ಶಿಕ್ಷಕರ ದಿನಾಚರಣೆ ಮತ್ತು ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ
ಲೋಕದರ್ಶನ ವರದಿ
ಮಹಾಲಿಂಗಪುರ 18: ಶಿಕ್ಷಕ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ ವಿದ್ಯಾಥರ್ಿಗಳ ವ್ಯಕ್ತಿತ್ವಗಳನ್ನ ಸೃಷ್ಟಿಸುವ ಸೃಷ್ಟಿಕರ್ತ ಎಂದು ಬಸವಾನಂದ ಪ್ರಾಥಮಿಕ ಶಾಲೆಯ ಶಿಕ್ಷಕ ಹುಮಾಯೂನ್ ಸುತಾರ ಹೇಳಿದರು.
ಸ್ಥಳೀಯ ಸರ್ಕಾ ರಿ ಹಿರಿಯ ಪ್ರಾಥಮಿಕ ಶಾಲೆ ಬುದ್ನಿ ಪಿ ಡಿ ಬಡಾವಣೆಯಲ್ಲಿ ರನ್ನ ವಿಚಾರ ವೇದಿಕೆ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಾ ವಿದ್ಯೆ ಬಂತು ವಿನಯ ಹೋಯಿತು, ಬುದ್ಧಿ ಬಂತು ಶ್ರದ್ದೆ ಹೋಯಿತು, ವಿಜ್ಞಾನ ಬಂತು ಸಮಾಧಾನ ಹೋಯಿತು, ಮಾತು ಬಂತು ಕೃತಿ ಹೋಯಿತು, ಸ್ವಾತಂತ್ರ್ಯ ಬಂತು ಸೌಜನ್ಯ ಹೋಯಿತು,ಜಾತಿ ಬಂತು ಪ್ರೀತಿ ಹೋಯಿತು ಎಂದು ಸಿದ್ದಯ್ಯ ಪುರಾಣಿಕರ ವಚನವ ಆಧಾರವಾಗಿಟ್ಟುಕೊಂಡು ಶಿಕ್ಷಕರ ಲಕ್ಷಣ ಕುರಿತು ಉಪನ್ಯಾಸ ನೀಡಿದರು.
ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಸಪನಾ ಅನಿಗೋಳ ಸಸಿಕೆ ನೀರೆರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಮರ ಎಷ್ಟೇ ದೊಡ್ಡದಾದರೂ ಅದರ ಬೇರು ಮಾತ್ರ ಕೆಳಗೆ ಇರುತ್ತವೆ ಹಾಗೆ ಸಾಧನೆಗೆ ಸಮಾಜದ ಪ್ರೇರಣೆಯೇ ಸ್ಪೂರ್ತಿ ಎಂದು ಮಾರ್ಮಿ ಕವಾಗಿ ನುಡಿದರು.
ರನ್ನ ವಿಚಾರ ವೇದಿಕೆ ಅಧ್ಯಕ್ಷ ಅಣ್ಣಾಜಿ ಪಡತಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಧನೆ ನಿನ್ನದಾದರೆ ಸಕಲವು ನಿನ್ನದೆ ಎಂದರು. ಮುಖ್ಯ ಅತಿಥಿಗಳಾದ ಶ್ರೀಶೈಲಪ್ಪ ಉಳ್ಳೇಗಡ್ಡಿ, ಶಂಕರಗೌಡ ಪಾಟೀಲ ಮಾತನಾಡಿದರು, ಜನಾನುರಾಗಿ ಶಿಕ್ಷಕ ಬಸವರಾಜ ಕೌಜಲಗಿ, ಮಲ್ಲಪ್ಪ ಸೈದಾಪುರ, ಗುರುಲಿಂಗಪ್ಪ ಅಮ್ಮಣಗಿ ವೇದಿಕೆಯ ಮೇಲಿದ್ದರು. ರನ್ನ ವಿಚಾರ ವೇದಿಕೆ ಕೊಡಮಾಡುವ 2023 ನೇ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಕಿ ಅಕ್ಕಾತಾಯಿ ಅಲ್ಲಪ್ಪ ಕಿಚಡಿ ಯವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಗತಿಪರ ರೈತ ಗೋಲೇಶ ಅಮ್ಮಣಗಿ ಸ್ವಾಗತಿಸಿದರು, ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಕಾರ್ಯಕ್ರಮದ ಸಂಚಾಲಕ ಹಾಗೂ ರನ್ನ ವಿಚಾರ ವೇದಿಕೆಯ ಸಂಘಟನಾ ಕಾರ್ಯದಶರ್ಿ ಭೀಮಶಿ ನೇಗಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಸವ ಬಳಗದ ಸಂಚಾಲಕ ಬಸವರಾಜ ಮೇಟಿ ನಿರೂಪಿಸಿದರು, ಶಾಲೆಯ ಮುಖ್ಯಗುರು ಕೆ.ಎಸ್ ಹಿರೇಮಠ ವಂದಿಸಿದರು.
ಈರಣ್ಣ ಹಲಗತ್ತಿ, ಜಿ.ಎಸ್ ಗೊಂಬಿ,ಎಸ್.ಕೆ ಗಿಂಡೆ,ಎಸ್.ಬಿ ರಡರಟ್ಟಿ,ವಿನಾಯಕ ಬಡಿಗೇರ,ಎಂ.ಡಿ ಕಾಮರಡ್ಡಿ,ಹಾದಿಮನಿ,ಗೌಡಪ್ಪಗೋಳ, ಕೊಣ್ಣೂರ,ಪಡತಾರೆ,ಜುಟ್ನಟ್ಟಿ ಸರ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.