ಮಹಲಿಂಗಪುರ

ಚಿಮ್ಮಡ ಗ್ರಾಮದಲ್ಲಿ ತಾಲ್ಲೂಕು ಕಸಾಪ ಸಮ್ಮೇಳನ

ಚಿಮ್ಮಡ ಗ್ರಾಮದಲ್ಲಿ ತಾಲ್ಲೂಕು ಕಸಾಪ ಸಮ್ಮೇಳನ

ಮಹಾಲಿಂಗಪುರ 07:  ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಬಕವಿ-ಬನಹಟ್ಟಿ ಮೂರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿಮ್ಮಡ ಗ್ರಾಮದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. 

ಚಿಮ್ಮಡ ಗ್ರಾಮದ ವಿರಕ್ತಮಠದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಸಮ್ಮೇಳನ ದಿನಾಂಕ ಪ್ರಕಟಿಸುವಕುರಿತು ತಿಳಿಸಲಾಯಿತು. 

ವಿರಕ್ತಮಠದಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮ್ಮೇಳನ ಹಮ್ಮಿಕೊಳ್ಳುವ ಬಗ್ಗೆ, ಅದರಸಿದ್ಧತೆಗಳು, ರೂಪುರೇಷೆಗಳು, ಸಂಪನ್ಮೂಲ ಕ್ರೋಢೀಕರಣದಬಗ್ಗೆ ಗ್ರಾಮದ ಹಿರಿಯರು ಹಾಗೂ ಪ್ರಮುಖರ ಸಭೆ ನಡೆಸಲಾಗುವುದುಎಂದರು. 

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಪರಿಷತ್ತು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ಮುನ್ನಡೆಸಿಕೊಂಡು ನಡೆದಿದೆ.ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಬೇಕೆಂಬ ಸದುದ್ದೇಶದಿಂದ ಚಿಮ್ಮಡಗ್ರಾಮದಲ್ಲಿ ಪೂಜ್ಯರ, ಹಿರಿಯರ ಮಾರ್ಗದರ್ಶನದಲ್ಲಿ ನಡೆಸಲಾಗುವುದು.ಸಮ್ಮೇಳನ ಆಯೋಜಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು. 

ಪತ್ರಕರ್ತಮಲ್ಲಿಕಾರ್ಜುನ ಹೆಗ್ಗಳಗಿ, ಹಿರಿಯರಾದ ಆರ್‌.ವೈ.ಮುಗಳಖೋಡ, ಪ್ರಭು ಪಾಲಭಾವಿ, ಹಿರಿಯ ಸಾಹಿತಿ ಎಂ.ಎಸ್‌.ಬದಾಮಿ, ಕಸಾಪ ತಾಲ್ಲೂಕು ಅಧ್ಯಕ್ಷ ಮ.ಕೃ.ಮೇಗಾಡಿ ಮಾತನಾಡಿದರು. 

ಈ ಸಂದರ್ಭದಲ್ಲಿ ಪುಂಡಲೀಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಬಿ.ಎಸ್‌.ಪಾಟೀಲ, ರಾಮಣ್ಣ ಬಗನಾಳ,ಪ್ರಕಾಶ ಪಾಟೀಲ,ಪ್ರಭು ಮುಧೋಳ, ಮನೋಜ ಹಟ್ಟಿ, ಅವ್ವನಪ್ಪ ಮುಗಳಖೋಡ, ಜಿ.ಎಸ್‌.ವಡಗಾಂವಿ, ಮೃತ್ಯುಂಜಯ ರಾಮದುರ್ಗ, ಈರಣ್ಣ ಗಣಮುಖಿ, ಬಿ.ಎಂ.ಮಟ್ಟಿಕಲ್ಲಿ, ಜಿ.ಎಸ್‌.ಗೊಂಬಿ, ಶರತ್ ಜಂಬಗಿ, ಮಲ್ಲು ತುಂಗಳ, ಇಲಾಹಿ ಜಮಖಂಡಿ, ಬಸವರಾಜ ಮೇಟಿ, ಗಂಗಾಧರ ಮೋಪಗಾರ ಉಪಸ್ಥಿತರಿದ್ದರು. 


ಸುದ್ದಿ ಓದಿ