ಲಯನ್ಸ್ ಕ್ಲಬ್ ಸಾಮಾಜಿಕ ಕಾರ್ಯಗಳಿಗಾಗಿ ಅಂತರಾಷ್ಟ್ರೀಯ ಖ್ಯಾತಿ ಹೊಂದಿದೆ
ಪ್ರೋ.ಬಸವರಾಜ ಕೊಣ್ಣೂರ ಅಭಿಮತ: ಲಯನ್ಸ್ ಕ್ಲಬ್, ಗ್ರೀನ್ ಬೇಸಿನ್ಗೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಮಹಾಲಿಂಗಪುರ 16: ವಿಶ್ವವೇ ನನ್ನ ಕುಟುಂಬ ಎಲ್ಲರ ಏಳ್ಗೆಯೇ ನನ್ನ ಶ್ರೇಯಸ್ಸು ಎಂದು ಪಾರದರ್ಶಕವಾಗಿ ಸಾಮಾಜಿಕ ಕಳಕಳಿ ಹೊಂದಿರುವ ಲಯನ್ಸ್ ಕ್ಲಬ್ ವಿಶ್ವ ಜನರ ಮೆಚ್ಚುಗೆಯೊಂದಿಗೆ ಅಂತರಾಷ್ಟ್ರೀಯ ಖ್ಯಾತಿ ಪಡೆದುಕ್ಕೊಂಡಿದೆ ಎಂದು ಕೊಣ್ಣೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಸದಸ್ಯರೂ ಆದ ಪ್ರೋ.ಬಸವರಾಜ ಕೊಣ್ಣೂರ ಹೇಳಿದರು.
ಶನಿವಾರ ಸಂಜೆ ವೈದ್ಯ ಸಂಘದ ಸಭಾಭವನದಲ್ಲಿ ಲಯನ್ಸ್ ಕ್ಲಬ್ ಮಹಾಲಿಂಗಪುರ ಗ್ರೀನ್ ಬೇಸಿನ್ ಗೆ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಅಧಿಕಾರಿ ಹಾಗೂ ಅತಿಥಿಗಳಾಗಿ ಉಪಸ್ಥಿತರಿದ್ದು ಕಳೆದ ವರ್ಷದಲ್ಲಿ ಉತ್ತಮ ಆಡಳಿತ ನಡೆಸಿದ ಲಯನ್ಸ್ ಮಂಡಳಿಗೆ ಮತ್ತು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಒಕ್ಕೂಟದಲ್ಲಿ ವಿಶ್ವದೆಲ್ಲೆಡೆ ಅಂದಾಜು 80ಸಾವಿರ ಸದಸ್ಯರು ಸಕ್ರಿಯರಾಗಿ ಜೇನು ಗೂಡಿನ ತರಹ ಮಾನವ ಸೇವೆಯ ಒಂದೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತ ಕ್ಲಬ್ ಗೆ ಒಳ್ಳೆಯ ಹೆಸರು ತಂದಿದ್ದು ಅಲ್ಲದೆ ಈ ವೇದಿಕೆಯು ಸದಸ್ಯರಲ್ಲಿ ಉತ್ಕೃಷ್ಟ ನಾಯಕತ್ವದ ಗುಣಗಳನ್ನು ಸಹ ಬೆಳೆಸುತ್ತದೆ.ಇದು ಕಾರ್ಯ ರೂಪಕ್ಕೆ ಬರಬೇಕಾದರೆ ಜಾಣತನದಿಂದ ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು.
ರೀಜನಲ್ ಚೇರಪರ್ಸನ್ ಶಶಿಕಾಂತ ಜೋಷಿ ಮಾತನಾಡಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅಚ್ಚುಕಟ್ಟಾಗಿ ಮತ್ತು ವಿಶಿಷ್ಟವಾಗಿತ್ತು ಎಂದು ಕಾರ್ಯಕ್ರಮದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶನಿವಾರ ಮುಂಜಾನೆ ಹಸಿರು ಬೆಳೆಸಿ, ಉಸಿರು ಉಳಿಸಿ ಎಂಬ ಧ್ಯೇಯ ನಾಮದಡಿ ಪಟ್ಟಣದ ವಿವಿಧೆಡೆಗಳಲ್ಲಿ ನೂತನ ಲಾಯನ್ಸ್ ಆಡಳಿತ ಸಸಿಗಳನ್ನು ನೆಟ್ಟು ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿತು.
ಇದೆ ಸಂದರ್ಭದಲ್ಲಿ ಕಝಾಕಿಸ್ತಾನ್ ದಲ್ಲಿ ನಡೆದ 62ದೇಶಗಳ ಪೋಲಿಸ್ ಇಲಾಖೆಗಳ ಈಜು, ಸೈಕ್ಲಿಂಗ್ ಹಾಗೂ ಓಟಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಆಯರನ್ ಮ್ಯಾನ್ ಸಿಪಿಆಯ್ ಶ್ರೀಶೈಲ ಬ್ಯಾಕೋಡ್ ಅವರನ್ನು ಮತ್ತು ನೀಟ್ ಪರಿಕ್ಷೆಯಲ್ಲಿ ಸಾಧನೆಗೈದ ಕುಮಾರಿ ಪ್ರಗತಿ ತಟ್ಟಿಮನಿ, ರಾಜ್ಯ 19 ವಯೋಮಿತಿ ಒಳಗಿನ ಕ್ರಿಕೆಟ್ ನಲ್ಲಿ ಸಾಧನೆ ಮಾಡಿರುವ ಶ್ರೇಯಾ ಚವಾನ್ ಅಲ್ಲದೆ ಕಾರ್ಯ ನಿರತ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ದ್ವಜ ವಂದನೆ ಶ್ರೀಶೈಲ ಕಾರಜೋಳ ನೆರೆವೇರಿಸಿದರು, ನಿಕಟಪೂರ್ವ ಕಾರ್ಯದರ್ಶಿ ಸಚಿನ್ ಗುಂಡಾ 2022-23ರ ವರದಿ ವಾಚನ ಮಾಡಿದರು.ಉಪಾಧ್ಯಕ್ಷ ರಾಜು ತಾಳಿಕೋಟಿ ಪ್ರೋ.ಬಸವರಾಜ ಕೊಣ್ಣೂರ ಅವರ ಕಿರುಪರಿಚಯ ನೀಡಿದರು. ಮಾಲಾರೆ್ಣಯನ್ನು ಡಾ.ಅಶೋಕ ದಿನ್ನಿಮನಿ, ಡಾ.ಎಂ ಎಸ್ ಚನ್ನಾಳ ಪ್ರಾರ್ಥಿಸಿ, ರಮೇಶ್ ಶೆಟ್ಟರ್, ವಂದಿಸಿದರು.ಸಿದ್ದು ನಕಾತಿ ಹಾಗೂ ಶಶಿಧರ ಉಳ್ಳೇಗಡ್ಡಿ ನಿರೂಪಿಸಿದರು.
ಡಾ.ಅನುಪ ಹಂಚಿನಾಳ, ಡಾ.ವಿಶ್ವನಾಥ ಗುಂಡಾ, ಡಾ.ಜಬ್ಬಾರ ಯಕ್ಸಂಬಿ, ಡಾ. ವಿನೋದ ಮೇತ್ರಿ, ಚನಬಸು ಯರಗಟ್ಟಿ, ಸಂಜಯ್ಯ ಅಂಬಿ, ಆಧಿನಾಥ ಬಿಂದಿಗೆ, ಪ್ರಕಾಶ ಕೋಳಿಗುಡ್ಡ, ಅನ್ನಾಸಾಹೇಬ ಅವಟಿ, ಪ್ರಶಾಂತ್ ಅಂಗಡಿ, ಸೋಮು ಸಂಶಿ, ಮುಬಾರಕ ಯಕ್ಸಂಬಿ ಇದ್ದರು.
ನೂತನ ಅಧ್ಯಕ್ಷ ಡಾ.ಮಾರುತಿ ಮೇದಾರ, ಉಪಾಧ್ಯಕ್ಷರಾಗಿ ರಾಜು ತಾಳಿಕೋಟೆ, ಸಿದ್ದು ನಕಾತಿ, ಕಾರ್ಯದರ್ಶಿಯಾಗಿ ಶಕುಂತಲಾ ಸಂಶಿ ಹಾಗೂ ಖಜಾಂಚಿಯಾಗಿ ರಾಜು ಡಾಂಗೆ ಹಾಗೂ ಸಂತೋಷ ತಾಳಿಕೋಟಿ, ಪ್ರಕಾಶ ಕೋಳಿಗುಡ್ಡ, ಸೋಮಶೇಖರ ಸಂಶಿ, ಎಂ.ಎಸ್.ಚೆನ್ನಾಳ, ಗೋವಿಂದ ನಿಂಗಸಾನಿ, ರಮೇಶ ಶೆಟ್ಟರ, ಸಂಜಯ ಅಂಬಿ, ಡಾ. ವಿಶ್ವನಾಥ ಗುಂಡಾ, ಡಾ. ಅಶೋಕ ದಿನ್ನಿಮನಿ, ವಿಷ್ಣುಗೌಡ ಪಾಟೀಲ, ಸಂಜೀವ ಕುಮಾರ ಶಿರೋಳ ನೂತನ ಸದಸ್ಯರಾಗಿ ಜವಾಬ್ದಾರಿ ವಹಿಸಿಕೊಂಡರು.