ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 29: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ 75ನೇ ಸ್ವತಂತ್ರ್ಯ ಅಮೃತ್ ಮಹೋತ್ಸವ ಆರೋಗ್ಯ ಕರ್ನಾಟಕದ ಅಡಿಯಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಆರೋಗ್ಯ ಮೇಳ ನಡೆಯಿತು.
ಶಾಸಕ ಎಸ್.ಭೀಮಾನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಣ ಒಂದಿದ್ದರೆ ಎಲ್ಲವನ್ನು ಪಡೆಯಲಾಗದು, ಮೊದಲು ಆರೋಗ್ಯದಲ್ಲಿ ಶ್ರೀಮಂತಿಕೆ ಗಳಿಸಿ, ಆರೋಗ್ಯ ಮೇಳದಲ್ಲಿ ಕೇವಲ ಆರೋಗ್ಯ ತಪಾಸಣೆಗೆ ಒಂದೇ ಸೀಮಿತವಾಗಿರದೇ ಆಂಗಾಂಗದಾನ, ರಕ್ತದಾನ, ನೇತ್ರದಾನ ಶಿಬಿರ ಏರಿ್ಸದ್ದು ಶ್ಲಾಘನೀಯ ಸಂಗತಿಯಾಗಿದೆ, ಕ್ಷೇತ್ರದಲ್ಲಿ ಆರೋಗ್ಯ ಹಾಗೂ ಶಿಕ್ಷಞನಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ ತಾಲೂಕಾಸ್ಪತ್ರೆಗೆ 15.31 ಲಕ್ಷ ಶಾಸಕರ ಅನುದಾನದಲ್ಲಿ ಹೈಟೆಕ್ ಸ್ಫರ್ಶ ನೀಡಲಾಗಿದೆ, ಪ್ರತಿಯೊಮದು ಆಸ್ಪತ್ರೆಗೆ ಅಂಬುಲೆನ್ಸ್ ಸೆರಿದಂತೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಿ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲಾಗಿದೆ.
ಸಾರ್ವಜನಿಕರಿಗೆ ಮತ್ತು ಆಸ್ಪತ್ರೆಗಳಿಗೆ ಸೇತುವೆಯಾಗಿರುವ ಮತ್ತು ಸಾಂಕ್ರಾಮಿಕ ರೋಗವಾದ ಕೋವಿಡ್ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ವೇತನ ಸೇರಿದಂತೆ ಸೌಲಭ್ಯಗಳ ಕೊರತೆ ಕಾಡುತ್ತಿದ್ದು ಅವುಗಳನ್ನು ನಿವಾರಿಸಲು ಯಾವುದೇ ಸರಕಾರ ವಿರಲಿ ಇಚ್ಛಾಶಕ್ತಿ ಅವಶ್ಯಕವಿದೆ, ತಮ್ಮ ಅಂಗಾಂಗಳನ್ನು ದಾನ ಮಾಡಿ ಮತ್ತೊಬ್ಬರಿಗೆ ಜೀವ ದಾನಕ್ಕೆ ಮುಂದಾದ ಮಹಿಳೆಯೋರ್ವರನ್ನು ಶಾಸಕರು ಶ್ಳಾಘಿಸಿ ಇಂತಹ ಇಂತಹ ಅಭಿಪ್ರಾಯ ಹೊಂದಿರುವವರು ಮತ್ತೊಬ್ಬರಿಗೆ ಅನುಕರಣೀವಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ತಾಲೂಕು ವೈದ್ಯಾಧಿಕಾರಿ ಶಿವರಾಜ್ ಮಾತನಾಡಿ ಈ ಆರೋಗ್ಯ ಮೇಳ ಬೃಹತ್ ಪರಿಣಾಮ ಬೀರುವಲ್ಲಿ ಪ್ರತಿಯೊಬ್ಬರ ಪಾತ್ರ ಹಿರಿಯದಾಗಿದೆ, ಬೆರಳೆಣಿಕೆಯಷ್ಟು ಖಾಯಿಲೆಗಳಿಗೆ ಮೇಳ ಸೀಮಿತವಾಗದೇ ಅನೇಕ ತಜ್ಞರು ಮೇಳದಲ್ಲಿ ಭಾಗವಹಿಸಿದ್ದು ತಾಲೂಕಿನ ಸಾರ್ವಜನಿಕರು ಬೆಳೆಗ್ಗಯಿಂದಲೇ ಚಿಕಿತ್ಸೆಗೆ ಬಂದಿದ್ದು ಆರೋಗ್ಯ ಮೇಳದ ಮುಖ್ಯ ಉದ್ದೇಶ ಸಾಕಾರವಾಗಿಒದೆ ಎಂದರು.
ಈ ಸಂಧರ್ಭದಲ್ಲಿ ತಹಶಿಲ್ದಾರ್ ಶರಣಮ್ಮ, ಡಾ.ಸಲೀಂ, ಡಾ.ಜಂಬಯ್ಯ, ಡಾ.ಶಣ್ಮುಖಾನಾಯ್ಕ್, ಸಿಎಂಒ ಶಂಕರನಾಯ್ಕ್, ಇಒ ರಮೇಶ್ ಮಹಲಿಂಗಾಪುರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್, ಪ್ರಾಂಶುಪಾಲ ಸತೀಶ್ ಪಾಟೀಲ್,ಪುರಸಭೆ ಸದಸ್ಯ ಮರಿರಾಮಪ್ಪ, ಗಣೇಶ್ ಲಮಾಣಿ, ಬಿಇಒ ಎಂ.ಸಿ.ಆನಂದ ಸೇರಿದಂತೆ ಇನ್ನಿತರರು ಇದ್ದರು.