ಮಹಲಿಂಗಪುರ

ಚುನಾವಣಾ ನೀತಿ ಸಂಹಿತೆ ಜಾರಿಗೆ ಮುನ್ನ ತಾಲೂಕು ಘೋಷಣೆ: ಸಿದ್ದು ಸವದಿ ಭರವಸೆ ; ಕೊನೆಯ ಕ್ಷಣದಲ್ಲಿ ದುಡುಕದಿರಲು ಕಿವಿಮಾತು.

ಚುನಾವಣಾ ನೀತಿ ಸಂಹಿತೆ ಜಾರಿಗೆ ಮುನ್ನ ತಾಲೂಕು ಘೋಷಣೆ: ಸಿದ್ದು ಸವದಿ ಭರವಸೆ ; ಕೊನೆಯ ಕ್ಷಣದಲ್ಲಿ ದುಡುಕದಿರಲು ಕಿವಿಮಾತು.

ಮಹಾಲಿಂಗಪುರ: ಚುನಾವಣಾ ನೀತಿ ಸಂಹಿತೆ ಜಾರಿಗೆ ಮುನ್ನ ಮುಖ್ಯಮಂತ್ರಿಗಳು ಮಹಾಲಿಂಗಪುರ ತಾಲೂಕು ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಹಾಗಾಗಿ ಫಲ ಕೊಡುವ ಸಮಯದಲ್ಲಿ ದುಡುಕದೆ ಶಾಂತವಾಗಿ ಸಹಕರಿಸಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.  

315 ನೇ ದಿನದಲ್ಲಿ ನಡೆಯುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟ ಮುಷ್ಕರ ವೇದಿಕೆಗೆ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ಐದಾರು ಬಾರಿ ತಾಲೂಕು ಹೋರಾಟದ ನಿಯೋಗವನ್ನು ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿಸಿದ್ದೇನೆ ಅದೂ ಅಲ್ಲದೆ ಬೆಳಗಾವಿ ಅಧಿವೇಶನದಲ್ಲಿಯೂ ಸಹ ಹೋರಾಟಗಾರ ಮುಖಂಡರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿ ತಾಲೂಕು ಘೋಷಣೆಯ ಅವಶ್ಯಕತೆ ಬಗ್ಗೆ ವಿವರಿಸಿದ್ದೇವೆ, ನಾನೂ ಸಹ ಸಾಕಷ್ಟು ಬಾರಿ ಮುಖ್ಯಮಂತ್ರಿಗಳಿಗೆ ತಾಲೂಕು ಘೋಷಣೆ ಮಾಡುವ ಅನಿವಾರ್ಯತೆ ಬಗ್ಗೆ  ವಿವರವಾಗಿ ತಿಳಿಸಿದ್ದೇನೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದರೊಳಗಾಗಿ ಮಹಾಲಿಂಗಪುರ ತಾಲೂಕು ಘೋಷಣೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಫೆ. 26 ಕ್ಕೆ ಸಸಾನಟ್ಟಿ ಏತ ನೀರಾವರಿ ಯೋಜನೆಯ ಉದ್ಘಾಟನೆಗೆ ಆಗಮಿಸಲಿರುವ ಸಂದರ್ಭದಲ್ಲಿ ಅವರೊಂದಿಗೆ ನಿಮ್ಮನ್ನು ಭೇಟಿ ಮಾಡಿಸಿ ಅವರಿಂದಲೇ ತಾಲೂಕು ಘೋಷಣೆ ಬಗ್ಗೆ ಹೇಳಿಸುತ್ತೇನೆ ಹಾಗಾಗಿ 315 ದಿನಗಳವರೆಗೆ ಶಾಂತ ರೀತಿಯಿಂದ ಹೋರಾಟ ಮಾಡಿದ್ದೀರಿ ಈಗ ಕೊನೆ ಕ್ಷಣದಲ್ಲಿ ದುಡಿಕಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಮಾಡಬೇಡಿ ಮುಖ್ಯಮಂತ್ರಿಗಳು ಹೇಳಿದಂತೆ ಅವರ ಮೇಲೆ ಭರವಸೆ ಇಟ್ಟು ತಾಳ್ಮೆಯಿಂದ ಕಾಯಲು ತಿಳಿಸಿ, ನಿಷ್ಪಕ್ಷಪಾತ ತಾಲೂಕು ಹೋರಾಟಕ್ಕೆ ತಮ್ಮ ಬೆಂಬಲವಿದೆ ಹಾಗಾಗಿ ಹೋರಾಟದ ವೇದಿಕೆಯನ್ನು ಯಾವುದೇ ರಾಜಕೀಯ ಲಾಬಿಗೆ ಬಳಸದಿರಲು ತಿಳಿಸಿದರು.  

ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಈರ​‍್ಪ ದಿನ್ನಿಮನಿ, ಶೇಖರ ಅಂಗಡಿ, ಮಲ್ಲಪ್ಪ ಸಿಂಗಾಡಿ, ಚನ್ನಬಸು ಹುರಕಡ್ಲಿ, ಶ್ರೀಮಂತ ಹಳ್ಳಿ, ಮಾರುತಿ ಖರೋಶಿ,  ಶಿವಾನಂದ ಅಂಗಡಿ, ಚನ್ನು ದೇಸಾಯಿ, ಭೀಮಪ್ಪ ಸಸಾಲಟ್ಟಿ, ಎಸ್‌. ಎಂ. ಪಾಟೀಲ,ಪರ​‍್ಪ ಬ್ಯಾಕೋಡ, ವೀರೇಶ ಆಸಂಗಿ, ಶಿವಲಿಂಗ ಕೌಜಲಗಿ, ಪರ​‍್ಪ ಸತ್ತಿಗೇರಿ, ಬಸವರಾಜ ನಾಗನೂರ, ಹನಮಂತ ಜಮಾದಾರ, ಸಿದ್ದಪ್ಪ ಶಿರೋಳ, ರಫೀಕ್ ಮಾಲದಾರ, ಬಸವರಾಜ ಪರೀಟ ಇತರರಿದ್ದರು. 


ಸುದ್ದಿ ಓದಿ