ಅನಧಿಕೃತ ವಾಸದ ಮನೆಗಳ ಖಾತೆ ಮಾಡಿಸಿಕೊಳ್ಳಲು ತಹಶೀಲ್ದಾರ್ ಗಿರಿಶ ಸ್ವಾದಿ ಕರೆ
ಮಹಾಲಿಂಗಪುರ 19: ಕರ್ನಾಟಕ ಭೂ ಕಂದಾಯ 94-ಸಿ ಮತ್ತು 94-ಸಿಸಿ ಅಡಿಯಲ್ಲಿ ಅನಧಿಕೃತ ವಾಸದ ಮನೆಗಳ ಸಕ್ರಮ ಫಲಾನುಭವಿಗಳು ಖಾತೆ ಮಾಡಿಸಿಕೊಳ್ಳಬೇಕೆಂದು ರಬಕವಿ, ಬನಹಟ್ಟಿ ತಹಶೀಲ್ದಾರ್ ಗಿರಿಶ ಸ್ವಾದಿ ತಿಳಿದರು.
ಮಹಾಲಿಂಗಪುರ ಪಟ್ಟಣದ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರು ಶೇಖರ ಅಂಗಡಿ ಗುರುವಾರ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಿದ ನಿವೇಶನಗಳ ಅಕ್ರಮ ಸಕ್ರಮ, ಕುರಿತಾದ ಮನವಿಗೆ ಸ್ಪಂದಿಸಿ ಮಾತನಾಡಿದ ಅವರು, ತೇರದಾಳ ಮತ ಕ್ಷೇತ್ರದ ಶಾಸಕರು ಸಿದ್ದು ಸವದಿ ಅಕ್ರಮ, ಸಕ್ರಮ ಕುರಿತಾಗಿ ಹಂಗಾಮಿ ಆದೇಶದ ಪ್ರಕಾರ ಬೇಗನೆ ಕಾರ್ಯ ನಿರ್ವಹಿಸಲು ಸೂಚಿಸಿದ್ದು, ಅದರಂತೆ ನಮ್ಮ ಇಲಾಖೆಯ ಸಿಬ್ಬಂದಿಗಳು ಸಹ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಶೀಘ್ರದಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಸಮಿತಿಗೆ ಮನವರಿಕೆ ಮಾಡಿದರು.
ಸಾಂಕೇತಿಕ ಶುಲ್ಕ ಜನವರಿ 1, 2015 ಪೂರ್ವದಲ್ಲಿ ನಿರ್ಮಿಸಿಕ್ಕೊಂಡಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಈ ಹಂಗಾಮಿ ಆದೇಶದಲ್ಲಿ ಅನುವು ಮಾಡಿಕೊಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ 30-40, 40-60, 50-80 ಚದರ ಅಡಿ ಮನೆಗಳನ್ನು ಸಾಂಕೇತಿಕ ಶುಲ್ಕ ತುಂಬಿ ಸಕ್ರಮಗೊಳಿಸಿಕ್ಕೊಳ್ಳಬಹುದು. ನಗರ ಪ್ರದೇಶ 20-30 ಚ.ಅಡಿಗೆ ಸಾಂಕೇತಿಕ ಶುಲ್ಕ 5ಸಾವಿರ, ಬಫರ ಝೇನ್ 30-40 ಕ್ಕೆ ಸಾಂಕೇತಿಕ ಶುಲ್ಕ 10 ಸಾವಿರ. ಎಸ್ ಸಿ/ಎಸ್ ಟಿ, ಅಂಗವಿಕಲ, ಮಾಜಿ ಸೈನಿಕರು, ಪೌರ ಕಾರ್ಮಿಕರಿಗೆ ಮೇಲ್ಕಾಣಿಸಿದ ಶುಲ್ಕಗಳಲ್ಲಿ ಅರ್ಧದಷ್ಟು ಭರಣಾ ಮಾಡಬೇಕು.
ಇದು ಆದೇಶದ ದಿನಾಂಕದಿಂದ 1 ತಿಂಗಳೊಳಗಾಗಿ ಸಕ್ರಮ ಮಾಡಿಕ್ಕೊಳ್ಳಬಯಸುವವರು ಪ್ರಕ್ರಿಯೆ ಪೂರ್ಣಗೊಳಿಸಿಕ್ಕೊಳ್ಳಬೇಕು..ಈ ಸಮಯದಲ್ಲಿ ಸದಸ್ಯರಾದ ಹಣ್ಮಂತ ನಾವಿ, ನಾಗಲಿಂಗ ಬಡಿಗೇರ, ಮಹಾಲಿಂಗ ಶಿವನಗಿ, ಮಹಾದೇವ ಸಾವಂತ ಮುಂತಾದವರಿದ್ದರು.
ಮಹಾಲಿಂಗಪುರ ಪಟ್ಟಣದ ಬುದ್ಧಿ ಪಿಡಿ, ಕೆಂಗೇರಿಮಡ್ಡಿ, ಕಲ್ಪಡ, ಬಸವನಗರ ಮತ್ತು ಸಮಗಾರ (ಹರಳಯ್ಯ ಸಮಾಜ) ಗಲ್ಲಿಗಳ 1051ಎ ಮತ್ತು 29/1 ಜಮೀನುಗಳ ಕ್ಷೇತ್ರದಲ್ಲಿ ಅಕ್ರಮ, ಸಕ್ರಮ ಹಂಗಾಮಿ ಆದೇಶ ಪಡೆದ ಫಲಾನುಭವಿಗಳು ಮಾನ್ಯ ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ್ ಆದೇಶ ಮಾಡಿರುವ ಪ್ರಕಾರ ಮತ್ತು ಸರ್ಕಾರಿ ನಿಯಮಾನುಸಾರವಾಗಿ ಸಾಂಕೇತಿಕ ಶುಲ್ಕ ಭರಣಾ ಮಾಡಿ, ನಂತರ ತಮ್ಮ ಖರ್ಚಿನಿಂದ ಖರಿದಿ ಮಾಡಿಕೊಳ್ಳಬೇಕು.ಈ ಆದೇಶಕ್ಕೆ ತ್ವರಿತವಾಗಿ ಸ್ಪಂದಿಸಿರುವ ಶಾಸಕ ಸಿದ್ದು ಸವದಿ ಮತ್ತು ಮಾನ್ಯ ತಹಶೀಲ್ದಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.