ಕನಕ ಪ್ರಶಸ್ತಿಗೆ ಶಿಕ್ಷಕ, ಲೇಖಕ ನಾಗಪ್ಪ ಬೆಂತೂರ ಭಾಜನ
ಶಿಗ್ಗಾವಿ 28: ಕಲೆ, ಸಾಹಿತ್ಯ, ಶಿಕ್ಷಣ, ರಂಗಭೂಮಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕರ್ನಾಟಕ ವಿಶ್ವ ವಿದ್ಯಾಲಯದ ಕನಕ ಅಧ್ಯಯನ ಪೀಠ ಕೊಡಮಾಡುವ ಕನಕ ಪ್ರಶಸ್ತಿಯನ್ನು ತಾಲೂಕಿನ ಶಿಕ್ಷಕ, ಲೇಖಕ ನಾಗಪ್ಪ ಬೆಂತೂರಗೆ ನೀಡಿ ಗೌರವಿಸಿದೆ.
ತಾಲೂಕಿನ ಶಿಕ್ಷಕರಾಗಿರುವ ನಾಗಪ್ಪಾ ಬೆಂತೂರ ಅವರು ಶೈಕ್ಷಣಿಕ ಕ್ಷೇತ್ರದಲ್ಲಿನ ಉತ್ತಮ ಸಾಧನೆ ಮಾಡುವ ಮೂಲಕ ದಿವ್ಯಾಂಗರ ಕುರಿತ ಲೇಖನಗಳು ಮತ್ತು ವಿಷೇಶ ಆಸಕ್ತಿ, ಪ್ರಸ್ತುತ ವ್ಯವಸ್ಥೆಯ ಕುರಿತಾದ ಬರಹಗಳು, ಕ.ಸಾ.ಪ ಅಧ್ಯಕ್ಷರಾಗಿ ಮಾಡುತ್ತಿರುವ ಕನ್ನಡ ಸೇವೆ, ಸಾಮಾಜಿಕ ಕಳಕಳಿ, ಸಾಹಿತ್ಯಕ್ಷೇತ್ರದಲ್ಲಿನ ಸೃಜನಾತ್ಮಕ ಹಾಗೂ ನಾವಿನ್ಯಯುತ ಕಾರ್ಯಕ್ರಮಗಳ ಆಯೋಜನೆ ಮತ್ತು ಸಂಘಟನೆಗಳನ್ನು ಪರಿಗಣಿಸಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಕನಕ ಅಧ್ಯಯನ ಪೀಠ, ಚೇತನ ಫೌಂಡೇಶನ್ ಧಾರವಾಡ ಅವರು ಆಯೋಜಿಸಿದ್ದ ಧಾರವಾಡ ನುಡಿ ಸಡಗರ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜಕ ಹನುಮಗೌಡ ಸಿ. ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಂಶೋಧಕ ಡಾ. ಜಗನ್ನಾಥ ಆರ್. ಗೇಣೆನ್ನವರ, ಕವಿವಿ ಧಾರವಾಡ ಕನಕ ಅಧ್ಯಯನ ಪೀಠದ ಉಪನ್ಯಾಸಕ ಡಾ. ಸಿ.ಡಿ ದೊಡ್ಡಮನಿ, ಲೇಖಕಿ ಲಕ್ಷ್ಮೀ ಮುದೇನೂರ, ಕವಿವಿ ಧಾರವಾಡ ಸಹಾಯಕಿ ಡಾ. ಅನಿತಾ ಗುಡಿ, ಚೇತನ ಫೌಂಡೇಶನ ಧಾರವಾಡದ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ಹಾಗೂ ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು, ಕವಿಗಳು, ಕಲಾವಿದರು ಉಪಸ್ಥಿತರಿದ್ದರು.