ಶಿಗ್ಗಾವ್

ಟೆಕ್ಸಟೈಲ್ ಪಾರ್ಕ್ ರೈತರು, ನಿರುದ್ಯೋಗಿಗಳಿಗೆ ವರದಾನ ಸುಧಾಕರ ದೈವಜ್ಞ

ಟೆಕ್ಸಟೈಲ್ ಪಾರ್ಕ್ ರೈತರು, ನಿರುದ್ಯೋಗಿಗಳಿಗೆ ವರದಾನ ಸುಧಾಕರ ದೈವಜ್ಞ

15 ಸಾವಿರಕ್ಕೂ  ಹೆಚ್ಚು ನಿರುದ್ಯೋಗಿಗಳ ಸೃಷ್ಟಿ | ರೈತರು ಬೆಳೆದ ಗೋವಿನ ಜೋಳಕ್ಕೆ ಬೇಡಿಕೆ

ಶಿಗ್ಗಾವಿ 20: ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿಯನ್ವಯ ಅನುಷ್ಠಾನಗೊಳಿಸುವಂತೆ ಆದೇಶದಲ್ಲಿ ತಿಳಿಸಿದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಜವಳಿ) ಸರಕಾರದ ಉಪ ಕಾರ್ಯದರ್ಶಿ ಬಿ.ವೆಂಕಟೇಶಮೂರ್ತಿ, ಪಾರ್ಕ್ ಸ್ಥಾಪನೆಯಿಂದ ಮೂರು ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. 

ಇತ್ತ ಪಾರ್ಕ್ ಸ್ಥಾಪನೆಗೆ ಈಗಾಗಲೇ ಜಿಲ್ಲಾಧಿಕಾರಿಗಳು 59.34 ಎಕರೆ ಭೂಮಿ ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ. ಸ್ಥಾಪಿತಗೊಳ್ಳುತ್ತಿರುವ ಈ ಟೆಕ್ಸ್‍ಟೈಲ್ಸ್ ಪಾರ್ಕ್‍ಗೆ ಮೂಲ ಸೌಲಭ್ಯಗಳ ಅಭಿವೃದ್ಧಿ ಬಜೆಟ್ ಹಂಚಿಕೆ ಕುರಿತು 2021ನೇ ಸಾಲಿನ ಬಜೆಟ್ ಮಂಡನೆ ನಂತರ ಪರಿಗಣಿಸಲಾಗುವುದು ಎಂದು ಸರಕಾರ ತಿಳಿಸಿದೆ. ಜವಳಿ ಪಾರ್ಕ್ ಸ್ಥಾಪನೆ ಕುರಿತು ಮುಂದಿನ ಕ್ರಮಕ್ಕೆ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಆದೇಸಿಶಿದೆ. 

ಶನಿವಾರ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆಗೆ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ಆ ಮೂಲಕ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೊಂದಿಕೊಂಡ ಶಿಗ್ಗಾವಿ ಈಗ ಜವಳಿ ಕೈಗಾರಿಕೋದ್ಯಮದ ಅಭಿವೃದ್ಧಿಯತ್ತ  ಹೆಜ್ಜೆಯಿಟ್ಟಿದೆ. 2020ನೇ ಸಾಲಿನ ಬಜೆಟ್‍ನಲ್ಲಿ ಘೋಷಣೆಯಾಗಿದ್ದ ಪಾರ್ಕ್, ಈಗ ತಾಲೂಕಿನ ಬಂಕಾಪುರ ಹೋಬಳಿ ಕುರ್ಸಾಪುರ ಗ್ರಾಮದ ಬಳಿ ಸರ್ವೇ 43ರಲ್ಲಿ 59.34 ಎಕರೆ ಕಂದಾಯ ಭೂಮಿಯಲ್ಲಿ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಸರಕಾರ ಆದೇಶ ಹೊರಡಿಸಿದ್ದರಿಂದ ಸ್ಥಳೀಯ ನಿರುದ್ಯೋಗಿಗಳಲ್ಲಿ ಉದ್ಯೋಗದ ಭರವಸೆ ಹೆಚ್ಚಿಸಿದೆ.

ಶಿಗ್ಗಾವಿಯಲ್ಲಿ ಟೆಕ್ಸ್‍ಟೈಲ್ಸ್ ಪಾರ್ಕ್ ಸ್ಥಾಪಿಸುವ ಮೂಲಕ ಸ್ಥಳೀಯವಾಗಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿಯವರು ಕಂಡ ಕನಸು ಈಗ ನನಸಾಗಿದೆ. ಪಾರ್ಕ್ ಸ್ಥಾಪನೆಗೆ ಕಳೆದ ಎರಡು ವರ್ಷದಿಂದ ಇಚ್ಛಾಶಕ್ತಿ ಪ್ರದರ್ಶಿಸಿದ ಶಾಸಕರ ಶ್ರಮ ನಿರುದ್ಯೋಗಿಗಳಲ್ಲಿ ಉದ್ಯೋಗದ ಭರವಸೆ ಹೆಚ್ಚಿಸಿದೆ. ಹಲವು ದಶಕಗಳಿಂದ ಹಿಂದುಳಿದ ಕ್ಷೇತ್ರವೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಶಿಗ್ಗಾವಿ ಕ್ಷೇತ್ರ, ಕಳೆದ 10 ವರ್ಷದಲ್ಲಿ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿದೆ. ಈಗ ಕೈಗಾರಿಕೆ ಉದ್ಯಮದ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ.

ಪ್ರಯೋಜನಗಳು: ಅಂದಾಜು 1 ಸಾವಿರ ಕೋಟಿ ವೆಚ್ಚದಲ್ಲಿ ಸ್ಥಾಪಿತ ಈ ಟೆಕ್ಸ್‍ಟೈಲ್ಸ್ ಪಾರ್ಕ್‍ನಿಂದ ಕ್ಷೇತ್ರದ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗಲಿದೆ. ಸುಮಾರು 15 ಸಾವಿರಕ್ಕೂ  ಹೆಚ್ಚು ನಿರುದ್ಯೋಗಿಗಳ ಕೈಗೆ ಉದ್ಯೋಗ ಸಿಗಲಿದೆ. ಸರಕು ಸಾಗಣೆಕೆಯಿಂದ ಸರಕಾರದ ಬೊಕ್ಕಸಕ್ಕೂ ಆದಾಯ ಸಿಗಲಿದೆ. ಜಿಲ್ಲೆಯಲ್ಲೇ ಶಿಗ್ಗಾವಿ ಸಣ್ಣ ತಾಲೂಕು ಆಗಿದ್ದರೂ ಆರ್ಥಿಕ ಚಟುವಟಿಕೆಯಲ್ಲಿ ದೊಡ್ಡದಾಗಲಿದೆ. 

ರೈತರಿಗೆ ಅನುಕೂಲತೆಗಳು: ಶಿಗ್ಗಾವಿ ಈಗಾಗಲೇ ಗೋವಿನಜೋಳ ಸಂಸ್ಕೃರಣಾ ಕಂಪನೆ ಹೊಂದಿ, ರೈತರು ಬೆಳೆದ ಗೋವಿನ ಜೋಳ ಖರೀಸುತ್ತಿದೆ. ಟೆಕ್ಸ್‍ಟೆಲ್ಸ್ ಪಾರ್ಕ್ ಸ್ಥಾಪನೆಯಿಂದ ಹತ್ತಿ ಬೆಳೆಯನ್ನು ಖರೀದಿಸಲಾಗುತ್ತದೆ. ರೈತ ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಸಿಗುವ ಸಾಧ್ಯತೆಯಿದೆ. ವಿಶೇಷವಾಗಿ ಪಾರ್ಕ್‍ನಿಂದ ಸಿದ್ಧಗೊಳ್ಳುವ ಉಡುಪುಗಳು ದೇಶ, ವಿದೇಶಗಳಿಗೆ ರಫ್ತಾಗುವ ಮೂಲಕ ಶಿಗ್ಗಾವಿ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸಲಿದೆ. 

ಟೆಕ್ಸ್‍ಟೈಲ್ಸ್ ಪಾರ್ಕ್ ಸ್ಥಾಪನೆಯಿಂದ 15 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಸಿದ್ಧಗೊಳ್ಳುವ ಉಡುಪುಗಳು ದೇಶ, ವಿದೇಶಗಳಿಗೆ ರಫ್ತಾಗುತ್ತವೆ. ಶಾಸಕ ಬೊಮ್ಮಾಯಿಯವರು ಪಾರ್ಕ್ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ನುಡಿದಂತೆ ನಡೆದಿದ್ದಾರೆ. ಪಾರ್ಕ್ ಸ್ಥಾಪನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿಗಳಿಗೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. 

ರಾಘವೇಂದ್ರ ಮೇಲಗೇರಿ, ಪ್ರಭಂಜನ್ ಇಂಡಸ್ಟ್ರೀಜ ಸಿಇಒ ಬಂಕಾಪುರ.

    ಗೃಹಸಚಿವ  ಬಸವರಾಜ ಬೊಮ್ಮಾಯಿ ಅವರು ಜವಳಿ ಪಾರ್ಕ್‍ಗೆ ಮಂಜೂರಾತಿ ನೀಡುವ ಮೂಲಕ ಸಾವಿರಾರು ಬಡ ಕುಟುಂಬಗಳ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಸ್ವಾವಲಂಬನೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ರೈತರು ಬೆಳೆದ ಹತ್ತಿ ಬೆಳೆಗೆ ಯೋಗ್ಯ ಬೆಲೆ ಸಿಗುವುದರ ಜೊತೆಗೆ ಆರ್ಥಿಕ ಅಭಿವೃದ್ಧಿಯ ಜೊತೆಗೆ ಜನಸಾಮಾನ್ಯರ ಜೀವನಮಟ್ಟ ಹೆಚ್ಚಿಸಲು ಬಹಳ ಉಪಯೋಗಕಾರಿಯಾಗಲಿದೆ. 

ಶಿವಾನಂದ ಮ್ಯಾಗೇರಿ, ಅಧ್ಯಕ್ಷರು ಭಾ.ಜ.ಪ ಶಿಗ್ಗಾವಿ

ಸುದ್ದಿ ಓದಿ