ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿ
ಲೋಕದರ್ಶನ ವರದಿ
ರೋಣ 03: ಉಣಚಗೇರಿ ಗ್ರಾಮದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಯುವಕ ಮಂಡಳ ಇವರ ಸಂಯುಕ್ತ ಆಶ್ರಯದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ತಾಲೂಕಾ ಮಟ್ಟದ ಯುವಕರ ಕಬಡ್ಡಿ ಪಂದ್ಯಾವಳಿ ನಡೆಯಿತು.
ಈ ಕಾರ್ಯಕ್ರಮದ ಉದ್ಥಾಟನೆಯನ್ನು ಬಸವಂತಪ್ಪ ಹೆಚ್. ತಳವಾರ ಮಾಜಿ ಅಧ್ಯಕ್ಷರು ಗದಗ ಜಿಲ್ಲಾ ಬಿ.ಜೆ.ಪಿ. ಎಸ್.ಟಿ. ಮೋರ್ಚಾ ಹಾಗೂ ರೋಣ ತಾಲೂಕಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರು ಉದ್ಘಾಟಿಸಿ ಮಾತನಾಡಿ ಅವರು ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಯು ನಶಿಸಿ ಹೋಗಿದೆ. ಪುನಃಶ್ಚೇತನ ಮಾಡಲಿಕ್ಕೆ ಗ್ರಾಮೀಣ ಯುವಕರು ಕಬಡ್ಡಿ ಪಂದ್ಯಾವಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿದ್ದಾರೆ. ಕ್ರೀಡೆಯು ದೈಹಿಕವಾಗಿ, ಮಾನಸಿಕವಾಗಿ ದೇಹದ ಆರೋಗ್ಯದ ಬಗ್ಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಗೊಸ್ಕರವಾಗಿ ಕ್ರೀಡೆಯನ್ನು ನಡೆಸಬೇಕೆಂದು ಯುವಕರಿಗೆ ಕರೆ ನೀಡಿದರು.
ವಾಲ್ಮೀಕಿ ಜಯಂತಿ ಅಂಗವಾಗಿ ಕ್ರೀಡಾಪಟುಗಳು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರಿ ಬಹಳ ಸಂತಸವಾಗಿದೆ ಎಂದರು. ಕ್ರೀಡೆಯಲ್ಲಿ ಸೋಲು ಗೆಲುವು ಇರುವದು ಸಹಜ ಸೋತವರು ನಮ್ಮವರೇ, ಗೆದ್ದವರು ನಮ್ಮವರೇ ಎಲ್ಲರನ್ನೂ ಸಮನಾಗಿ ಕಾಣಬೇಕೆಂದು ಗ್ರಾಮೀಣ ಪ್ರದೇಶದ ಯುವಕರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಜಯಂತಿಯ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಿದ್ದೀರಿ. ಮಹರ್ಷಿ ವಾಲ್ಮೀಕಿಯ ತತ್ವದರ್ಶಗಳು ಇಂದಿಗೂ ಪ್ರಸ್ತುತವಾಗಿದೆ. ರಾಮಾಯಣ ಕೇವಲ ಕಥೆಯಲ್ಲ, ಅದರಲ್ಲಿ ಬರುವ ಪಾತ್ರಗಳು ಆದರ್ಶಮಯವಾಗಿವೆ. ಮಹಾಕಾವ್ಯ ರಚಿಸುವ ಮೂಲಕ ವಿಶ್ವಕ್ಕೆ ಭಾರತದ ಪ್ರಾಚೀನ ಪರಂಪರೆಯ ಕುರಿತು ಪ್ರಚಾರ ಪಡಿಸಿದ ವಾಲ್ಮೀಕಿ ಸೇವೆಯೇ ದೊಡ್ಡದು.ವಾಲ್ಮೀಕಿ ವಂಶದಲ್ಲಿರುವ ನಾಯಕ ಸಮಾಜ ಎಂದು ಸ್ವಾಭಿಮಾನ ಸಮಾಜವಾಗಿದೆ. ನಾಯಕ ಸಮಾಜದಲ್ಲಿ ವಾಲ್ಮೀಕಿಯಿಂದ ಹಿಡಿದು ಕುಮಾರರಾಮ, ವೆಂಕಟೆಪ್ಪ ನಾಯಕರಂಥ ಮಹಾನ ರಾಜರು ಆಳಿಹೋಗಿದ್ದಾರೆ. ಈ ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಉನ್ನತವಾಗಬೇಕು ಅವರ ಮೀಸಲಾತಿ ಬೇಡಿಕೆಗೆ ಶೀಘ್ರವೇ ಸರ್ಕಾರ ಸ್ಪಂದಿಸಲಿದೆ ಎಂದು ಸಭೆಯಲ್ಲಿ ಮಾತನಾಡಿದರು.
ಈ ಸಭೆಯಲ್ಲಿ ಪ್ರಕಾಶ ತಳವಾರ, ಎಸ್ಎಲ್ ಹುಡೇದ, ಬಿ ಕೆ ಪೂಜಾರ, ವಿರುಪಾಕ್ಷಪ್ಪ ಪಟ್ಟಣಶೆಟ್ಟಿ, ಭೀಮಪ್ಪ ತಳವಾರ, ಶೇಖರಗೌಡ ಪಾಟೀಲ, ಈರಣ್ಣ ತಳವಾರ, ಪರಶುರಾಮ ಕಲಾಲಬಂಡಿ, ಹನಮಂತಗೌಡ ಪಾಟೀಲ, ಶಿವನಗೌಡ ಪಾಟೀಲ, ವೀರೇಶ ಹುಬ್ಬಳ್ಳಿ, ಶರಣಪ್ಪ ಹಿರೇಕೊಪ್ಪ, ರಫಿ ಹವಾಲ್ದಾರ, ಅಪ್ಪಾಜಿರಾವ್ ಗಾಯಕವಾಡ ಮುಂತಾದವರು ಸಭೆಯಲ್ಲಿ ಇದ್ದರು.