ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿ
ಮರಿಯಮ್ಮನಹಳ್ಳಿ 25: ವಿಧ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಅಪೌಷ್ಟಿಕತೆ ನಿವಾರಿಸಿಕೊಳ್ಳಿ ಎಂದು ಪಟ್ಟಣ ಪಂಚಾಯಿತಿ.ಅಧ್ಯಕ್ಷ ಆದಿಮನಿಹುಸೇನ್ ಬಾಷ, ಕರೆ ನೀಡಿದರು.
ಅವರು ಪಟ್ಟಣದ ಶ್ರೀಗಣೇಶ್ ಮಲ್ ಜೈನ್ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ,ಅಜಿಂ ಪ್ರೇಮ್ ಜಿ ಫೌಂಡೇಷನ್ ಸಹಯೋಗದಲ್ಲಿ ಶಾಲಾಶಿಕ್ಷಣ ಇಲಾಖೆ,ರಾಜ್ಯದ ಸರ್ಕಾರಿಪೂರ್ವ ಪ್ರಾಥಮಿಕ ತರಗತಿಯಿಂದ 10 ತರಗತಿಯವರೆಗೆ ಮಕ್ಕಳಿಗೆ ವಾರದಲ್ಲಿ ಆರುದಿನ ಮೊಟ್ಟೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲಾವರಣ ಸ್ವಚ್ಚವಾಗಿಡಲು ವಾರದ 2ದಿನ ಪೌರಕಾರ್ಮಿಕರನ್ನು ನಿಯೋಜಿಸಲಾಗುವುದು, ನಮ್ಮ ಪ.ಪಂ.ನಲ್ಲಿ ಸಿಬ್ಬಂದಿಗಳ ಕೊರತೆಯಿರುವ ಹಿನ್ನೆಲೆಯಲ್ಲಿ ವಾರದ ಎರಡುದಿನಗಳ ಮಟ್ಟಿಗೆ ಆದ್ಯತೆ ನೀಡಲಾಗುವುದು, ಇದರೊಂದಿಗೆ ಇಲ್ಲಿನ ಶಿಕ್ಷಕರು ಕೂಡ,ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿ ಸಮಾಜದ ಉತ್ತಮ ವ್ಯಕ್ತಿಗಳನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಶಾಲೆಯಮುಖ್ಯ ಶಿಕ್ಷಕಿ ಸಿ.ಬಸಮ್ಮ ,ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಕಾಸೀಂಸಾಬ್, ಪಟ್ಟಣ ಪಂಚಾಯಿತಿ ಸದಸ್ಯ ಎಲ್.ವಸಂತ, ಎಸ್ಡಿಎಂಸಿ ಸದಸ್ಯ ಪಿ. ಕುಮಾರ್ ಹಾಗೂ ಶಾಲಾ ಸಹಶಿಕ್ಷಕರು ಸೇರಿದಂತೆ ಇನ್ನಿತರರಿದ್ದರು.