ಕೂ ಭಕ್ತರು ಹಸಿರು ತಳಿರು ತೋರಣ, ರಂಗೋಲಿಗಳಿಂದ ಬೀದಿ-ಬೀದಿಗಳನ್ನು ಶೃಂಗರಿಸಿದ್ದರು. ಸಾರ್ವಜನಿಕರು ಜಾನಪದ ಶೈಲಿಯ ತರ-ತರನಾದ ವೇಷ-ಭೋಷಣಗಳಿಂದ ಕಂಗೊಳಿಸಿ ರಥೋತ್ಸವಕ್ಕೆ ಮೆರಗು ತಂದು ಕೊಟ್ಟರು. ರಥವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ರಥೋತ್ಸವಕ್ಕೆ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ಚಾಲನೆ ನೀಡಿದರು. 

 ರಥೋತ್ಸವದಲ್ಲಿ ಜಾತ್ರಾ ಕಮಿಟಿ ಮುಖಂಡರಾದ ದೇಮನಗೌಡ ಶೀಲವಂತರ, ಶ್ರೀರಂಗರಾವ ನಲವಡೆ, ನಾರಾಯಣ ಶಿರೋಮನಿ, ನಾರಾಯಣ ಆನಂದರಾವ ನಲವಡೆ, ಮಹಾಬಳೇಶ್ವರ ಮೆರೆಕ್ಕನವರ, ರಾವಸಾಹೇಬ ಸೂರ್ಯವಂಶಿ, ಗ್ರಾಮ ಪಂಚಾಯತ ಅಧ್ಯಕ್ಷ ಮಹಾಂತೇಶ ಮರೆಕ್ಕನವರ, ಪ್ರೌಢ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ನಲವಡೆ, ಮಹಾಂತೇಶ ಪಾಟೀಲ, ವೀರನಗೌಡ ಹುಲೆಪ್ಪನವರ, ಸಚಿನ ಪಾಟೀಲ, ಗಂಗಯ್ಯಾ ಹಿರೇಮಠ, ಶ್ರೀಕಾಂತಗೌಡ ಪಾಟೀಲ, ಬಸವಣ್ಣೆಪ್ಪ ಮಡಿವಾಳರ, ರಮೇಶ ಸಂಗೊಳ್ಳಿ, ಮಂಜುನಾಥ ಜೋರಾಪುರ, ಶಿವಾಜಿ ಕಲಾಲ, ಪ್ರಕಾಶ ಅಡಕಿ, ಮಲ್ಲಪ್ಪ ಕಾಂಬಳೆ, ಯಲ್ಲಪ್ಪ ಹೂವಿನ, ಈರಣ್ಣ ಉಗರಖೋಡ, ಮುದಕಪ್ಪ ತೋಟಗಿ ಸೇರಿದಂತೆ ಎಲೆ ಮರೆ ಕಾಯಿಯಂತೆ ಸಹಸ್ರಾರು ಜನರು ಸೇವೆ ಸಲ್ಲಿಸಿ ಕೃತಾರ್ಥರಾದರು. 

ಜಾತ್ರಾ ನಿಮಿತ್ಯ ಗ್ರಾಮದ ಮುಖಂಡರು ಹಾಗೂ ಯುವಕರು ಸ್ಪರ್ದಾತ್ಮಕ ಪರೀಕ್ಷೆ, ರಂಗೋಲಿ ಸ್ಪರ್ದೆಗಳನ್ನು ಏರಿ​‍್ಡಸಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಿ ಅರ್ಹತೆ ಪಡೆದವರಿಗೆ ಬಹುಮಾನಗಳನ್ನು ವಿತರಿಸಿದರು, ಶಿವರಾತ್ರಿ ನಿಮಿತ್ಯ ಪ್ರವಚನ ಕಾರ್ಯಕ್ರಮ ಜರುಗಿತು. 

ಬೈಲಹೊಂಗಲ, ಆನಿಗೋಳ, ಅಮಟೂರ, ಬೇವಿನಕೊಪ್ಪ, ದೇವಲಾಪೂರ, ವಕ್ಕುಂದ, ಕೆಂಗಾನೂರ, ಅರವಳ್ಳಿ ಜಾಲಿಕೊಪ್ಪ ಗರ್ಜೂರ ಸಂಗೊಳ್ಳಿ, ಬೆಳವಡಿ ಸೇರಿದಂತೆ ಇನ್ನೂ ಮುಂತಾದ ಗ್ರಾಮಗಳ ಜನರು ಉಪಸ್ಥಿತರಿದ್ದರು.  

ಶಿಕ್ಷಕ ಮಹಾಂತೇಶ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ವೆಂಕಟೇಶ ಬಾಗಲ ನಿರೂಪಿಸಿದರು. ಶಿಕ್ಷಕ ಸಂತೋಷ ಸಂಗೊಳ್ಳಿ ವಂದಿಸಿದರು. 


ಸುದ್ದಿ ಓದಿ