ಸೆ.15ರಂದು ತಾಲೂಕಾ ಕುರುಬ ಸಮಾಜದ ಬೃಹತ್ ಸಭೆ
ಮುದ್ದೇಬಿಹಾಳ ??: ತಾಲೂಕಿನ ಕುರುಬ ಸಮಾಜದ ಸಮಗ್ರ ಏಳಿಗಾಗಿ ಹಾಗೂ ವಿವಿಧ ಕುಂದು ಕೊರತೆ ಆಲಿಸಲು ಮತ್ತು ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲು ಇದೇ ದಿ, 15 ಗುರುವಾರದಂದು ಪಟ್ಟಣದ ಆಲಮಟ್ಟಿ ರಸ್ತೆ ಮಾರ್ಗದಲ್ಲಿರುವ ಮದರಿ ಕಲ್ಯಾಣ ಮಂಟಪದಲ್ಲಿ ತಾಲೂಕಾ ಕುರುಬ ಸಮಾಜದ ಬೃಹತ್ ಸಭೆ ನಡೆಸಲಾಗಿದೆ ಎಂದು ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯ ಅಹಿಲ್ಯಾದೇವಿ ಹೋಳ್ಕರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈಗಾಗಲೇ ತಾಲೂಕಿನಲ್ಲಿ 45ಸಾವಿರಕ್ಕಿ ಹೆಚ್ಚು ಸಂಕ್ಯೆಯಲ್ಲಿ ಕುರುಬ ಸಮಾಜದವರಿದ್ದು. ರಾಜಕೀಯವಾಗಿ ಸಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದ ಸಮಾಜಗಳಲ್ಲಿ ಒಂದಾಗಿದೆ. ಅದರಂತೆ ರಾಜ್ಯ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ಆಹ್ವಾನಿ ನೀಡಿ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮತ್ತು ತಾಲೂಕಿನ ಬಿದರಕುಂದಿ ಗ್ರಾಮದಲ್ಲಿರುವ ಸಂಗೋಳ್ಳಿ ರಾಯಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಉದ್ದೆಶವಿದ್ದು.
ಜೊತೆಗೆ ಪ್ರಸ್ತುತ ರಾಜಕೀಯ ರಾಜಕೀಯ ವಿದ್ಯಮಾನಗಳ ಕುರಿತು ಸಮಾಜ ಬಾಂಧವರ ಸಮಕ್ಷಮದಲ್ಲಿ ವಿಶೇಷ ಚರ್ಚಿಸಲಾಗುವುದು ಈ ವೇಳೆ ಸುಮಾರು 12 ಸಾವಿರಕ್ಕಿಂತ ಹೆಚ್ಚು ಬಾಗವಹಿಸುವ ನೀರೀಕ್ಷೇ ಇದ್ದು ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಬಾಗವಹಿಸುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಈ ವೇಳೆ ಪಿಎಲ್ ಡಿ ಬ್ಯಾಂಕ ಅಧ್ಯಕ್ಷ ಬಿ ಕೆ ಬಿರಾದಾರ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಮುಖಂಡರಾದ ನಾಗಪ್ಪ ರುಢಗಿ, ಮಲ್ಲಣ್ಣ ಕೆಸರಟ್ಟಿ, ಬಸವರಾಜ ಶಿರೋಳ, ನ್ಯಾಯವಾದಿ ಬಿ ವೈ ಮೇಟಿ, ಬಸಣ್ಣ ಜಾವಡಗಿ, ಹಣಮಂತ್ರಾಯ ಸರೂರ, ಸಂತೋಷ ನಾಯ್ಕೋಡಿ, ನ್ಯಾಯವಾದಿ ಎಲ್ ಎಸ್ ಮೇಟಿ, ರವಿ ಜಗಲಿ ಪರುಶುರಾಮ ನಾಗರಬೆಟ್ಟ, ಸುನೀಲ ಬಿಸ್ನಾಳ ಸೇರಿದಂತೆ ಹಲವರು ಇದ್ದರು.