ಸಿರುಗುಪ್ಪ

ತಾಲ್ಲೂಕು ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಮ್ಮೇಳನ

ತಾಲ್ಲೂಕು ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಮ್ಮೇಳನ

ಸಿರುಗುಪ್ಪ 18-   ಕೃಷಿ ಕೂಲಿಕಾರರ ಹಲವಾರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘವು ಸತತವಾಗಿ ಪ್ರಯತ್ನಿಸುತ್ತಿದೆ ಎಂದು ಎ ಐ ಎ ಡಬ್ಲ್ಯು ಯು ರಾಜ್ಯ ಉಪಾಧ್ಯಕ್ಷ ಗಂಗಾಧರಯ್ಯ ಸ್ವಾಮಿ ಹೇಳಿದರು. ತಾಲ್ಲೂಕಿನ ರಾರಾವಿ ಗ್ರಾಮದ ಬಾಳಪ್ಪ ತಾತಾ ದೇವಸ್ಥಾನ ಆವರಣದಲ್ಲಿ ಜರುಗಿದ ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಮುಖಂಡರಾದ ಬಸವರಾಜ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿರುಗುಪ್ಪ ತಾಲ್ಲೂಕಿನ ಕರ್ನಾಟಕ ಪ್ರಾಂತ್ಯ ಕೃಷಿಕೂಲಿಕಾರರ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು .ಇ ಆರ್ ಯಲ್ಲಪ್ಪ ಅಧ್ಯಕ್ಷರು, ಪಿ ಮಲ್ಲಯ್ಯ ಉಪಾಧ್ಯಕ್ಷರು, ವಿ ಗುರುಸ್ವಾಮಿ ಪ್ರಧಾನ ಕಾರ್ಯದರ್ಶಿ, ಲತೀಫ್  ಸಹ ಕಾರ್ಯದರ್ಶಿ , ಮಹಿಳಾ ಘಟಕದ ಅಧ್ಯಕ್ಷೆಯಾಗಿ ಹಂಡಿ ಈರಮ್ಮ, ಶಾಂತಮ್ಮ, ಕಾರ್ಯದರ್ಶಿ ಪದಾಧಿಕಾರಿಗಳಾಗಿ ಶಬ್ಬೀರ್, ಷಣ್ಮುಖ, ದುರುಗಮ್ಮ, ಶಂಕರ್, ಟಿ ಹುಲುಗಪ್ಪ, ಡಿ ಮಾಬುಸಾಬ್ ,ಮಲ್ಲಮ್ಮ ಅವರನ್ನು ಆಯ್ಕೆ ಮಾಡಲಾಯಿತು .

ಸುದ್ದಿ ಓದಿ