ಬಿಜೆಪಿ ಪಕ್ಷದಿಂದ ಜನಪರ ಯೋಜನೆಗಳಿಗೆ ಕತ್ತರಿ : ಶಾಸಕ ಎಸ್.ಭೀಮಾನಾಯ್ಕ್
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 17: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಂಡ ಮೇಲೆ ಕಾಂಗ್ರೆಸ್ ಪಕ್ಷ ಮಾಡಿದ ಜನಪರ ಯೋಜನೆಗಳಿಗೆ ಕತ್ತರಿ ಹಾಕುತ್ತಿದೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಪುರಸಭೆ ಚುನಾವಣೆ ಪ್ರಚಾರದಲ್ಲಿ 17ನೇ ವಾರ್ಡ್ನ ಕಾಂಗ್ರೇಸ್ ಅಭ್ಯರ್ಥಿ ಖಾಜಾ ಮುನ್ನಿ ಅಲ್ಲಾಬಕ್ಷಿ ಅವರ ಪರ ಮತಯಾಚಿಸಿ ಅವರು ಮಾತನಾಡಿದರು. ಕಳೆದ ಅವಧಿಯಲ್ಲಿ ಈ ವಾರ್ಡ್ಗೆ ಮೂರು ಕೋಟಿಗೂ ಹೆಚ್ಚು ಅನುದಾನ ನೀಡಿದ್ದು, ರಸ್ತೆ, ಚರಂಡಿ, ಸೇರಿದಂತೆ ಇನ್ನಿತರೆ ಯೋಜನೆಗಳನ್ನು ನೀಡಿದ್ದು ನಮ್ಮ ಕಾಂಗ್ರೇಸ್ ಪಕ್ಷವಾಗಿದೆ, ಇ ವಾರ್ಡ್ಗೆ ಯಾವುದೂ ಬೇರೆ ವಾರ್ಡ್ ಅಥವಾ ಬೇರೆ ಗ್ರಾಮೀಣ ಭಾಗದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ, ನಿಮಗೆ ಚಿರಪರಿಚಿತರಾದ ಅಭ್ಯರ್ಥಿಯನ್ನು ಪಕ್ಷದಿಂದ ಆಯ್ಕೆ ಮಾಡಿದೆ.
ಪಟ್ಟಣದ ಸಂಪೂರ್ಣ ಅಭಿವೃಧ್ಧಿ ಮಾಡುವಲ್ಲಿ ಕಾಂಗ್ರೇಸ್ ಮುಂದಾಗಿದೆ, ಕನಕ ವೃತ್ತ, ಹಳೇ ಹಗರಿಬೊಮ್ಮನಹಳ್ಳಿಯ ತಂಬ್ರಹಳ್ಳಿ ರಸ್ತೆ, ಇದ್ಗಾ ಮೈದಾನದಿಂದ ಪ್ರಾರಂಭಿಸಿ ರಾಮನಗರ ವೃತ್ತದ ವರೆಗೆ ಡಬಲ್ ರೋಡ್, ಸಿಸಿ ರಸ್ತೆಗಳು, ಶುಧ್ಧ ಕುಡಿಯುವ ನೀರಿನ ಘಟಕಗಳು, ಚರಂಡಿ ಸೆರಿದಂತೆ ಪಟ್ಟಣವನ್ನು ಮಾದರಿ ಪುರಸಭೆ ಮಾಡುವ ಕಾರ್ಯ ಕಾಂಗ್ರೇಸ್ ಪಕ್ಷದಿಂದಾಗಿದೆ, ಬಿಜೆಪಿ ಪಕ್ಷಕ್ಕೆ ಅಭ್ಯರ್ಥಿಗಳ ಸಿಗದೇ ಬಿ ಫಾರಂ ಹಿಡಿದು ಮನೆ ಮನೆಗೆ ತೆರಳಿ ಅಭ್ಯರ್ಥಿಯನ್ನು ಹುಡುಕು ಪರಿಸ್ಥಿತಿ ಏದುರಾಗಿದೆ. ಟಿಪ್ಪು ಸುಲ್ತಾನ್ನನ್ನು ಕ್ಷಣಕೂಡ ಸೇರದ ಬಿಜೆಪಿ ಟಿಪ್ಪು ಸಉಲ್ತಾನ ವೇದಿಕೆಯ ತಾಲೂಕು ಅಧ್ಯಕ್ಷನನ್ನು ಅಭ್ಯರ್ಥಿ ಎಂದು ಘೋಷಿಸಿದ್ದು ನಿಜಕ್ಕೂ ವಿಪರ್ಯಾಸ,ಇನ್ನು ಮರಿಯಮ್ಮನಹಳ್ಳಿಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಸಿಗುತ್ತಿಲ್ಲ, ಇನ್ನು ಮಿಲಿಟರಿ ಬಯಲಿನಲ್ಲಿ ಮತ ಕೇಳಲು ಯಾವ ನೈತಿಕತೆಯೂ ಬಿಜೆಪಿ ಪಕ್ಷಕ್ಕಿಲ್ಲ, ಸಮಗ್ರ ಅಭಿವೃಧ್ಧಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಅಭ್ಯರ್ಥಿಪರ ಮತಯಾಚಿಸಿದರು.
ಈ ಸಂಧರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಅಲ್ಲಾಬಕ್ಷಿ, ಗುಲ್ಜಾರ್, ಬುಡೇನ್ಸಾಬ್, ಶಬ್ಬೀರ್, ಬಾಬು, ಮುಟುಗನಹಳ್ಳಿ ಕೊಟ್ರೇಶ್, ಅಂಬಾಡಿ ನಾಗರಾಜ, ಮೈಲಾರ್ಪ, ಗುತ್ತಿಗೆದಾರ ವಿ.ದೊಡ್ಡಬಸಪ್ಪ, ಸೋಗಿ ಕೊಟ್ರೇಶ್, ಮಾನ್ಸಿಂಗ್ ಸೇರಿದಂತೆ ವಾರ್ಡ್ನ ಮುಖಂಡರು ಇದ್ದರು.