ದಿ. ನೀಲವ್ವ ನೀಲಣ್ಣವರರ ಪುಣ್ಯಸ್ಮರಣೆ: ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ
ಮಹಾಲಿಂಗಪುರ 11: ಸಮೀಪದ ರನ್ನ ಬೆಳಗಲಿಯ ಬಂದಲಕ್ಷ್ಮಿ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ದಿ. ನೀಲವ್ವ ಮಹಾದೇವ ನೀಲಣ್ಣವರ ರವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ಯ ನೀಲಣ್ಣವರ, ಕುಟುಂಬ ಪರಿವಾರ ಮತ್ತು ಪಾಯುಸ್ ಆಸ್ಪತ್ರೆ ಜಯಸಿಂಗಪುರ ಇವರ ಸಂಯುಕ್ತ ಆಸರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರಗಿತು.
ಮುಧೋಳದ ಸಿದ್ದರಾಮ ಶಿವಯೋಗಿಗಳು ಸಿದ್ದಾರೂಢ ಸ್ವಾಮಿಜಿರವರ ಮಾತನಾಡಿ, ಮಧ್ಯಮ ವರ್ಗದ ಕುಟುಂಬ ಇಂದು ಸಾರ್ವಜನಿಕ ಸೇವೆ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ, ತನ್ನ ತಾಯಿಯ ಪುಣ್ಯ ಸ್ಮರಣೆಯನ್ನು ಪ್ರತಿ ವರ್ಷದಲ್ಲಿ ವಿಶೇಷವಾಗಿ ಪುಣ್ಯ ಕಾರ್ಯವನ್ನೇ ಕೈಗೊಳ್ಳುತ್ತಾ ಈ ನಾಲ್ಕನೇ ವರ್ಷದಲ್ಲಿ ಉಚಿತ ಆರೋಗ್ಯ ತಪಾಸನೆ ಹಮ್ಮಿಕೊಂಡಿದ್ದು ಸಂತಸವಾಗಿದೆ. ತನ್ನ ತಾಯಿಗೆ ಒದಗಿ ಬಂದ ಅನಾರೋಗ್ಯದ ಸಮಸ್ಯೆ ಎಲ್ಲಾ ತಾಯಂದಿರಿಗೂ ಈ ರೀತಿ ಆಗಬಾರದು ಎಂಬ ವಿಚಾರದಿಂದ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು ಮಾದರಿಯಾಗಿದೆ ತಂದೆ ಮತ್ತು ಮಗ ಇಬ್ಬರು ಶ್ರಮಜೀವಿಗಳಾಗಿದ್ದಾರೆ. ತಾವು ಪ್ರತಿನಿತ್ಯ ವಿವಿಧ ಕ್ಷೇತ್ರದಲ್ಲಿ ದುಡಿಮೆ ಮಾಡುವುದರ ಜೊತೆಗೆ ಇಂಥ ಪುಣ್ಯದ ಕಾರ್ಯವನ್ನು ಮಾಡುತಿರುವುದು ನಮ್ಮೂರಿಗೆ ಹೆಮ್ಮೆಯ ವಿಷಯ ಅವರಿಗೆ ಸದಾ ಕಾಲವು ಹಿರಿಯರ ಆಶೀರ್ವಾದ ಇರುತ್ತದೆ. ಇಂದಿನ ದಿನಗಳಲ್ಲಿ ತಾಯಿ ತಂದೆಯನ್ನು ಹೊರಗಟ್ಟುವ ಮಕ್ಕಳನ್ನು ನೋಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ತಾಯಿಯ ಸ್ಮರಣೆ ಜೊತೆಗೆ ಪುಣ್ಯದ ಕೆಲಸ ಮಾಡುವ ಯುವಕರು ಬಹಳ ವಿರಳ ಎಂಬ ವಿಚಾರವನ್ನು ಆಶೀರ್ವಚನದಲ್ಲಿ ತಿಳಿಸಿದರು.
ಸಾನಿಧ್ಯ ವಹಿಸಿದ ಯೋಗಿ ರಾಜೇಂದ್ರ ಸದಾಶಿವ ಗುರೂಜಿಯವರು ಮಾತನಾಡಿ ಆರೋಗ್ಯವೇ ಭಾಗ್ಯ ಆರೋಗ್ಯವನ್ನು ಕಳೆದುಕೊಂಡರೆ ನಾವೆಲ್ಲವನ್ನು ಕಳೆದುಕೊಂಡಂತೆ, ಈ ವಿಚಾರವನ್ನು ಮನಗೊಂಡು ಒಬ್ಬ ಯೋಗ ಶಿಕ್ಷಕನಾಗಿ ಸಮಾಜಮುಖಿಯ ಕಳಕಳಿಯನ್ನು ಉಳ್ಳ ನನ್ನ ಶಿಷ್ಯ ರಾಘವೇಂದ್ರ ಒಳ್ಳೆ ಕೆಲಸವನ್ನು ಮಾಡುತ್ತಿದ್ದಾನೆ. ಆತನ ಸಮಾಜಮುಖಿ ಕೆಲಸ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದರು.
ಊರಿನ ಮುಖಂಡ ಧರೆಪ್ಪ ಸಾಂಗ್ಲಿಕರ್ ಅಧ್ಯಕ್ಷ ವಹಿಸಿ ಮಾತನಾಡಿ ಜೆಸಿಂಗಪುರದ ಹೆಸರಾಂತ ಪಾಯೂಸ್ ಆಸ್ಪತ್ರೆ ಒಳ್ಳೆಯ ಕಾರ್ಯಕ್ರಮವನ್ನು ನೀಡುತ್ತಿದ್ದು, ಒಂದು ಖಾಸಗಿ ಆಸ್ಪತ್ರೆ ಸಮಾಜಮುಖಿ ಸೇವಾ ಕಾರ್ಯವನ್ನು ಮಾಡಬಹುದು ಎಂಬ ಉದ್ದೇಶವನ್ನು ಸಫಲಗೊಳಿಸಿ ತೋರಿಸುತ್ತಿದೆ. ನೀಲಣ್ಣವರ ಕುಟುಂಬದವರ ಹಮ್ಮಿಕೊಂಡ ಈ ಸಮಾಜಮುಖಿ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಶಿಕ್ಷಕ ರಾಘವೇಂದ್ರ ನೀಲಣ್ಣವರ, ಮಾತನಾಡಿ ನಮ್ಮ ತಾಯಿಗೆ ಹೃದಯಘಾತ ಸಮಸ್ಯೆ ಇದ್ದರೂ ಕೂಡ ಕುಟುಂಬದ ಬಡತನ ತಂಗಿಯ ಮದುವೆ ನನ್ನ ಶಿಕ್ಷಣಕ್ಕಾಗಿ ಯಾರೆಂದಿಗೂ ತನ್ನ ರೋಗದ ವಿಚಾರವನ್ನು ಹೇಳಿಕೊಳ್ಳದೆ ಕಣ್ಮರೆಯಾದಳು. ಇಂಥ ಪರಿಸ್ಥಿತಿ ಯಾವ ತಾಯಿಂದಿರಿಗೂ ಬರಬಾರದೆಂಬ ಉದ್ದೇಶದಿಂದ ಪ್ರತಿ ವರ್ಷ ಇಂತಹ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇನೆ ಎಲ್ಲ ಹಿರಿಯರ ಸಹಾಯ ಸಹಕಾರ ಜೊತೆಗೆ ಈ ಶಿಬಿರವು ಯಶಸ್ವಿಗೊಂಡಿದೆ ಎಂಬ ತಮ್ಮ ವಿಚಾರವನ್ನು ತಿಳಿಸಿದರು.
ರಾಮನಗೌಡ ಪಾಟೀಲ, ಚಿಕ್ಕಪ್ಪ ನಾಯಕ, ಅಶೋಕ ಸಿದ್ದಾಪುರ, ಮಲ್ಲಪ್ಪ ಹೊಸಪೇಟೆ, ಮುತ್ತಪ್ಪ ಸಿದ್ಧಾಪುರ, ಮಾಲಿಂಗಪ್ಪ ಕೊಣ್ಣೂರ, ನಾಮದೇವ ಲಮಾಣಿ ಮುಖ್ಯ, ಮಹಾದೇವ ನೀಲಣ್ಣವರ, ಮಂಜುನಾಥ ಗಂಗಾವತಿ, ಮೋಹನರಾವ್ ಕುಲಕರ್ಣಿ, ರಾಮಲಿಂಗ ಯಾದವಾಡ, ಪತ್ರಕರ್ತರಾದ ಮೀರಾ ತಟಗಾರ, ಮಹಾದೇವ ಕುಲಗೋಡ, ಮಹೇಶ ಮಣ್ಣಯ್ಯಮಠ ಮತ್ತು ವೈದ್ಯರಾದ ಡಾ ಶರಣು ಮೇಟಿ, ಡಾ ಸಾರಿಕಾ ಪಾಟೀಲ, ಡಾ ವಿದ್ಯಾ ಪಾಟೀಲ, ಡಾ ರಶಿಧಾ ನದಾಫ್, ಡಾ ಅಮಿಸಿದ್ಧ ಒಡೆಯರ, ಡಾ ಬಿ. ಎಸ್ ತೇಲಿ ವೈದ್ಯರ ಸಹಾಯಕರಾಗಿ ವೆಂಕಟೇಶ ಚಂದನಶಿವ, ಕಾಶಿನಾಥ್ ಮೇತ್ರಿ, ಮಾಲಾಶ್ರೀ ತಳವಾರ, ಜಕ್ಕವ್ವ ತಳವಾರ ಇದ್ದರು.
ಮಾಂತೇಶ ಕುಂಬಾರ ಸ್ವಾಗತಿಸಿದರು. ಶಿಕ್ಷಕರಾದ ಸದಾಶಿವ ಪುರಾಣಿಕ ವಂದಿಸಿದರು. ನಾಗೇಶ ಬಟಾಟೆಪ್ಪಗೊಳ ನಿರೂಪಿಸಿದರು. ಇನ್ನು ಊರಿನ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.