ಮಹಲಿಂಗಪುರ

ಜಗದ್ಗುರು ಸಿದ್ಧಾರೂಢರ ತೆಪ್ಪೋತ್ಸವ

ಜಗದ್ಗುರು ಸಿದ್ಧಾರೂಢರ ತೆಪ್ಪೋತ್ಸವ
ಮಹಾಲಿಂಗಪುರ: ಸಿದ್ಧಾರೂಢರ 92ನೇ ಪುಣ್ಯಾರಾಧನೆ ನಿಮಿತ್ಯ ಸೋಮವಾರ ಸಂಜೆ ಪಟ್ಟಣದ ಸಿದ್ಧಸರೋವರ ಕೆರೆಯಲ್ಲಿ 39ನೇ ವರ್ಷದ ಜ

ಮಹಾಲಿಂಗಪುರ24: ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಸಿದ್ಧಾರೂಢರ 92ನೇ ಪುಣ್ಯಾರಾಧನೆಯ ನಿಮಿತ್ಯ 39ನೇ ವರ್ಷದ ಜಲರಥೋತ್ಸವ(ತೆಪ್ಪೋತ್ಸವ)ವು ಸೋಮವಾರ ಸಂಭ್ರಮದಿಂದ ಜರುಗಿತು. 

ತೆಪ್ಪೋತ್ಸವದ ನಿಮಿತ್ಯ ಮುಂಜಾನೆ 8 ಘಂಟೆಗೆ ಸಿದ್ದಾರೂಢರ ಮೂರ್ತಿಗೆ ಅಭಿಷೇಕ, 10ಘಂಟೆಗೆ ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದವರಿಂದ ಮುತ್ತೈದೆಯರಿಗೆ ಉಡಿ ತುಂಬುವುದು, ನಂತರ ವಿವಿಧ ಗ್ರಾಮಗಳ ಭಜನಾಮೇಳದವರಿಂದ ಭಜನಾ ಕಾರ್ಯಕ್ರಮ ಜರುಗಿತು. 

ತೆಪ್ಪೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಸಹಜಾನಂದ ಸ್ವಾಮಿಜಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಪ್ಪಳದ ಶಿವಪ್ರಕಾಶಾನಂದ ಸ್ವಾಮಿಜಿ, ನಿಂಗನೂರ ಶಿವಪುತ್ರಾವಧೂತ ಸ್ವಾಮಿಜಿ, ಧೂಪದಾಳ ಭೀಮಾನಂದ ಸ್ವಾಮೀಜಿ, ಇಬ್ರಾಹಿಂ ಸುತಾರ, ಕೋಲುರಿನ ಮಲ್ಲಪ್ಪ ಪೂಜೇರಿ ಶರಣರು, ರನ್ನಬೆಳಗಲಿಯ ಸದಾಶಿವ ಗುರೂಜಿ, ಕಂಕನವಾಡಿ ಮಾರುತಿ ಶರಣರು, ಕಲಬುರ್ಗಿಯ ವಿದ್ಯಾವತಿತಾಯಿ, ಚಿಕ್ಕಪಡಸಲಗಿಯ ಅಕ್ಕಮಹಾದೇವಿತಾಯಿ, ವಿಜಯಪುರದ ಶಶಿಕಲಾತಾಯಿ ಭಾಗವಹಿಸಿದ್ದರು. 

ಸಂಜೆ 6 ಘಂಟೆಗೆ ಅಲಂಕೃತ ರಥದಲ್ಲಿ ಸಿದ್ಧಾರೂಢರ ಮೂರ್ತಿಗೆ ಡಾ.ಬಿ.ಡಿ.ಸೋರಗಾಂವಿ ಅವರು ಪೂಜೆ ನೆರವೇರಿಸಿ ಜಲರಥೋತ್ಸವಕ್ಕೆ ಚಾಲನೆ ನೀಡಿದರು.  

ವಿಶಾಲವಾದ ಸಿದ್ಧಸರೋವರ ಕೆರೆಯಲ್ಲಿ ಜರುಗಿದ ರಥೋತ್ಸವವನ್ನು ಸೇರಿದ ಅಪಾರ ಭಕ್ತಾಧಿಗಳು ಸಿದ್ಧಾರೂಢ ಮಹಾರಾಜಕೀ ಜೈ, ಸಿದ್ದಾರೂಢರ ಜೋಳಗಿ-ಜಗತ್ತಿಗೆಲ್ಲ ಹೋಳಗಿ ಎಂಬ ಜಯಘೋಷಗಳನ್ನು ಮೊಳಗಿಸಿದರು. 

ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿಯ ತೆಪ್ಪೋತ್ಸವದ ನಂತರ ಉತ್ತರ ಕರ್ನಾಟಕದಲ್ಲಿ ಜರಗುವ ಎರಡನೇ ದೊಡ್ಡ ತೆಪ್ಪೋತ್ಸವ( ಜಲರಥೋತ್ಸವ) ಇದಾಗಿದೆ. ತೆಪ್ಪೋತ್ಸವ ವೀಕ್ಷಣೆಗಾಗಿ ಬೆಳಗಾವಿ, ಬಾಗಲಕೋಟ, ವಿಜಯಪುರ, ಕಲಬುರ್ಗಿ ಜಿಲ್ಲೆಗಳ ಭಕ್ತಾಧಿಗಳು ಆಗಮಿಸಿ ರಥೋತ್ಸವಕ್ಕೆ ನಿಂಬೆಹಣ್ಣು, ಉತ್ತತ್ತಿ, ಹೂ, ಬೆಂಡ, ಬೆತ್ತೋಸಗಳನ್ನು ಗೌರವಪೂರ್ವಕ ಅರ​‍್ಿಸಿ, ಜಲರಥೋತ್ಸವ ವೀಕ್ಷಿಸಿದರು. 

ಸಿದ್ಧಾರೂಢ ಟ್ರಸ್ಟ ಕಮಿಟಿ ಉಪಾಧ್ಯಕ್ಷ ಡಾ.ಬಿ.ಡಿ.ಸೋರಗಾಂವಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಖಜಾಂಜಿ ಅಲ್ಲಪ್ಪ ಗುಂಜಿಗಾಂವಿ, ಸಹಕಾರ್ಯದರ್ಶಿ ಗುರುಪಾದ ಅಂಬಿ, ಧರ್ಮದರ್ಶಿಗಳಾದ ಮಲ್ಲಪ್ಪ ಕಟಗಿ, ಚೇತನ ಹಾದಿಮನಿ, ಮಲ್ಲಪ್ಪ ಭಾಂವಿಕಟ್ಟಿ, ಲಕ್ಕಪ್ಪ ಚಮಕೇರಿ, ಗೋಲೇಶ ಅಮ್ಮಣಗಿ, ಮಲ್ಲಪ್ಪ ಕಟಗಿ, ಶ್ರೀಮಠದ *ಸದ್ಭಕ್ತರಾದ ರವಿ ಜವಳಗಿ, ಅಶೋಕ ಬಾಣಕಾರ, ಜಿ.ಎಸ್‌.ಗೊಂಬಿ, ಸುಭಾಸ ನಾಯಕ, ಮಹೇಶ ಬಡಿಗೇರ, ಶಿವಾನಂದ ತೇಲಿ, ಕಲ್ಮೇಶ ಕುಂಬಾರ, ಹನಮಂತ ಹೂಗಾರ, ಮಲ್ಲಪ್ಪ ರಡ್ಡಿ, ಕುಮಾರ ಉಳ್ಳಾಗಡ್ಡಿ, ಸಿದ್ರಾಮಯ್ಯ ಗೋಠೆ, ಮಹಾಲಿಂಗ ಕರೆಹೊನ್ನ, ಸದಾಶಿವ ಇಂಗಳಗಿ, ಸುರೇಶ ಕೆಂಪವಾಡ, ಶಂಕರಗೌಡ ಪಾಟೀಲ, ಶ್ರೀಕಾಂತ ಮುಕರೆ ಸೇರಿದಂತೆ ಹಲವರು ಇದ್ದರು. 

ಮುಖ್ಯಾಂಶಗಳು. 

* ಸಿದ್ದಾರೂಢರ ಮೂರ್ತಿಗೆ ಅಭಿಷೇಕ.  

* ಮುತ್ತೈದೆಯರಿಗೆ ಉಡಿ ತುಂಬುವುದು. 

* ಭಜನಾ ಕಾರ್ಯಕ್ರಮ. 

ಸುದ್ದಿ ಓದಿ