ಜ್ಞಾನ ದೀವಿಗೆ ಹಚ್ಚಿದ ಮಹಾನ್ ಯುಗ ಯೋಗಿ: ಶಾಸಕ ನಾಡಗೌಡ
ಮುದ್ದೇಬಿಹಾಳ: ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿ ಜಾತ್ಯತೀತ ಸಮಾಜದ ನಿರ್ಮಾಣಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿದ್ದ ಭಕ್ತ ಕನಕದಾಸರು ಸಂತ ಶ್ರೇಷ್ಠರು ಮಾತ್ರವಲ್ಲದೇ ಭಗವಾನ ಕೃಷ್ಣ ದೇವರನ್ನು ಸಾಕ್ಷಾತ್ಕರಿಸಿಕೊಂಡ ಆ ಮಹಾನ್ ಪುರುಷ ಜಗತ್ತಿಗೆ ಜ್ಞಾನ ದೀವಿಗೆ ಹಚ್ಚಿದ ಮಹಾನ್ ಯುಗ ಯೋಗಿ ಎಂದು ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ)ಹೇಳಿದರು.
ತಾಲೂಕು ಆಡಳಿತ, ತಾಲೂಕು ಕುರುಬರ ಸಂಘದ ಆಶ್ರಯದಲ್ಲಿ ಪಟ್ಟಣದ ಹುಡ್ಕೋ ಬಡಾವಣೆಯ ಅಂಬೇಡ್ಕರ ಭವನದಲ್ಲಿ ಗುರುವಾರ ನಡೆದ ಭಕ್ತ ಕನಸದಾಸರ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಿಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರ ವ್ಯಕ್ತಿತದ ಭಾಗವೇ ಅವರ ಬರಹಗಳು. ಅವರ ಕೀರ್ತನೆಗಳಲ್ಲಿ ಸಮಾಜವನ್ನು ಕಟ್ಟುವ ಕ್ರಿಯೆಯಿದೆ. ಕುಟುಂಬವನ್ನು ಸೌಹಾರ್ದಗೊಳಿಸುವ ನೀತಿ ಇದೆ. ನಾಡನ್ನು ನಿಸರ್ಗದತ್ತವಾಗಿ ತೆಗೆದುಕೊಂಡು ಹೋಗುವ ಕೌಶಲ ಇದೆ. ಅವರ ಮುಂಡಿಗೆಗಳಂತೂ ನಮ್ಮ ಜ್ಞಾನವನ್ನು ಸದಾ ಎಚ್ಚರಿಸುತ್ತವೆ. ಇಂತಹ ಕವಿ, ಸಂತ ಬಾಳಿ ಬದುಕಿದ ನಾಡು ಸದಾ ಸೌಹಾರ್ದದ ತೋಟವಾಗಿ ಇರಬೇಕಾದದ್ದು, ನಾವುಗಳು ನಾಡನ್ನು ಕೂಡಿ ಕಾಪಿಟ್ಟು ಹಸನು ಮಾಡಬೇಕಾದದ್ದು ನಮ್ಮ ಕರ್ತವ್ಯ
500 ವರ್ಷಗಳ ಹಿಂದೆಯೆ ಪದ್ದತಿ ನಿರ್ಮೂಲನೆಗೆ ಆಧ್ಯತೆ ನೀಡಿ ದಾಸ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಕನಕ ದಾಸರ ಜೀವನ ಮತ್ತು ಸಾಧನೆ ವಿಶ್ವಕ್ಕೆ ಮಾದರಿಯಾಗಿದ್ದು ಅವರು ಕನ್ನಡ ನಾಡಿನಲ್ಲಿ ಜನಿಸಿದ್ದು ನಮ್ಮೆಲ್ಲರ ಸುಕೃತ ಎಂದು ಬಣ್ಣಿಸಿದರು. ಕನಕದಾಸರು ಕವಿ, ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಭಕ್ತಿಗೀತೆಗಳ ಸಂಯೋಜಕರಾಗಿದ್ದರು. ಅವರು ತಮ್ಮ ಜೀವನವನ್ನು ದೇವರಿಗೆ ಅರ್ಿಸಿದರು ಮತ್ತು ಸಾಮಾಜಿಕ ಜಾಗೃತಿಯನ್ನು ಹರಡಲು, ತಾರತಮ್ಯ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಲು ತಮ್ಮ ಸಾಹಿತ್ಯವನ್ನು ಬಳಸಿದರು. ಕನಕದಾಸರ ಜಯಂತಿಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು, ಅವರ ಬೋಧನೆಗಳ ಕುರಿತು ಚರ್ಚೆಗಳು ಮತ್ತು ಭಕ್ತಿಗೀತೆ ಪ್ರದರ್ಶನಗಳೊಂದಿಗೆ ಆಚರಿಸಲಾಗುತ್ತದೆ.
ಹದಿನೈದು -ಹದಿನಾರನೇ ಶತಮಾನ ಕನಕದಾಸರ ಜೀವಿತಾವಧಿಯ ಕಾಲಘಟ್ಟ. ಆ ಕಾಲದ ಹರಿದಾಸರ ಪೈಕಿ ದಾಸ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಕೊಟ್ಟವರು ಅವರು. ಕನ್ನಡ ಭಾಷೆಯ ಕೀರ್ತನೆಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದವರು.
ಸಹಜ ಬದುಕು ಬಾಳಿದ ಕನಕದಾಸರು, ಕೀರ್ತನರಾರರಾಗಿ, ತತ್ತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ದಂಡನಾಯಕರಾಗಿದ್ದು, ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಎಂಬ ಐತಿಹ್ಯವಿದೆ.
ನಮ್ಮ ದೇಶಕ್ಕೆ ನಾಡಿಗೆ ವಿವಿಧ ರೀತಿಯಲ್ಲಿ ಸೇವೇಗೈದ ಶರಣರ, ಸಂತರ, ದೇಶಕ್ಕಾ ತಮ್ಮ ಪ್ರಾಣವನ್ನೇ ತೆತ್ತ ಸ್ವಾತಂತ್ರ್ಯ ಯೋದರ ಅವರ ಆದರ್ಶಗುಣಗಳನ್ನು ಮುಂದಿನ ಯುವಪಿಳಿಗೆಗೆ ದಾರಿ ದೀಪವಾಗಲಿ ಎಂದು ಜಯಂತಿಗಳನ್ನು ಸರಕಾರದಿಂದಲೇ ಆಚರಿಸುವ ಮೂಲಕ ಸಮಾನತೆ ಸಂದೇಶ ಸಾರುವಂತೆ ಮಾಡಿದರೇ ಇಂದು ಒಬ್ಬೋಬ್ಬ ಶರಣರನ್ನು, ಸಂತರನ್ನು ಸ್ವಾತಂತ್ರ್ಯ ಯೋಧರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸುವ ಮೂಲಕ ಜಾತಿಯತಗೆ ಹೆಚ್ಚು ಪ್ರಾಧಾನ್ಯತೆ ನೀಡುವಂತೆ ಮಾಡಲಾಗುತ್ತಿದೆ ಈ ವ್ಯವಸ್ಥೆ ಇಲ್ಲಿಗೆ ನಿಲ್ಲಬೇಕಿದೆ ಸರ್ವರೂ ಒಂದೆ ಎನ್ನುವ ಮಂತ್ರದೊಂದಿಗೆ ಸಾಗಬೇಕು ಅಂದಾಗ ಮಾತ್ರ ದೇಶವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿ ಮಾಡುವುದಲ್ಲಿ ಪ್ರತಿಯೊಬ್ಬರೂ ಮಾನವಿಯ ಮೌಲ್ಯಗಳನ್ನು ಎತ್ತಿ ಹಿಡಿದಂತಾಗುತ್ತದೆ ಎಂದರು.
ಈ ವೇಳೆ ಸಾಹಿತಿ ಅಶೋಕ ಹಂಚಲಿ ಅವರು ವಿಶೇಷ ಉಪನ್ಯಾಸ ನೀಡಿದರು, ತಹಾಶಿಲ್ದಾರ ಬಲರಾಮ ಕಟ್ಟಿಮನಿ,ಸಾಹಿತಿ ಅಶೋಕ ಹಂಚಲಿ,ಮಲಕೇಂದ್ರಾಯಗೌಡ ಪಾಟೀಲ,ಪಿಸೈ ಸಂಜೀವ ತಿಪ್ಪಾರೆಡ್ಡಿ,ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬಿರಾದಾರ,ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ,ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ ಕೆ ಬಿರಾದಾರ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ,ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ,ಸಂಗಮ್ಮ ದೇವರಳ್ಳಿ,ಭಾರತಿ ಪಾಟೀಲ,ಪ್ರೀತಿ ದೇಗಿನಾಳ, ಸದಾಶಿವ ಮಾಗಿ, ತಾಲೂಕಾ ಆರೋಗ್ಯ ಇಲಾಖೆ ಅಧಿಕಾರಿ ಸತೀಶ ತಿವಾರಿ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ಲಮಾಣಿ, ತಾಲೂಕಾ ಕೃಷಿ ಅ ಧಿಕಾರಿಎಸ್ ಜಿ ಭಾವಿಕಟ್ಟಿ.ಸಂಗಪ್ಪ ಮೇಲಿಮನಿ, ಮುತ್ತಣ್ಣ ಹುಗ್ಗಿ,ಎಲ್ ಎಚ್ ಮೇಟಿ ಸೇರಿದಂತೆ ಹಲವರು ಇದ್ದರು.
ಎಂಬಿಎಲ್1: ಮುದ್ದೇಬಿಹಾಳ ತಾಲೂಕು ಆಡಳಿತ, ತಾಲೂಕು ಕುರುಬರ ಸಂಘದ ಆಶ್ರಯದಲ್ಲಿ ಪಟ್ಟಣದ ಹುಡ್ಕೋ ಬಡಾವಣೆಯ ಅಂಬೇಡ್ಕರ ಭವನದಲ್ಲಿ ಗುರುವಾರ ನಡೆದ ಭಕ್ತ ಕನಸದಾಸರ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಿಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.