ಹಗರಿಬೊಮ್ಮನಹಳ್ಳಿ

ಸಡಗರ ಸಂಭ್ರಮದಿಂದ ಶಿಕ್ಷಕರ ದಿನಾಚರಣೆ

ಸಡಗರ ಸಂಭ್ರಮದಿಂದ ಶಿಕ್ಷಕರ ದಿನಾಚರಣೆ

ಮರಿಯಮ್ಮನಹಳ್ಳಿ 05: ಸಮೀಪದ ದೇವಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಹಳ ಸಡಗರ ಸಂಭ್ರಮದಿಂದ ಶಿಕ್ಷಕರ ದಿನಾಚರಣೆಯನ್ನು ಗ್ರಾಮದ ಎಸ್‌ಡಿಎಂಸಿ ಸಮಿತಿಯ ಮುಂದಾಳ್ವತದಲ್ಲಿ ಶಾಲೆಯ ಮುಖ್ಯ ಶಿಕ್ಷಕರಿಗೂ ಮತ್ತು ಸಾಹಸಿ ಶಿಕ್ಷಕರಿಗೆ ಸನ್ಮಾನವನ್ನು ಬಹಳ ಅದ್ದೂರಿಯಾಗಿ ಮಾಡಲಾಯಿತು.  

ಈ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಸಮಿತಿಯ ಅಧ್ಯಕ್ಷ ಎಚ್ ಪರಶುರಾಮ್ ಟಿ ಹುಲಗಪ್ಪ ರಾಘವೇಂದ್ರ ಯು ಕೆಂಚಪ್ಪ ಯು ತಿಮ್ಮೇಶ ಮತ್ತು ಇನ್ನುಳಿದ ಎಸ್ಡಿಎಂಸಿ ಸದಸ್ಯರು ಮತ್ತು ಶಾಲೆಯ ಮುಖ್ಯ ಶಿಕ್ಷಕರಾದ ಸಿ ವೆಂಕಟೇಶ್ ಮತ್ತು ಸಹ ಶಿಕ್ಷಕರಾದ ಕೆ ಕುಮಾರಸ್ವಾಮಿ ನವೀನ್ ಪಾರ್ವತಮ್ಮ ಹೇಮಾವತಿ ನಾಗವೇಣಿ ಪರಿನಾ ಮತ್ತು ಗ್ರಾಮದ ಮುಖಂಡರಾದ ಅಂಗಡಿ ಹುಲಗಪ್ಪ ಮತ್ತು ಗ್ರಾಮದ ಅನೇಕ ಮುಖಂಡರು ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ