ಹಗರಿಬೊಮ್ಮನಹಳ್ಳಿ

27ರ ಭಾರತ್ ಬಂದ್‍ಗೆ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘವು ಸಂಪೂರ್ಣ ಬೆಂಬಲ

27ರ ಭಾರತ್ ಬಂದ್‍ಗೆ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘವು ಸಂಪೂರ್ಣ ಬೆಂಬಲ

ಹಗರಿಬೊಮ್ಮನಹಳ್ಳಿ 21: ಸೆಪ್ಟಂಬರ್ 27ರಂದು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಭಾರತ ಬಂದ್‍ಗೆ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘವು ಸಂಪೂರ್ಣ ಬೆಂಬಲ ಇದೆ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷೆ ಶಂಶಾದ್ ಬೇಗಂ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ ಕೊರೊನಾ  ಕಥೆ ಕಟ್ಟಿ ಯಾವುದೇ ಪಕ್ಷಗಳ ಜೊತೆ ಸಂವಾದ ನಡೆಸದೆ ಎಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ 3ಕೃಷಿ ಕಾಯ್ದೆಗಳು ರೈತರಿಗೆ ನಿಜಕ್ಕೂ ಮರಣ ಶಾಸನಾಗಿವೆ, ರೈತರ ಹೆಸರಿನಲ್ಲಿ ಅಧಿಕಾರದ ಗದ್ದುಗೆ ಏರಿ ಈಗ ಅದೇ ರೈತರನ್ನು ಹತ್ತಿಕ್ಕುವ ಕಾನೂನುಗಳನ್ನು ರೂಪಿಸಿದರೆ ಹೇಗೆ, ರೈತರು ದೇಶದ ಬೆನ್ನೆಲುಬು ಎಂಬ ಮಾತುಗಳು ಕೇವಲ ಭಾಷಣಕ್ಕೆ ಹಾಗೂ ಪುಸ್ತಕಗಳಿಗೆ ಸೀಮಿತವಾಗಿಸಿ ರೈತರನ್ನು ಪ್ರತಿ ಹಂತದಲ್ಲೂ ಸಬಲತೆಯ ಏಣಿ ಏರದಂತೆ ಮಾಡಲಾಗುತ್ತಿದೆ, ಕೃಷಿ ಕಾಯಿದೆಗಳನ್ನು ಕೂಡಲೆ ರದ್ದು ಪಡಿಸುವಂತೆ ಮತ್ತು ರೈತರ ಬೆಳೆಗಳಿಗೆ ಸರ್ಕಾರ ಘೋಶಿಸಿರುವ ಬೆಂಬಲ ಬೆಲೆ ಗಗನ ಕುಸುಮವಾಗದಂತೆ ಕೈಗೆಟುಕುವಂತೆ ಮಾಡಬೇಕು.

ಕೇಂದ್ರ ಸರಕಾರದ ಹತ್ತಾರು ಕಾನೂನುಗಳು ಕಾರ್ಪೋರೇಟ್ ಕಂಪನಿಗಳ ಪರವಾಗಿವೆ ಅವರ ಅನುಕೂಲಕ್ಕೆ ತಕ್ಕಂತೆ ವ್ಯೆವಸ್ಥೆಯನ್ನು ಬದಲಿಸುತ್ತಿದ್ದಾರೆ, ಕಳೆದ ಹತ್ತು ತಿಂಗಳಿಂದ ದೆಹಲಿಯ ಗಡಿ ಭಾಗದಲ್ಲಿ ಧರಣಿ ಮಾಡುತ್ತಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಇರುವುದು ಖಂಡನೀಯವಾಗಿದೆ.ಕರೋನಾ ಮಹಾಮಾರಿಯಿಂದ ದುಡಿಯುವ ಕೈಗಳನ್ನು ಕಳೆದುಕೊಂಡ ಕುಟುಂಬಗಳು ಇಂದು ಬೀದಿಗೆ ಬಂದು ನಿಂತಿವೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಘೋಶಿಸಿರುವ ಸಹಾಯ ಧನ ಸೇರಿದಂತೆ ಇನ್ನಿತರೆ ಸವಲತ್ತುಗಳು ಪ್ರತಿಯೊಂದು ಫಲಾನುಭವಿಗೆ ದೊರಕಿದೆಯೋ ಇಲ್ಲವೂ ಎಂಬುದನ್ನು ಖತರಿಪಡಿಸಿಕೊಳ್ಳಬೇಕಿದೆ ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿದರು, 27ರ ಭಾರತ ಬಂದ್‍ಗೆ ಪ್ರತಿಯೊಂದು ಸಂಘ ಸಂಸ್ಥೆಗಳು ಚಕಾರವೆತ್ತದೆ ಬೆಂಬಲ ನೀಡಬೇಕಿದೆ ಎಂದು ತಿಳಿಸಿದರು. ಸೆಪ್ಟಂಬರ್ 27ರಂದು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಭಾರತ ಬಂದ್‍ಗೆ ಸಂಪೂರ್ಣ ಬೆಂಬಲ ಸೂಚಿಸಲಾಗಿದೆ ಎಂದರು.

ಸುದ್ದಿ ಓದಿ