ಲೇಖನಗಳು

ನಮಗೆ ಶಿಕ್ಷಕರು ನಮ್ಮ ಪಾಲಿಗೆ ದೇವರು

ನಮಗೆ ಶಿಕ್ಷಕರು ನಮ್ಮ ಪಾಲಿಗೆ ದೇವರು

ಶಿಕ್ಷಕರ ಮಾರ್ಗದರ್ಶಿ ಮಕ್ಕಳಿಗೆ ಅಮೂಲ್ಯವಾದದುಗುರು ಎನ್ನುವ ಶಬ್ದ ಒಂದು ಅರ್ಥ ಕೊಡುತ್ತದೆ. ನಾವು ಕನ್ನಡ ಅಕ್ಷರಗಳನ್ನು ಕಲಿಯ ಬೇಕಾದರೆ ನಮಗೆ ಮೊದಲು ಗುರು ಬೇಕು ಬರಿ ಕೇವಲ ಅಕ್ಷರಗಳನ್ನು ಮಾತ್ರ ಅಲ್ಲ ಯಾವುದೇ ಜ್ಞಾನವನ್ನು ಕಲಿಯ ಬೇಕಾದರೆ ಗುರುವಿನಮಾರ್ಗದರ್ಶಿ ನಮಗೆ ಬೇಕು ಗುರುವಿಗೆ ಇನ್ನೊಂದು ಶಬ್ದ ದೇವರು ಎಂದು ಕರೆಯುತ್ತಾರೆ.  

ನಾವು ಶಿಕ್ಷಕರನ್ನು ನಾವು ಮೊದಲು ದೇವರಂತೆ ಕಾಣಬೇಕು ಏಕೆಂದರೆ? ಒಬ್ಬ ಶಿಕ್ಷಕ ಆದವನ್ನು ತನ್ನಲ್ಲಿರುವ ನುವು-ನಲಿವು ಸಂಕಷ್ಟಗಳನ್ನು ಒಂದು ಕಡೆಗೆ ಇಟ್ಟು ಶಾಲೆ ಬಂದು ಪಾಠವನ್ನು ಭೋದನೆ ಮಾಡುವ ಗುಣ ಶಿಕ್ಷಕರಲ್ಲಿ ಮಾತ್ರ ಇರುತ್ತದೆ. ಹಾಗೂ ಶಿಕ್ಷಕರು ಯಾವತ್ತೂ ನಮಗೆ ಮಾರ್ಗದರ್ಶಕರಾಗಿ ಇರುತ್ತಾರೆ. ನಾವು ಏನೆ ತಪ್ಪು ಮಾಡಿದರು ನಮಗೆ ಧೈರ್ಯವನ್ನು ತುಂಬಿನಮ್ಮನ್ನು ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿ ಒಳ್ಳೆಯ ಗುಣ ಇರುತ್ತದೆ.  

ನಾವು ಮನೆಯನ್ನು ಕಟ್ಟ ಬೇಕಾದರೆ ಒಂದು ಭದ್ರವಾಗಿ ಬುನಾದಿಯನ್ನು ಹಾಕಿದಾಗ ಮನೆಯ ಗಟ್ಟಿ ಮುಟ್ಟಾಗಿ ಹೇಗೆ ಇರುತ್ತದೆ. ಹಾಗೆ ಸಹ ನಮಗೆ ಶಿಕ್ಷಕರ ಮಾರ್ಗದರ್ಶನ ಇದ್ದರೆ ನಾವು ಯಾವುದೇ ರಂಗದಲ್ಲಿ ಮುಂದೆ ಬರಲು ಸಾದ್ಯ, ನಾವುಗಳು ಶಿಕ್ಷಣ ಕಲಿಯ ಬೇಕಾದರೆ ಒಂದು ಗಾದೆ ಇದೆ, ಅದು ‘ಮನೆಯೇ ಮೊದಲ ಪಾಠಶಾಲೆ’, ಜನನಿ ತಾನೆ ಮೊದಲ ಗುರುವು ಎಂಬ ಮತ್ತೊಂದಿದೆ, ಎಂದು ಶಿಕ್ಷಕರ ದಿನಾಚರಣೆಯನ್ನು ಸಪ್ಟೆಂಬರ್ 5 ರಂದು ದಿನಾಚರಣೆ ಎಂದು ಮಾಡುತ್ತವೆ ದಿನಾಚರಣೆ ಮಾಡುವ ವೇಳೆ ಶಿಕ್ಷಕರಿಗೆ ಹೂಗುಚ್ಚ, ಪೆನ್ನು, ಹಾಗೂ ಶಿಕ್ಷಕರಿಗೆ ಇಷ್ಟವಾದ ವಸ್ತುಗಳನ್ನು ಕೊಡುತ್ತವೆ ನಮಗೆ ಶಿಕ್ಷಣ ಕಲಿಸಿದ ಶಿಕ್ಷಕರಿಗೆ ಹೂಗುಚ್ಚ, ಪೆನ್ನು ಕೊಡುವ ಬದಲಾಗಿ ಇವರು ನಮಗೆ ಕಲಿಸಿದ ಶಿಕ್ಷಣವನ್ನು ನಾವು ಒಂದು ಒಳ್ಳೆಯ ಮಾರ್ಗದರ್ಶಿಯಾಗಿ ಇಟ್ಟು ಕೊಂಡು ಮುಂದೆ ನಡೆದು ಮುಂದೆ ಒಂದು ದೊಡ್ಡ ವ್ಯಕ್ತಿಯಾಗಿ ನಮಗೆ ಕಲಸಿದ ಶಿಕ್ಷಕರ ಮುಂದೆ ನಿಂತಾಗ ಶಿಕ್ಷಕರು ನಮ್ಮನ್ನು ನೋಡಿ ಸಂತಸ ಪಡುತ್ತಾರೆ, ಮತ್ತು ನಮಗೆ ಶುಭಹಾರೈಕೆ ಹೇಳುತ್ತಾರೆ.  

ಆ ಕ್ಷಣದಲ್ಲೇ ನಾವು ಶಿಕ್ಷಕರಿಗೆ ಒಂದು ಗೌರವ ಸ್ಥಾನ ಮಾನ ಕೊಟ್ಟಾಗೆ, ಡಾ. ಸರ್ವೆಪಲ್ಲಿ ರಾಧಾಕೃಷ್ಣ ರವರನ್ನು ಕೆಲವು ವಿದ್ಯಾರ್ಥಿಗಳು ಹಾಗೂ ಗೆಳೆಯರು ಅವರನ್ನು ಭೇಟಿಯಾಗಿ ಅವರ ಹುಟ್ಟು ಹಬ್ಬವನ್ನು ಆಚರಿಸಲು ಅನುಮತಿ ಕೇಳಿದಾಗ ಅವರು ಸಂತೋಷದಿಂದ ಅಪ್ಪಣೆ ಕೊಟ್ಟಾಗ ಸಪ್ಟೆಂಬರ್ 5 ರಂದು ಶಿಕ್ಷಣ ದಿನಾಚರಣೆ ಎಂದು ಘೋಷಣೆ ಮಾಡಿ ದಿನಾಚರಣೆ ಆಚರಣೆ ಮಾಡಲಾಗುತ್ತದೆ. 

ಶಿಕ್ಷಕರ ದಿನದಂದು ಉತ್ತಮ ಶಿಕ್ಷಕರಿಗೆ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸುತ್ತಾರೆ, ಶಾಲೆಗಳಲ್ಲಿ ಮಕ್ಕಳು ನೃತ್ಯ, ಸಂಗೀತ ಕಾರ್ಯಕ್ರಮಗಳ ಮೂಲಕ ಗುರಗಳಿಗೆ ಸಂಭ್ರಮದಿಂದ ಆಚರಿಸುತ್ತಾರೆ. ಶಿಕ್ಷಕರಿಗೆ ಕೂಡ ಹಲವು ಆಟೋಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ನಡೆಸಲಾಗುತ್ತದೆ. 

ಶಿಕ್ಷಕರ ದಿನಾಚರಣೆಯನ್ನು ದೇಶಗಳಲ್ಲಿ ಅಷ್ಟೇ ಅಲ್ಲಾ ವಿದೇಶಗಳಲ್ಲಿಯೂ ಶಿಕ್ಷಕ ದಿನಾಚರಣೆ ಆಚರಣೆ ಮಾಡಿಕೊಂಡು ಬರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ನಾವುಗಳು ಶಿಕ್ಷಕರ ದಿನಾಚರಣೆಯನ್ನು ಮಾಡಿ ಶಿಕ್ಷಕರಿಗೆ ಗೌರವ ಕೊಡುವುದರ ಜೊತೆಗೆ ಪ್ರೀತಿ ಪಾತ್ರರಾಗಿ ಇರುತ್ತವೆ, ನಮಗೆ ಶಿಕ್ಷಕರಿಗೆ ನಮ್ಮ ಪಾಲಿಗೆ ದೇವರು ಎಂದು ಹೇಳುವುದಕ್ಕೆ ಸಂತಸ ಅನಿಸುತ್ತದೆ.            

 - ಬಿ. ಎಸ್‌. ಬಾಗೇವಾಡಿಮಠ 

- * * * - 


ಸುದ್ದಿ ಓದಿ