ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಾರ‌್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 31: ಶಿಕ್ಷಕರು ಒಳ್ಳೆಯ ರೀತಿಯಿಂದ ಕೆಲಸ ಮಾಡಿದ್ದೇ ಆದರೆ ಪ್ರತಿಯೊಂದು ಮಗುವು ಉಜ್ವಲ ಭವಿಷ್ಯವನ್ನು ಕಾಣುತ್ತದೆ, ಸಾಧನೆಗೆ ಅಸಾದ್ಯ ಎಂಬುದಿಲ್ಲಾ, ಅದಕ್ಕೆ ಯಾವುದೇ ಜಾತಿ, ಬೇದದ ಹಂಗಿಲ್ಲಾ, ಅಸಾದ್ಯ ಎಂಬುದು ಮೂರ್ಖರ ಡೈರಿಯಲ್ಲಿ ಇರುವ ಪದ ಆಗಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ಕುನ್ನೂರ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2022-23 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ದೆಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಮಕ್ಕಳು ಜಿಲ್ಲಾಮಟ್ಟ, ರಾಜ್ಯ ಮಟ್ಟದಲ್ಲಿ ಮಿಂಚಬೇಕು, ಇಲ್ಲಿ ಗೆಲುವು ಸೋಲು ಮುಖ್ಯ ಅಲ್ಲಾ ಇಲ್ಲಿ ಭಾಗವಹಿಸುವ ಮಕ್ಕಳೆಲ್ಲರೂ ಪ್ರತಿಬಾವಂತರೆ ಎಂದು ಭಾವಿಸಿಕೊಳ್ಳಬೇಕು, ನಮ್ಮವರೆ ಆದ ರುಷಿ ಸುರಕ್‌ರವನ್ನು ಶಿಗ್ಗಾವಿಗೆ ಕರೆಸುವ ಪ್ರಯತ್ನಿಸುತ್ತೇನೆ, ವಾರದ ಅನ್ನ ಊಟಮಾಡಿ, ಶಿಕ್ಷಣ ಕಲಿತು, ಬೆಳೆಯಬೇಕಾದರೆ ಶಿಗ್ಗಾವಿಯ ಜನತೆ ನನ್ನ ಪ್ರತಿಭೆಯನ್ನು ಗುರುತಿಸಿ ನನ್ನನ್ನು ಈ ಮಟ್ಟಕ್ಕೆ ಬೆಳಸಿದರು. ಎಂದು ಹಳೆ ನೆನಪುಗಳನ್ನು ಮೆಲಕು ಹಾಕಿದರು.
ಹಾವೇರಿಯ ಡಯಟ್ ಪ್ರಾಂಶುಪಾಲರಾದ ಜಯಶ್ರೀ ಕಾರೆಕರ ಮಾತನಾಡಿ ಪ್ರತಿಭೆ ಎಂಬುದು ಒಂದರಲ್ಲಿಯೇ ಇಲ್ಲ, ಅದು ಎಲ್ಲ ರಂಗಗಳಲ್ಲಿಯೂ ಇದೆ ಸಾಧನೆ ಮಾಡುವ ಮನಸ್ಸು ಮುಖ್ಯ ಅದನ್ನ ಶಿಕ್ಷಕರಾದವರು ಅರಿತು ಗುರುತಿಸಬೇಕು, ಸಾಂಸ್ಕೃತಿಕ ಕಾರ್ಯಕ್ರಮ ನಿಂತಿರುವುದು ಚಪ್ಪಾಳೆಮೇಲೆ ಅದ್ದರಿಂದ ಎಲ್ಲಾ ಮಕ್ಕಳಿಗೆ ಸ್ಪೂರ್ತಿ ಪ್ರೋತ್ಸಾಹ ಕೊಡಬೇಕು, ನಮ್ಮ ಹಾವೇರಿ ಜಿಲ್ಲೆಯ 5 ಮಕ್ಕಳು ಇನಸ್ಪೈರ್ಡ ಅವಾರ್ಡ ಸ್ಪರ್ದೆಯಲ್ಲಿ ಭಾಗವಹಿಸಿ ದಿಲ್ಲಿಯಲ್ಲಿ ಹಾವೇರಿ ಹೆಸರನ್ನು ಬೆಳಗಿದ್ದಾರೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ ಮಾತನಾಡಿ ಮಕ್ಕಳ ದೈತ್ಯ ಪ್ರತಿಭೆಯನ್ನು ಹೊರತೆಗೆಯಲು ಮಾಡುತ್ತಿರುವ ಕಾರ್ಯಕ್ರಮ ಇದಾಗಿದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಈ ಕಾರ್ಯಕ್ರಮ ಪೂರಕವಾಗಿದೆ. ಮಗುವಿನಲ್ಲಿ ಹುದುಗಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಾಗಿದೆ. 1-4 , 5-7, 8-10 ಗುಂಪುಗಳಾಗಿ ಮಾಡಿ 58 ವಿವಿಧ ಸ್ಪರ್ದೆಗಳನ್ನು ಇಂದು ಹಮ್ಮಿಕೊಂಡಿದ್ದೇವೆ, ನಿಜವಾದ ಪ್ರತಿಭಾನ್ವಿತ ಮಕ್ಕಳನ್ನು ನಾವು ಇಂದು ಆಯ್ಕೆಮಾಡಿ ಜಿಲ್ಲಾಮಟ್ಟ, ರಾಜ್ಯಮಟ್ಟಕ್ಕೆ ಕಳಿಸಬೇಕಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ ಮಾತನಾಡಿದರು, ಕಾರ್ಯಕ್ರಮದಲ್ಲಿ ಪುರಸಭೆ ಅದ್ಯಕ್ಷೆ ರೂಪಾ ಬನ್ನಿಕೊಪ್ಪ, ಮುಖ್ಯಾಧಿಕಾರಿ ಜಗದೀಶ್ ವಾಯ್. ಕೆ. ಶೇಕವ್ವ ವಡ್ಡರ, ಅಶೋಕ ಕುಂಬಾರ, ಹೇಮಪ್ಪ ರೆಡ್ಡಿ, ಪ್ರಾಚಾರ್ಯ ಎಸ್ ಎಚ್ ಹಾವೇರಿ, ಶ್ರೀನಿವಾಸ ಹೊಸಮನಿ, ಎಸ್. ಎನ್. ಮುಗಳಿ, ಎ ಎಫ್ ಹೊಸಮನಿ, ಗುರುರಾಜ, ಹುಚ್ಚಣ್ಣವರ, ವೀರಣ್ಣ ಬಡ್ಡಿ, ಮಂಜುನಾಥ ಯಲಿಗಾರ, ರವಿ ಮಹಾಂತಶೆಟ್ಟರ್, ರಾಜಶೇಖರ ಹೆಸರೂರ, ಪಿ ಎನ್ ಬಾರಕೇರ, ಎಂ ಎಂ ದೇವಕ್ಕಿಗೌಡ್ರ, ಬಿ ಡಿ ಮಳಗಿ, ಎಚ್ ಎಚ್ ರಟ್ಟಿಹಳ್ಳಿ, ಬಿ ವಾಯ್ ಉಪ್ಪಾರ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸಂಸ್ಥೆಗಳ ಸದಸ್ಯರು ಮಕ್ಕಳು, ಪಾಲಕರು ಇದ್ದರು.
ಬಾಕ್ಸ್ ಸುದ್ದಿ : ಸವಾಂರ್ಗೀಣ ಪ್ರಗತಿಯೇ ಶಿಕ್ಷಣವಾಗಿದ್ದು ಶಿಕ್ಷಣದಲ್ಲಿ ಶಿಕ್ಷಕರ ಮಹತ್ವವನ್ನು ಮೊದಲು ಶಿಕ್ಷಕರಾದವರು ಅರಿತರಬೇಕು, ಸಂಸ್ಕಾರ ಮತ್ತು ಸಂಸ್ಕರಣೆಯೊಂದಿಗೆ ಶಿಕ್ಷಣ ಇರಬೇಕು ಅಲ್ಲದೇ ಪ್ರತಿಭೆಗೆ ತಕ್ಕಂತೆ ಶಿಕ್ಷಣವನ್ನು ಶಿಕ್ಷಕರಾದವರು ನೀಡಬೇಕು, ವಿಶೇಷತೆ ಎಂಬುದನ್ನ ಹುಡುಕಿದರೆ ಸಾಲದು, ಅದನ್ನು ತಿಳಿದಿರಬೇಕು.
ಜಯಶ್ರೀ ಕಾರೆಕರ
ಹಾವೇರಿಯ ಡಯಟ್ ಪ್ರಾಂಶುಪಾಲೆ