ಬೆಳಗಾವಿ ಬಳಿ ಭೀಕರ ರಸ್ತೆ ಅಪಘಾತ 6 ಜನರ ದಾರುಣ ಸಾವು : ಮದುವೆ ಮುಗಿಸಿ ವಾಪಾಸಾಗುವಾಗ ಘಟನೆ

ಬೆಳಗಾವಿ ಬಳಿ ಭೀಕರ ರಸ್ತೆ ಅಪಘಾತ 6 ಜನರ ದಾರುಣ ಸಾವು : ಮದುವೆ ಮುಗಿಸಿ ವಾಪಾಸಾಗುವಾಗ ಘಟನೆ

ಬೆಳಗಾವಿ : ಮದುವೆ ಮುಗಿಸಿ ಮರಳುವಾಗ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ‌ಹೊಡೆದ ಪರಿಣಾಮ 6 ಜನರು ಮೃತಪಟ್ಟಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ.

   ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬಿಡಿ ಸಮೀಪ ಈ ಘಟನೆದಿದೆ. ಮೃತರು ಮದುವೆ ಸಮಾರಂಭ ಒಂದನ್ನು‌ ಮುಗಿಸಿ ಹಿಂದಿರುಗುವಾಗ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೋಡೆದಿದೆ. 

   ಮರಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರಿನಲ್ಲಿದ್ಸ 6 ಜನರು ಸ್ಥಳದಲ್ಲಿ  ಸಾವೊನೊಪ್ಪಿದ್ದಾರೆ. ಸ್ಥಳಕ್ಕೆ ನಂದಗಡ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ವಿಷಯ ತಿಳಿದ ಬೆಳಗಾವಿ  ಎಸ್ಪಿ ಭೀಮಾಶಂಕರ ಗುಳೇದ್ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮೃತರ ಬಗ್ಗೆ ‌ಮಾಹಿತಿ ದೊರೆತಿಲ್ಲ. ಆದರೆ

ಮಹಾರಾಷ್ಟ್ರ ಮೂಲದವರು ಕಾರಿನಲ್ಲಿ ಸಂಚರಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸುದ್ದಿ ಓದಿ