ಹಗರಿಬೊಮ್ಮನಹಳ್ಳಿ

ಆ. 10ರಿಂದ ಜಂತುಹುಳು ನಿವಾರಣೆ ಕಾರ್ಯಕ್ರಮದ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆ

ಆ. 10ರಿಂದ ಜಂತುಹುಳು ನಿವಾರಣೆ ಕಾರ್ಯಕ್ರಮದ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆ

ಹಗರಿಬೊಮ್ಮನಹಳ್ಳಿ 04: ಒಂದು ವರ್ಷದ ಮಗುವಿನಿಂದ ಹತ್ತೊಂಭತ್ತು ವರ್ಷದ ಮಕ್ಕಳಿಗೆ ಆಗಸ್ಟ್‌ 10 ರಿಂದ 17ರವರೆಗೆ ನಡೆಯುವ ಜಂತುಹುಳು ನಿವಾರಣೆ ಕಾರ್ಯಕ್ರಮದ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆಯು ಗುರುವಾರ ತಹಸೀಲ್ದಾರ್ ಕಾರ್ತಿಕ್ ಅಧ್ಯಕ್ಷತೆಯಲ್ಲಿ ನಡೆಯಿತು. 

ತಹಶಿಲ್ದಾರ್ ಕಾರ್ತಿಕ್ ಸಭೆಯಲ್ಲಿ ಮಾತನಾಡಿ 1ರಿಂದ 19ವರ್ಷದ ಎಲ್ಲಾ ಮಕ್ಕಳಿಗೂ ಈ ಜಂತುಹುಳು ನಿವಾರಣೆ ಮಾತ್ರೆಗಳನ್ನು ಕಡ್ಡಾಯವಾಗಿ ಪೋರೈಸುವಂತೆ ತಿಳಿಸಿದರು, ಇನ್ನು ಪ್ರತಿ ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಮಕ್ಕಳ ವಯಸ್ಸಿಗನುಗುಣವಾಗಿ ಮಾತ್ರೆಗಳನ್ನು ನೀಡಿ ಬಳಸುವ ಕ್ರಮವನ್ನು ವಿವಿರಿಸುವಂತೆ ತಿಳಿಸಿದರು. ಇನ್ನು ಅಂಗನವಾಡಿ ಸೇರಿದಂತೆ ಶಾಲೆಗಳಲ್ಲಿಯೂ ಮಾತ್ರೆಗಳನ್ನು ನೀಡಲಾಗುವುದು. ಇದರ ಜೊತೆ ಶಾಲಾ ದಾಖಲಾತಿಗೆ ಒಳಪಡದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಆಶಾ ಕಾರ್ಯಕರ್ತೆಯರು ಅವರನ್ನು ಗುರುತಿಸಿ ಹತ್ತಿರದ ಅಂಗನವಾಡಿಗೆ ಕರೆದುಕೊಂಡು ಹೋಗಿ ಕೇಂದ್ರದಲ್ಲಿ ದೊರೆಯುವ ಜಂತುಹುಳು ಮಾತ್ರೆಗಳನ್ನು ನೀಡುವ ಕಾರ್ಯ ಕ್ರಮಬಧ್ಧವಾಗಿ ಮಾಡಬೇಕು, ಸಮಿತಿಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡುವಂತೆ ತಿಳಿಸಿದರು. 

ಈ ಸಂಧರ್ಭದಲ್ಲಿ ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಡಾ.ಪ್ರವೀಣ್, ತಾಲೂಕು ಮುಖ್ಯ ವೈದ್ಯಾಧಿಕಾರಿ ತಿಪ್ಪೇಸ್ವಾಮಿ, ಡಾ.ಪ್ರಶಾಂತ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಬಾಗವಹಿಸಿದ್ದರು. 


ಸುದ್ದಿ ಓದಿ