ಬಳ್ಳಾರಿಯಲ್ಲಿ ಮೊದಲ ಬಾರಿಗೆ ತನೈರಾ ಪ್ರದರ್ಶನ
ಬಳ್ಳಾರಿ 18: ಟೈಟನ್ನ ಯುವ ಬ್ರಾಂಡ್ ಆಗಿರುವ ತನೈರಾ ವತಿಯಿಂದ ಮೊದಲ ಬಾರಿಗೆ ನಗರದಲ್ಲಿ ಕರಕುಶಲ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ. ಈ ತಿಂಗಳ 21 ರಿಂದ 25 ರವರೆಗೆ ಪ್ರದರ್ಶನ ಇರುತ್ತದೆ.
ನಗರದ ಕಾಳಮ್ಮ ಬೀದಿಯ ರಾಮೇಶ್ವರಿ ಹೋಟೆಲ್ ಪಕ್ಕದಲ್ಲಿರುವ ತನಿಷ್ಕ್ ಷೋರೂಂನಲ್ಲಿ ಪ್ರದರ್ಶನ ನಡೆಯಲಿದ್ದು, ಬನಾರಸ್, ಚಂದೇರಿ, ಮಹೇಶ್ವರಿ, ಬಂಗಾಳ, ಭಾಗಲ್ಪುರ, ಕಾಂಜೀವರಂ, ದಕ್ಷಿಣ ಭಾರತ ಮತ್ತು ಕೈಯಿಂದಲೇ ನೇಯುವ ಭಾರತದ ಇತರ ಪ್ರದೇಶಗಳ ವೈವಿಧ್ಯಮಯ ಶ್ರೇಣಿಯ ಸೀರೆಗಳು ಪ್ರದರ್ಶನಕ್ಕೆ ಇರುತ್ತವೆ. ನಾಲ್ಕು ದಿನಗಳ ಪ್ರದರ್ಶನದಲ್ಲಿ ತನೈರಾ ವಧುವಿನ ಸೀರೆಗಳ ಸಂಗ್ರಹವೂ ಇದ್ದು, ಆಯ್ದ ಉತ್ಪನ್ನಗಳ ಮೇಲೆ ಶೇ.30ರವರೆಗೆ ರಿಯಾಯ್ತಿ ಇರುತ್ತದೆ ಎಂದು ತನೈರಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ವರಿ ಶ್ರೀನಿವಾಸನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ದೇಶದ ವಿವಿಧೆಡೆಗಳ ಅತ್ಯುತ್ತಮ ದರ್ಜೆಯ ನೆಯ್ಗೆ ಸೀರೆಗಳು ಒಂದೇ ಸೂರಿನಡಿ ಲಭ್ಯವಿದ್ದು, ವಧುವಿನ ವಿಶೇಷ ಶ್ರೇಣಿಯ ತುಸ್ಸಾರ್, ಬನಾರಸ್, ಏಕತ್ ಮತ್ತು ಚಂದೇರಿ ಸೀರೆಗಳು, ಹಬ್ಬದ ವಿನ್ಯಾಸದ ಸೀರೆಗಳು, ಹೊಚ್ಚ ಹೊಸ ತಸ್ವಿಯ ವೈವಿಧ್ಯಮಯ ಶ್ರೇಣಿ ಇರುತ್ತದೆ ಎಂದು ವಿವರಿಸಿದ್ದಾರೆ. ಲೆನಿನ್ ಮತ್ತು ರೇಷ್ಮೆಯ ಸೀರೆಗಳು ಲಭ್ಯವಿದ್ದು, ಡ್ರೆಸ್ ಮೆಟೀರಿಯಲ್, ಧರಿಸಲು ಸಿದ್ಧ ರವಿಕೆಗಳು, ಮುಖಗವಸು, ಸ್ಟೋಲ್ ಮತ್ತು ದುಪ್ಪಟಾ ಪ್ರದರ್ಶನಕ್ಕಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.