ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸುವವ ಅತ್ಯುತ್ತಮ ಶಿಕ್ಷಕ :ಇಬ್ರಾಹಿಂ ಸುತಾರ
ಮಹಾಲಿಂಗಪುರ; ಶಿಸ್ತುಬದ್ಧ ಜೀವನ ನಡೆಸಿ, ಕ್ಷಮಾಗುಣ ಮತ್ತು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸುವವನೇ ಅತ್ಯುತ್ತಮ ಶಿಕ್ಷಕ ಎಂದು ಖ್ಯಾತ ಪ್ರವಚನಕಾರ ಇಬ್ರಾಹಿಂ ಸುತಾರ ಹೇಳಿದರು.
ಬಸವಾನಂದ ಪ್ರೌಢ ಶಾಲೆ ಆಯೋಜಿಸಿದ್ದ ಸಾಧಕ ಶಿಕ್ಷಕರ ಸನ್ಮಾನ ಎಂಬ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ವಿದ್ಯೆ ಸಂಪಾದಿಸುವ ದಾರಿಯೊಂದಿಗೆ ಬದುಕಿನ ಶ್ರೇಷ್ಠ ದಾರಿ ತೋರಿಸುವವನೇ ಶಿಕ್ಷಕ ಮತ್ತು ಶಾಲೆಯೇ ದೇವಾಲಯ. ಶಿಕ್ಷಣ ವೃತ್ತಿ ಪವಿತ್ರ ಈ ದೆಸೆಯಲ್ಲಿ ಇದೇ ವರ್ಷದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸಪನಾ ಅನಿಗೋಳ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ಕೆ.ಗಿಂಡೆ ಅಭಿನಂದನಾರ್ಹರು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದ ಸಪನಾ ಅನಿಗೋಳ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಕರ್ತವ್ಯ ನಿನಿಷ್ಠೆಯಿಂದ ಕಾರ್ಯ ನಿರ್ವಹಿಸುವವ ಅತ್ಯುತ್ತಮ ಶಿಕ್ಷಕ :ಇಬ್ರಾಹಿಂ ಸುತಾರ
ಮಹಾಲಿಂಗಪುರ; ಶಿಸ್ತುಬದ್ಧ ಜೀವನ ನಡೆಸಿ, ಕ್ಷಮಾಗುಣ ಮತ್ತು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸುವವನೇ ಅತ್ಯುತ್ತಮ ಶಿಕ್ಷಕ ಎಂದು ಖ್ಯಾತ ಪ್ರವಚನಕಾರ ಇಬ್ರಾಹಿಂ ಸುತಾರ ಹೇಳಿದರು.
ಬಸವಾನಂದ ಪ್ರೌಢ ಶಾಲೆ ಆಯೋಜಿಸಿದ್ದ ಸಾಧಕ ಶಿಕ್ಷಕರ ಸನ್ಮಾನ ಎಂಬ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ವಿದ್ಯೆ ಸಂಪಾದಿಸುವ ದಾರಿಯೊಂದಿಗೆ ಬದುಕಿನ ಶ್ರೇಷ್ಠೆ ದಾರಿ ತೋರಿಸುವವನೇ ಶಿಕ್ಷಕ ಮತ್ತು ಶಾಲೆಯೇ ದೇವಾಲಯ. ಶಿಕ್ಷಣ ವೃತ್ತಿ ಪವಿತ್ರ ಈ ದೆಸೆಯಲ್ಲಿ ಇದೇ ವರ್ಷದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸಪನಾ ಅನಿಗೋಳ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ಕೆ.ಗಿಂಡೆ ಅಭಿನಂದನಾರ್ಹರು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದ ಸಪನಾ ಅನಿಗೋಳ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ಕೆ.ಗಿಂಡೆಯವರನ್ನು ಶಾಲೆಯ ಹಾಗೂ ನಗರದ ವಿವಿಧ ಗಣ್ಯರು, ಶಾಲಾ ಶಿಕ್ಷಕರು ಸನ್ಮಾನಿಸಿದರು.
ಶಿಕ್ಷಕಿ ಸಪನಾ ಅನಿಗೋಳ ಹಾಗೂ ಎಸ್.ಕೆ.ಗಿಂಡೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಸವಾನಂದ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೊದಲು ಸಂಸ್ಕೃತಿ ಕಲಿಸಿ ನಂತರ ನಿಷ್ಠೆಯಿಂದ ವಿದ್ಯೆ ಕಲಿಸುತ್ತಾರೆ. ನಮಗೆ ದೊರಕಿರುವ ಪ್ರಶಸ್ತಿಗಳು ನಮ್ಮ ಜವಾಬ್ದಾರಿ ಹೆಚ್ಚಿಸಿವೆ ಎಂದರು. ಡಾ. ಬಿ.ಡಿ.ಸೋರಗಾಂವಿ, ಎಂ.ಎಂ.ಕಟಗಿ, ಸಿದ್ಧಾರೂಢ ಮುಗಳಖೋಡ, ಜಯರಾಮ ಶೆಟ್ಟಿ ಮಾತನಾಡಿದರು. ಎಂ.ಪಿ.ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಶಾಲೆ ಉಪಾಧ್ಯಕ್ಷ ಬಿ.ಎಂ.ಢಪಾಳಪುರ, ಸದಸ್ಯರಾದ ಕಲ್ಲಪ್ಪ ಚಿಂಚಲಿ, ಪ್ರಭು ಬೆಳಗಲಿ, ಆಡಳಿತಾಧಿಕಾರಿ ಸಿ.ಎಂ.ಕಟಗಿ, ಮಕ್ಕಳ ಸಾಹಿತಿ ಅಣ್ಣಾಜಿ ಪಡತಾರೆ, ಕಾನಿಪ ಅಧ್ಯಕ್ಷ ಎಸ್.ಎಸ್.ಈಶ್ವರಪ್ಪಗೋಳ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಕ್ಷಕರಾದ ಸಿ.ವಿ.ಹುಣಶ್ಯಾಳ ಸ್ವಾಗತಿಸಿ, ಹುಮಾಯೂನ್ ಸುತಾರ ನಿರೂಪಿಸಿ, ಎಚ್.ಎಲ್.ತಳವಾರ ವಂದಿಸಿದರು.ಸ್.ಕೆ.ಗಿಂಡೆಯವರನ್ನು ಶಾಲೆಯ ಹಾಗೂ ನಗರದ ವಿವಿಧ ಗಣ್ಯರು, ಶಾಲಾ ಶಿಕ್ಷಕರು ಸನ್ಮಾನಿಸಿದರು.
ಶಿಕ್ಷಕಿ ಸಪನಾ ಅನಿಗೋಳ ಹಾಗೂ ಎಸ್.ಕೆ.ಗಿಂಡೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಸವಾನಂದ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೊದಲು ಸಂಸ್ಕೃತಿ ಕಲಿಸಿ ನಂತರ ನಿಷ್ಠೆಯಿಂದ ವಿದ್ಯೆ ಕಲಿಸುತ್ತಾರೆ. ನಮಗೆ ದೊರಕಿರುವ ಪ್ರಶಸ್ತಿಗಳು ನಮ್ಮ ಜವಾಬ್ದಾರಿ ಹೆಚ್ಚಿಸಿವೆ ಎಂದÀರು. ಡಾ. ಬಿ.ಡಿ.ಸೋರಗಾಂವಿ, ಎಂ.ಎಂ.ಕಟಗಿ, ಸಿದ್ಧಾರೂಢ ಮುಗಳಖೋಡ, ಜಯರಾಮ ಶೆಟ್ಟಿ ಮಾತನಾಡಿದರು. ಎಂ.ಪಿ.ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಶಾಲೆ ಉಪಾಧ್ಯಕ್ಷ ಬಿ.ಎಂ.ಢಪಾಳಪುರ, ಸದಸ್ಯರಾದ ಕಲ್ಲಪ್ಪ ಚಿಂಚಲಿ, ಪ್ರಭು ಬೆಳಗಲಿ, ಆಡಳಿತಾಧಿಕಾರಿ ಸಿ.ಎಂ.ಕಟಗಿ, ಮಕ್ಕಳ ಸಾಹಿತಿ ಅಣ್ಣಾಜಿ ಪಡತಾರೆ, ಕಾನಿಪ ಅಧ್ಯಕ್ಷ ಎಸ್.ಎಸ್.ಈಶ್ವರಪ್ಪಗೋಳ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಕ್ಷಕರಾದ ಸಿ.ವಿ.ಹುಣಶ್ಯಾಳ ಸ್ವಾಗತಿಸಿ, ಹುಮಾಯೂನ್ ಸುತಾರ ನಿರೂಪಿಸಿ, ಎಚ್.ಎಲ್.ತಳವಾರ ವಂದಿಸಿದರು.