ಸಿರುಗುಪ್ಪ

ಕ್ರಿಯಾತ್ಮಕ ಸಾಕ್ಷರತಾ ಬೋಧಕರ ತರಬೇತಿ ಕಾರ್ಯಗಾರ

ಕ್ರಿಯಾತ್ಮಕ ಸಾಕ್ಷರತಾ ಬೋಧಕರ ತರಬೇತಿ ಕಾರ್ಯಗಾರ

ಸಿರುಗುಪ್ಪ : ಪ್ರಜಾಪ್ರಭುತ್ವದ ಹೃದಯ ಗ್ರಾಮ ಪಂಚಾಯಿತಿಗಳು ಗ್ರಾಮ ಪಂಚಾಯತ್ ಸಬಲಗೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುವುದು ಎಂದು ತಾಲೂಕು ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಮಡಗಿನ ಬಸಪ್ಪ ಹೇಳಿದರು.

 ತಾಲೂಕು ಪಂಚಾಯತ್ ಸಭಾಭವನದಲ್ಲಿ ಮೈಸೂರಿನ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಹಾಗೂ ಸಿರುಗುಪ್ಪ ತಾಲೂಕು ಪಂಚಾಯತ್ ಸಹಯೋಗದಲ್ಲಿ 2022- 23 ನೇ ಸಾಲಿನ ಸಾಕ್ಷರತಾ ಸಾಕ್ಷರ ಸನ್ಮಾನ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಅನಕ್ಷರಸ್ಥ ನವ ಸಾಕ್ಷರತಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಕ್ರಿಯಾತ್ಮಕ ಸಾಕ್ಷರತಾ ತರಬೇತಿ ಹಮ್ಮಿಕೊಂಡ ಸಾಕ್ಷರತಾ ಬೋಧಕರ ಮೂರು ದಿನಗಳ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ ಗ್ರಾಮ ಪಂಚಾಯತಿಯ ಸದಸ್ಯರು ಸಬಲರಾದರೆ ಅಂತಹ ಗ್ರಾಮ ಪಂಚಾಯತ್ ಬಲಗೊಳ್ಳುತ್ತದೆ ಗ್ರಾಮ ಪಂಚಾಯತ್ ಗಳಲ್ಲಿ ಸಾಕ್ಷರರು ನವ ಸಾಕ್ಷರರು ಚುನಾಯಿತ ರಾಗಿರಬಹುದು ಅಂತಹ ಸದಸ್ಯರನ್ನು ಗುರುತಿಸಿ ಓದು ಬರಹ ಲೆಕ್ಕಾಚಾರಗಳಲ್ಲಿ ಅವರನ್ನು ಮತ್ತಷ್ಟು ಸದೃಢರನ್ನಾಗಿ ಮಾಡಬೇಕಾಗಿದೆ ಎಂದರು ಶಾಲಾ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಗುರಪ್ಪ ತಾಲೂಕು ಪಂಚಾಯತ್ ಸಹಾಯಕ ಅಧಿಕಾರಿ ಬಸವರಾಜ್ ಎಸ್ ಟಿ ಆರ್ ಡಿ ತರಬೇತುದಾರರಾದ ಮಾರಪ್ಪ ನಾಯಕ ಕುರುಬಳ್ಳಿ ತಿಮ್ಮಯ್ಯ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಯ್ಯ ತಿಮ್ಮನ ಗೌಡ ಬಸವರಾಜಪ್ಪ ಪರಶುರಾಮ ಸುರೇಶ ಇದ್ದರು. ಸಾಕ್ಷರತಾ ಯಶಸ್ವಿಗೆ ಪ್ರತಿಯೊಬ್ಬರು ಕಲಿಯಿರಿ ಕಲಿಸಿರಿ ಸಾಕ್ಷರಸ್ಥರಾಗಿರಿ ಎಂದು ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ.


ಸುದ್ದಿ ಓದಿ