ಮಹಲಿಂಗಪುರ

ಆಜಾದ ಕ್ರಿಕೆಟ್ ಕ್ಲಬ್ ವತಿಯಿಂದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌.

ಆಜಾದ ಕ್ರಿಕೆಟ್ ಕ್ಲಬ್ ವತಿಯಿಂದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌.

ಮಹಾಲಿಂಗಪುರ16 : ಮುಧೋಳ ತಾಲೂಕಿನ ಸಮೀಪದ ಆಜಾದ ಕ್ರಿಕೆಟ್ ಕ್ಲಬ್ ನಾಗರಾಳ ವತಿಯಿಂದ ಅ. 15ರಂದು 75ನೇ ಸ್ವಾತಂತ್ರ್ಯೋತ್ಸವ ಹಾಗೂ ಮೋಹರಂ ಅಂಗವಾಗಿ ಫುಲ್ ಪಿಚ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿತ್ತು. 

ಪ್ರಥಮ 15ಸಾವಿರ, ದ್ವಿತೀಯ 10ಸಾವಿರ, ತೃತೀಯ 5 ಸಾವಿರ ಹಾಗೂ ವೈಯಕ್ತಿಕ ಬಹುಮಾನಗಳ ಪಂದ್ಯಾವಳಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಯಶ್ವಂತ ಚೌವ್ಹಾನ ಉದ್ಘಾಟನೆ ಮಾಡಿದರು.  

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು ಹಾಗೂ ಊರಿನ ಮುಖಂಡರಾದ ಬಸವರಾಜ ಪಾಟೀಲ, ಭೀಮಶಿ ನೇಗಿ, ನಿಂಗನಗೌಡ ನ್ಯಾಮಗೌಡರ, ವಿಠ್ಠಲಗೌಡ ನ್ಯಾಮಗೌಡರ, ಮುತ್ತಪ್ಪ ತೇಲಿ, ಸಿದ್ದಪ್ಪ ಜೈನಪೂರ, ಸಿದ್ದಪ್ಪ ಗಿರೇವ್ವಗೋಳ, ಶ್ರೀನಿವಾಸ ಪಾಟೀಲ, ಇಮ್ರಾನ್ ಪಠಾಣ, ಮಹಾಲಿಂಗ ಬಜಂತ್ರಿ, ನಿಂಗಪ್ಪ ನಾಯ್ಕರ ಇನ್ನೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ