ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ
ಮಾಂಜರಿ 26: ಚಿಕ್ಕೊಡಿಯ ಕೆ. ಎಲ್. ಇ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಹಾಗೂ ಇಲೇಕ್ಟ್ರಾನಿಕ್ಸ ವಿಭಾಗದ ವಿದ್ಯಾರ್ಥಿಗಳಿಗೆ “ಎರೊಸ್ಪೆಸ್ ಉತ್ಪನ್ನ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಯುವ ಇಂಜಿನಿಯರ್ ಪಾತ್ರ” ವಿಷಯದ ಮೇಲೆ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮವನ್ನು ಏರಿ್ಡಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಮಾದೆವಾ ನಾಗರಾಳ, ಮ್ಯಾನೆಜರ್ (ವಿನ್ಯಾಸ), ಎರಕ್ರಾಫ್ಟ ರಿಸರ್ಚ ಆಯ್ಯಂಡ್ ಡಿಸೈನ್ ಸೆಂಟರ್, ಹಿಂದುಸ್ತಾನ ಎರೊನೊಟಿಕಲ್ ಲಿಮಿಟೆಡ್, ಬೆಂಗಳೂರು ಮಾತನಾಡಿ-ನಮ್ಮ ದೇಶದ ಗಡಿಯಲ್ಲಿರುವ ಜನರು ಯಾವತ್ತು ಅಂಜದೇ ತಮ್ಮ ಜೀವನವನ್ನು ನಡೆಸುವ ವಿಶ್ವಾಸವನ್ನು ಮುಡಿಸುವ ಶಕ್ತಿ ಇರುವುದು ನಮ್ಮ ದೇಶದ ರಕ್ಷಣಾ ಪಡೆಗೆ ಮಾತ್ರ. ನಮ್ಮ ರಕ್ಷಣಾ ಪಡೆಗಳನ್ನ ತಾತ್ರಿಕವಾಗಿ ಸಶಕ್ತಗೊಳಿಸುವ ಜವಾಬ್ದಾರಿ ಯುವ ಇಂಜಿಯರಗಳ ಮೇಲಿದೆ.5ನೇ ಜನರೆಶನ್ ವಿಮಾನಗಳನ್ನ ಹೊರತುಪಡಿಸಿ ಎಲ್ಲ ವಿಮಾನಗಳನ್ನ ತಯಾರಿಸುವ ಸಾಮಥ್ರ್ಯ ನಾವು ಹೊಂದಿದ್ದೆವೆ. ಇಂದು ನಮ್ಮ ದೇಶ 25 ಸಾವಿರ ಕೋಟಿ ರೂ. ವಿಮಾನಗಳ ರಫ್ತು ಮಾಡುತ್ತಿದ್ದೆವೆ. ಹಿಂದುಸ್ತಾನ ಎರೊನಾಟಿಕಲ್ ಲಿಮಿಟೆಡ್ ಸಂಸ್ಥೆ ದೇಶದ ರಕ್ಷಣಾ ಪಡೆಗಳಿಗೆ ಯುದ್ಧ ವಿಮಾನಗಳನ್ನು ನೀಡುತ್ತಿದ್ದೆವೆ. ಈ ವಿಮಾನಗಳ ಕಾರ್ಯಕ್ಷಮತೆಯನ್ನು ಅಚ್ಚುಕಟ್ಟಾಗಿ ಯೋಜನೆಗಳನ್ನ ಹಾಕಿ ನಿರ್ಮಿಸಲಾಗುತ್ತದೆ. ಪೆನ ನಿಂದ ಹಿಡಿದು ವಿಮಾನದ ತಯಾರಿಕೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪಾತ್ರ ಮುಖ್ಯ. ಯಾವುದೇ ವಸ್ತುವಿನ ವಿನ್ಯಾಸದಲ್ಲಿ ಕ್ಯಾಡ್, ಕ್ಯಾಟಿಯಾ, ಸಾಲಿಡ್ ಎಡ್ಜ ಸಾಫ್ಟವೇರ್ ಜ್ಞಾನ ಮುಖ್ಯ. ವಿಮಾನಗಳ ಇಂಜಿನ ತಯಾರಿಕೆಯಲ್ಲಿ ನಮ್ಮ ದೇಶದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದರು.
ದೇಶಕ್ಕಾಗಿ ನಾನು ಎನನ್ನಾದರೂ ಕೊಡುಗೆ ನೀಡುವ ಇಚ್ಛೆ ಹೊಂದಿ ಎಂದರು. ಜ್ಞಾನವಂತರಿಗೆ ಎಂದೇದಿಗೂ ಬೇಡಿಕೆಯಿದ್ದು, ವಿದ್ಯಾರ್ಥಿಗಳಿಗೆ ತಮ್ಮ ತಾಂತ್ರೀಕ ಜ್ಞಾನ ಹೆಚ್ಚಿಸಿಕೊಳ್ಳಲೂ ಆದ್ಯತೆ ನೀಡಬೇಕೆಂದು ಹೇಳಿದರು.ಇಂಜಿನಿಯರಿಂಗನಲ್ಲಿ ಕಲಿಯುವ ಪ್ರತಿಯೊಂದು ವಿಷಯ ತನ್ನದೇಯಾದ ಮಹತ್ವ ಹೊಂದಿದೆ. ತಾವು ಕಲಿಯುವ ಪ್ರತಿಯೊಂದು ಪರಿಕಲ್ಪನೆಯಲ್ಲಿ ಸ್ಪಷ್ಟತೆ ಇರಲಿ. ಉದ್ಯಮದಲ್ಲಿ ಎದುರಾಗುವ ಯಾವುದೇ ಸಮಸ್ಯೆಯನ್ನ ಸರಳವಾಗಿ ಬಗೆಹರಿಸಬಹುದು ಎಂದರು. ಗೆಟ್ ಪರೀಕ್ಷೆಯನ್ನಾ ಪಾಸಾದರೇ ನಿಮ್ಮ ನೇರ ನೇಮಕಾತಿಯಾಗುವಲ್ಲಿ ಸಹಕಾರಿಯಾಗುತ್ತದೆ.ಪ್ರಾಧ್ಯಾಪಕರನ್ನ ಉದ್ಧೇಶಿಸಿ ಮಾತನಾಡಿದ ಅವರು - ಬಾಹ್ಯಾಕಾಶದಲ್ಲಿ ನಮ್ಮ ದೇಶದ ನೂರಕ್ಕೂ ಹೆಚ್ಚು ಉಪಗ್ರಹಗಳು ಹಾರಾಡುತ್ತಿರುವುದಕ್ಕೆ ಸಂಶೋಧನೆಯೇ ಕಾರಣ ಆದ್ದರಿಂದ ಪ್ರಾಧ್ಯಾಪಕರು ಸಂಶೋಧನೆಯತ್ತ ಗಮನ ಹರಿಸಿ ಎಂದರು. ನಮ್ಮ ದೇಶ ಮುಂಬರುವ ದಿನಗಳಲ್ಲಿ ವಿಮಾನ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಯಾಗುತ್ತೆವೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ ಮಾತನಾಡಿ ಹಿಇಂಜಿನಿಯರಿಂಗ್ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಇಸ್ರೋ, ಡಿ.ಆರಿ್ಡ.ಒ, ಎಚ್.ಎ.ಎಲ್ ಕಾರ್ಯನಿರ್ವಹಿಸುವುದು ಹೆಮ್ಮೆಯ ವಿಷಯ. ಇಂಥಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಬೇಕೆಂದರೇ ಮೂಲ ಪರಿಕಲ್ಪನೆಗಳನ್ನ ಸರಿಯಾಗಿ ಅರ್ಥೈಸಿಕೊಂಡು ಅವುಗಳ ಅಳವಡಿಕೆ ಜ್ಞಾನ ಹೊಂದಿರಬೇಕು ಎಂದರು. ಯುದ್ಧದ ಸಮಯದಲ್ಲಂತೂ ಯಾಚ ದೇಶ ತಂತ್ರಜ್ಞಾನದಲ್ಲಿ ಉತ್ತುಂಗ ಸ್ಥಾನದಲ್ಲಿದೆಯೋ ಅಂಥವರಿಗೆ ಮಾತ್ರ ಗೆಲುವು ಸಾಧ್ಯ ಎಂದರು.
ಡಾ. ವಿರಣ್ಣಾ ಮೋದಿ ಸ್ವಾಗತಿಸಿದರು.ಕು. ಚೆತನಕುಮಾರ ಯಾದಗುಡೆ ಅಥಿತಿಗಳನ್ನು ಪರಿಚಯಿಸಿದರು.ಕು. ಸಾನಿಕಾ ಕಾಮೇರಿ, ಭೂಮಿಕಾ ಪುರೊಹಿತ ನಿರೂಪಿಸಿದರು.ಪ್ರೊ. ಪ್ರಸಾದ ರಾಯನ್ನವರ ವಂದಿಸಿದರು.ಪ್ರೊ. ಸಂಗೀತಾ ವಾಟೆಗಾಂವಕರ, ಪ್ರೊ. ಕುಮಾರ ಚೌಗಲಾ, ಡಾ. ಸುನೀಲ ಹೆಬ್ಬಾಳೆ, ಡಾ. ಸಂಜಯ ಪುಜಾರಿ, ಡಾ. ಸಂಜಯ ಅಂಕಲಿ, ಪ್ರೊ. ಪ್ರದೀಪ ಹೊದ್ಲೂರ, ಡಾ. ಸಚೀನ ಮೆಕ್ಕಳಕಿ, ಮೆಕ್ಯಾನಿಕಲ್, ಇಸಿಇ ವಿಭಾಗದ ಭೋದಕ, ಭೊದಕೆತರ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.