ರಾಧಾಕೃಷ್ಣನ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಲೋಕದರ್ಶನ ವರದಿ
ಮಹಾಲಿಂಗಪುರ : ಪಟ್ಟಣದ ಡಾ. ಎಸ್ ರಾಧಾಕೃಷ್ಣನ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್ ಎಸ್ ಉಳ್ಳಾಗಡ್ಡಿ ಶಿಕ್ಷಕ ರಾಷ್ಟ್ರ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಇಂದಿನ ಶಿಕ್ಷಕರು ಮೌಲ್ಯ ಶಿಕ್ಷಣ ಜೊತೆಗೆ ದಿನದ ಪಾಠವನ್ನು ಮಾಡುವ ಅವಶ್ಯಕತೆ ಇದೆ. ಪ್ರಸ್ತುತ ದಿನಗಳಲ್ಲಿ ಮೌಲ್ಯ ಶಿಕ್ಷಣ ಕಳೆದುಕೊಳ್ಳುತ್ತಿದ್ದೇವೆ. ಮೌಲ್ಯ ಶಿಕ್ಷಣ ಜೊತೆಗೆ ಸಂಸ್ಕಾರ ಎಂಬ ಶಿಖರವು ಶಿಕ್ಷಣಕ್ಕೆ ಕಳಸವಿದ್ದಂತೆ ಎಂಬ ವಿಚಾರವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನಾಕ್ಷಿ ಉಳ್ಳಾಗಡ್ಡಿ ವಹಿಸಿಕೊಂಡಿದ್ದರು, ವೇದಿಕೆ ಮೇಲೆ ಸಂಸ್ಥೆಯ ಸಂಸ್ಥಾಪಕ ಎಸ್ ಎಸ್ ಉಳ್ಳೇಗಡ್ಡಿ, ಸಲಹಾ ಸಮಿತಿಯ ಅಧ್ಯಕ್ಷ ಮಹಾಲಿಂಗ ಗೋಕಾವಿ, ಕಾರ್ಯದರ್ಶಿ ಶಶಿಧರ್ ಉಲ್ಲೆಗಡ್ಡಿ ಮುಖ್ಯ ಶಿಕ್ಷಕಿ ಮಹಾನಂದ ಮೂಶಿ , ಯೋಗ ಶಿಕ್ಷಕ ರಾಘವೇಂದ್ರ ನಿಲ್ಲನ್ನವರ್, ಪತ್ರಕರ್ತ ಮಹಾದೇವ್ ಕುಲಗೋಡ, ಚಿತ್ರಕಲಾ ಶಿಕ್ಷಕ ಶಿವಾನಂದ ನಿಲನ್ನವರ್ ಹಾಜರಿದ್ದರು.
ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ್ ತಂದೆ-ತಾಯಿ ಗುರುಗಳಿಂದ ಶಿಕ್ಷೆಕ್ಕೆ ಒಳಗಾಗಿ ಜೀವನ ರೂಪಗೊಂಡರೆ ನಿಜವಾದ ವ್ಯಕ್ತಿತ್ವ ಅರಳುತ್ತದೆ. ಈ ಮೂರು ಜನರಿಂದ ಮಾತ್ರ ದಂಡನೆಗಳಾಗಬೇಕು. ಇವರನ್ನು ಹೊರತುಪಡಿಸಿ ಯಾರೋ ಒಬ್ಬ ವ್ಯಕ್ತಿ ಅಧಿಕಾರಿ ನಮನ್ನು ದಂಡಿಸಿದರೆ ನಾವು ಸಮಾಜದಲ್ಲಿ ಮೌಲ್ಯವನ್ನು ಕಳೆದುಕೊಳ್ಳುತ್ತೇವೆ. ಶಿಕ್ಷಕ ಎಲ್ಲಾ ಹುದ್ದೆಗಳಿಗೆ ಸಮರ್ಥ ವ್ಯಕ್ತಿಗಳನ್ನ ತಯಾರಿಸುವ ಕಾರ್ಮಿಕ, ತ್ಯಾಗ ಜೀವಿ ಸರ್ವರಲ್ಲೂ ಒಳಿತನ್ನು ಕಾಣುವ ಶ್ರಮ ಜೀವಿ ಶಿಕ್ಷಕರನ್ನು ಮೀರಿ ವಿದ್ಯಾರ್ಥಿ ಬೆಳೆದಾಗ ಮಾತ್ರ ಶಿಕ್ಷಕ ತೃಪ್ತವಾಗುತ್ತಾನೆ ಎಂಬ ವಿಚಾರಗಳನ್ನು ತಿಳಿಸಿದರು.
ಪತ್ರಕರ್ತ ಮಹಾದೇವ ಕುಲಗೋಡ ಅವರು ವಿದ್ಯಾರ್ಥಿಗಳು ಯಶಸ್ಸು ಕಾಣಬೇಕಾದರೆ ನಿರಂತರ ಸಾಧಕರಾಗಬೇಕು ಶಿಕ್ಷಕ ವೃತ್ತಿ ಬಹಳ ಪವಿತ್ರವಾದ ವೃತ್ತಿ ಅದಕ್ಕೆ ನಾವು ಚಾರಿತ್ರ ವಂತರಾಗಬೇಕು, ಸಚ್ಚಾರಿತ್ಯ ಉಳ್ಳವರು ಮಾತ್ರ ಒಳ್ಳೆಯ ವ್ಯಕ್ತಿತ್ವಕ್ಕೆ ದಾರಿದೀಪವಾಗಲು ಸಾಧ್ಯ ಎಂಬ ವಿಚಾರವನ್ನು ಮಾರ್ಮಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದಶರ್ಿ ಶಶಿಧರ ಉಳ್ಳೇಗಡ್ಡಿ ಮಾತನಾಡಿ ಶಿಕ್ಷಕರು ಈ ದೇಶದ ಭವಿಷ್ಯ ರೂಪಿಸುವಲ್ಲಿ ಹಗಲಿರಲು ಶ್ರಮಿಸುತ್ತಿರುತ್ತಾನೆ ಶಿಕ್ಷಕರೂ ಜ್ಯೋತಿಯ ಹಾಗೆ ತಾವು ಉರಿದು ಮಕ್ಕಳಿಗೆ ಬೆಳಕನ್ನು ನೀಡಿ ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕಿಯರು ಮತ್ತು ಮುಖ್ಯೋಪಾಧ್ಯಾಯಿನಿ ಮಹಾನಂದ ಮೂಶಿ, ಶ್ವೇತಾ ಕುಲಕರ್ಣಿ, ಸವಿತಾ ಬೀಸನ್ ಕೊಪ್ಪ, ನೀಲಾ ಕಂಠಿ, ರೇಣುಕಾ ಗೋಳಸಂಗಿ, ಸಾವಿತ್ರಿ ಕುಂದಿ, ಶಿವಲೀಲಾ ಮೋದಿ, ಲಕ್ಷ್ಮೀಬಾಯಿ ಸಣ್ಣಕ್ಕಿ, ಪ್ರಿಯಾಂಕ ಗೊಲಭಾವಿ ಮತ್ತು ಯೋಗ ಶಿಕ್ಷಕ ರಾಘವೇಂದ್ರ ನೀಲನ್ನವರ, ಗಣಿತ ಶಿಕ್ಷಕ ಮಹಾದೇವ ಕುಲಗೋಡ, ಚಿತ್ರಕಲಾ ಶಿಕ್ಷಕ ಶಿವಾನಂದ ನೀಲಣ್ಣವರ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷ ಮಹಾಲಿಂಗ ಗೋಕಾವಿ ನಮ್ಮ ಸಂಸ್ಥೆಯು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಹೆಸರುವಾಸಿಯಾಗಿದೆ ಉತ್ತಮ ರಾಷ್ಟ್ರ ಕಟ್ಟುವ ರಾಷ್ಟ್ರದ ಶಿಲ್ಪಿಗಳಾದ ಶಿಕ್ಷಕರ ಬಾಳು ಬಂಗಾರವಾಗಲಿ ಎಂದು ಕಾರ್ಯಕ್ರಮದಲ್ಲಿ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ 16 ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು